Kishore: ‘ಮೈಂಡ್​ ಲೆಸ್​ ನನ್ನ ಪದವಲ್ಲ’: ‘ಕೆಜಿಎಫ್​’ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ನಟ ಕಿಶೋರ್​

| Updated By: ಮದನ್​ ಕುಮಾರ್​

Updated on: Jan 08, 2023 | 1:02 PM

Kishore | KGF Movie: ‘ಮೈಂಡ್ ಲೆಸ್ ನನ್ನ ಪದವಲ್ಲ. ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ’ ಎಂದು ನಟ ಕಿಶೋರ್​ ಪೋಸ್ಟ್​ ಮಾಡಿದ್ದಾರೆ.

Kishore: ‘ಮೈಂಡ್​ ಲೆಸ್​ ನನ್ನ ಪದವಲ್ಲ’: ‘ಕೆಜಿಎಫ್​’ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ನಟ ಕಿಶೋರ್​
ಕಿಶೋರ್, ಯಶ್
Follow us on

ಖ್ಯಾತ ನಟ ಕಿಶೋರ್​ ಅವರು ‘ಕೆಜಿಎಫ್​’ ಸಿನಿಮಾ (KGF Movie) ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಆ ಕುರಿತು ಅವರೀಗ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಶೋರ್​ ಅವರು ‘ಕೆಜಿಎಫ್’​ ಸಿನಿಮಾ ಬಗ್ಗೆ ಮಾತನಾಡಿದ್ದರು. ನಂತರ ಅವರ ಹೇಳಿಕೆಯನ್ನು ಇಟ್ಟುಕೊಂಡು ಬೇರೆ ಬೇರೆ ಮಾಧ್ಯಮಗಳು ವರದಿ ಪ್ರಕಟ ಮಾಡಿದ್ದವು. ಆದರೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರೀಗ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್​ ವೈರಲ್​ ಆಗಿದೆ. ‘ಕೆಜಿಎಫ್​’ ಚಿತ್ರದ ಕುರಿತು ತಾವು ‘ಮೈಂಡ್​ ಲೆಸ್​’ ಪದ ಬಳಕೆ ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಕಿಶೋರ್​ (Actor Kishore) ಅವರ ಈ ಪೋಸ್ಟ್​ಗೆ ಹಲವು ರೀತಿಯ ಕಮೆಂಟ್​ಗಳು ಬಂದಿವೆ.

‘ಮೈಂಡ್​ ಲೆಸ್​’ ಪದದ ವಿವಾದಕ್ಕೆ ಕಿಶೋರ್​ ಸ್ಪಷ್ಟನೆ:

‘ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ. ಆದರೂ ಅದಕ್ಕಾಗಿ ಕ್ಷಮೆಯಿರಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆ ಆಗಿದ್ದರೆ ತೃಪ್ತಿಯಿರುತ್ತಿತ್ತು. ಅದೇನೇ ಇರಲಿ ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ’ ಎಂದು ಕಿಶೋರ್​ ಬರಹ ಆರಂಭಿಸಿದ್ದಾರೆ.

ಇದನ್ನೂ ಓದಿ
Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
‘ಕೆಜಿಎಫ್​’ ಆದ್ಮೇಲೆ 30 ಸಿನಿಮಾದಲ್ಲಿ ನಟಿಸಿದ ಕೃಷ್ಣ ರಾವ್; ‘ಮುದುಕನ ಲವ್​​ಸ್ಟೋರಿ’ ಚಿತ್ರದಲ್ಲಿ ಹೀರೋ ಪಾತ್ರ
‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​

ಇದನ್ನೂ ಓದಿ: Kishore: ದೈವದ ಕುರಿತ ಪೋಸ್ಟ್​ನಿಂದ ಕಿಶೋರ್​ ಟ್ವಿಟರ್​ ಖಾತೆ ಸಸ್ಪೆಂಡ್​ ಆಗಿಲ್ಲ; ಅಸಲಿ ಕಾರಣ ತಿಳಿಸಿದ ನಟ

‘ಮೈಂಡ್ ಲೆಸ್ ನನ್ನ ಪದವಲ್ಲ. ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ. ‘ನೋಡಿಲ್ಲ’ದಿಂದ ‘ನೋಡುವುದಿಲ್ಲ’ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ. ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ. ಮಾಡಿದರೆ ತಪ್ಪೂ ಸಹ. ಆದರೆ ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು’ ಎಂದಿದ್ದಾರೆ ಕಿಶೋರ್​.

‘ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ. ಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ KGF ಕಲ್ಪನೆ ಬೇರೆಯೇ ಆದರೂ ಸಹ’ ಎಂದು ಕಿಶೋರ್​ ಅವರು ಬರಹ ಪೂರ್ಣಗೊಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.