ತಿನ್ನಲು ಅನ್ನ ಸಿಗದೇ ಸಾಯುತ್ತೀರಿ! ಜಗ್ಗೇಶ್​ ತೀವ್ರವಾಗಿ ನೊಂದು ಹೀಗೆ ಶಾಪ ಹಾಕಿದ್ದು ಯಾರಿಗೆ?

ಕೊವಿಡ್​19 ಕಾರಣದಿಂದ ಉಂಟಾಗಿರುವ ಕಷ್ಟದ ಪರಿಸ್ಥಿತಿಯನ್ನೇ ಕೆಲವರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಜಗ್ಗೇಶ್​ ಮನಸ್ಸಿಗೆ ತುಂಬ ಬೇಸರ ಉಂಟು ಮಾಡಿದೆ.

ತಿನ್ನಲು ಅನ್ನ ಸಿಗದೇ ಸಾಯುತ್ತೀರಿ! ಜಗ್ಗೇಶ್​ ತೀವ್ರವಾಗಿ ನೊಂದು ಹೀಗೆ ಶಾಪ ಹಾಕಿದ್ದು ಯಾರಿಗೆ?
ನಟ ಜಗ್ಗೇಶ್​
Madan Kumar

|

Apr 25, 2021 | 7:59 AM

ಎಲ್ಲೆಲ್ಲೂ ಕೊರೊನಾ ವೈರಸ್​ ಹಾವಳಿ ಮಿತಿ ಮೀರಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಜನರು ಪರದಾಡುವಂತಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​ ಸಿಗುತ್ತಿಲ್ಲ. ಬೆಡ್​ ಸಿಕ್ಕರೆ ಔಷಧಿ ಇಲ್ಲ. ಆಕ್ಸಿಜನ್​ ಕೊರೆತೆಯೂ ಹೇಳತೀರದು. ಅದೂ ಸಾಲದೆಂಬಂತೆ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲು ಸಾಲುಗಟ್ಟಿ ನಿಲ್ಲಬೇಕಾದ ದುಸ್ಥಿತಿ. ಇಂಥ ಪರಿಸ್ಥಿತಿಯಲ್ಲೂ ಕೆಲವರು ಮಾನವೀಯತೆ ಮರೆತಿದ್ದಾರೆ. ಅಂಥವರ ವಿರುದ್ಧ ನಟ ಜಗ್ಗೇಶ್​ ಗುಡುಗಿದ್ದಾರೆ.

ಸಮಾಜದ ಆಗುಹೋಗುಗಳ ಬಗ್ಗೆ ಜಗ್ಗೇಶ್​ ಅವರು ಸೋಶಿಯಲ್​ ಮೀಡಿಯಾ​ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಈಗ ಕೊರೊನಾದಿಂದ ಎದುರಾಗಿರುವ ದುಸ್ಥಿತಿ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ. ಕೊವಿಡ್​19 ಕಾರಣದಿಂದ ಉಂಟಾಗಿರುವ ಕಷ್ಟದ ಪರಿಸ್ಥಿತಿಯನ್ನೇ ಕೆಲವರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಜಗ್ಗೇಶ್​ ಮನಸ್ಸಿಗೆ ತುಂಬ ಬೇಸರ ಉಂಟು ಮಾಡಿದೆ. ಈ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೊವಿಡ್ ಸಂತ್ರಸ್ತರು ನೊಂದು ಟಿವಿಯಲ್ಲಿ ಮಾತಾಡಿದ್ದು ನೋಡಿ ಸಂಕಟವಾಯ್ತು! ಆಸ್ಪತ್ರೆ, ಆಂಬುಲೆನ್ಸ್, ಔಷಧಿ ಅಂಗಡಿ, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ. ನೊಂದವರನ್ನು ಪೀಡಿಸಬೇಡಿ. ತಿನ್ನಲು ಅನ್ನ ಸಿಗದೇ ಸಾಯುತ್ತೀರಿ! ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ. ಸತ್ತರೆ ಹಣ ಬರೋಲ್ಲಾ. ಪಾಪಪುಣ್ಯ ಮಾತ್ರ ನಮ್ಮ ಹಿಂದೆ ಬರೋದು. ದೇವನೊಬ್ಬನಿರುವ ಎಲ್ಲ ನೋಡುತಿರುವ’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

‘ಇಂಥ ಸಮಯದಲ್ಲೇ ಇಂಥ ಕ್ರೂರಿಗಳು ಆ್ಯಕ್ಟೀವ್​ ಆಗೋದು. ಇಂಥ ಕೀಳು ಜನರಿಂದ ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ. ನಾನು ಇಷ್ಟು ನೊಂದದ್ದು ಇತ್ತೀಚಿನ ಈ ಕ್ರೂರ ವರ್ತನೆಯಿಂದ. ನನಗೆ ಅರಿಯದಂತೆ ಕೆಟ್ಟ ಬೈಗುಳ, ಕೋಪ ಅನಾವಶ್ಯಕ ಬರುತ್ತಿದೆ. ತಪ್ಪು ಎಂದು ನನ್ನ ನಾನೇ ಸರಿಪಡಿಸಿಕೊಳ್ಳುತ್ತಿರುವೆ. ಇಂಥ ದಿನಗಳ ಎಣಿಸಲಿಲ್ಲಾ ನಾನು. ಭಯಾನಕ’ ಎಂದು ಸರಣಿ ಟ್ಚೀಟ್​ ಮೂಲಕ ಜಗ್ಗೇಶ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಜಗ್ಗೇಶ್​ ತುಂಬ ಆಕ್ರೋಶ ಭರಿತವಾಗಿ ಟ್ಚೀಟ್​ ಮಾಡಿದ್ದರು. ‘2 ಬಂಧುಗಳು, 3 ಜನ ಸ್ನೇಹಿತರು ಕೊವಿಡ್​ ಬಂದು ಇಬ್ಬರು ನಿನ್ನೆ ಮೊನ್ನೆ ತೀರಿ ಹೋದರು. ಮೂರು ಜನ ನರಳುತ್ತಿದ್ದಾರೆ. ಎದ್ದು ಹೋಗಿ ಸಹಾಯ ಮಾಡಲು ಆಗದು. ಅಂತಹ ದರಿದ್ರ ಈ ಕಾಯಿಲೆ. ನನ್ನ ಬಂಧು ಹೆಣ ಸಂಸ್ಕಾರಕ್ಕೆ ನಾಯಿಗಳಂತೆ 30 ಸಾವಿರ ಹಣ ಪೀಕಿದ್ದಾರೆ ಆ್ಯಂಬುಲೆನ್ಸ್​ ಹಾಗೂ ಸ್ಮಶಾನದವರು. ಹೋಗಿ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು. ಇಂಥವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು!’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದರು. ಬಳಿಕ ಅದನ್ನು ಡಿಲೀಟ್​ ಮಾಡಿದರು.

ಇದನ್ನೂ ಓದಿ: ಜಗ್ಗೇಶ್​ ನಟನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಗುರುಗಳ ನಿಧನ! ಕಂಬನಿ ಮಿಡಿದ ನವರಸ ನಾಯಕ

ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

(Actor Jaggesh express his anger over Coronavirus bad situation)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada