AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ ಲೈವ್​ನಲ್ಲಿ ಹೇಳಿದ ಮಾತಿನಿಂದ ಇಂದಿನವರೆಗೆ ಆದ ಬೆಳವಣಿಗೆಗಳ ಮಾಹಿತಿಯ ಟೈಮ್​ಲೈನ್​..

ಉಪೇಂದ್ರ ಅವರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಡಿಯೋ ಮಾಡಿದ ಜಾಗವನ್ನು ಮಹಜರು ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಉಪೇಂದ್ರ ಲೈವ್ ಬಂದಾಗಿನಿಂದ ಇಂದಿನವರೆಗೆ ಏನೆಲ್ಲ ಆಯಿತು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಉಪೇಂದ್ರ ಲೈವ್​ನಲ್ಲಿ ಹೇಳಿದ ಮಾತಿನಿಂದ ಇಂದಿನವರೆಗೆ ಆದ ಬೆಳವಣಿಗೆಗಳ ಮಾಹಿತಿಯ ಟೈಮ್​ಲೈನ್​..
ಉಪೇಂದ್ರ
ರಾಜೇಶ್ ದುಗ್ಗುಮನೆ
|

Updated on: Aug 14, 2023 | 11:29 AM

Share

ನಟ ಉಪೇಂದ್ರ (Upendra) ಅವರು ವಿವಾದದ ಮೂಲಕ ಸುದ್ದಿ ಆಗುತ್ತಿದ್ದಾರೆ. ಅವರು ಬಳಕೆ ಮಾಡಿರುವ ಜಾತಿನಿಂದನೆ ಶಬ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಡಿಯೋ ಮಾಡಿದ ಜಾಗವನ್ನು ಮಹಜರು ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಉಪೇಂದ್ರ ಲೈವ್ ಬಂದಾಗಿನಿಂದ ಇಂದಿನವರೆಗೆ ಏನೆಲ್ಲ ಆಯಿತು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  1. ಆರನೇ ವರ್ಷದ ‘ಪ್ರಜಾಕೀಯ ದಿನ’ದ ಪ್ರಯುಕ್ತ ಆಗಸ್ಟ್ 12ರಂದು ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದರು. ಈ ವೇಳೆ ಅವರು ಜಾತಿ ನಿಂದನೆ ಶಬ್ದ ಬಳಕೆ ಮಾಡಿದ್ದಾರೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
  2. ಉಪೇಂದ್ರ ಹೇಳಿಕೆ ಅಂದೇ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆದವು. ಉಪೇಂದ್ರ ಅವರು ಕ್ಷಮೆ ಕೇಳಬೇಕು ಎಂದು ಅನೇಕರು ಪಟ್ಟು ಹಿಡಿದರು.
  3. ಉಪೇಂದ್ರ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಲೈವ್ ಬಂದಿದ್ದ ವಿಡಿಯೋನ ಅವರು ಡಿಲೀಟ್ ಮಾಡಿದರು. ಅಲ್ಲದೆ, ‘ನಾನು ಬಳಕೆ ಮಾಡಿದ ಗಾದೆಯಿಂದ ಅನೇಕರಿಗೆ ನೋವಾಗಿದೆ. ನಾನು ಕ್ಷಮೆ ಕೇಳುತ್ತೇನೆ’ ಎಂದು ಅವರು ಹೇಳಿದರು.
  4. ದಲಿತ ಸಂಘಟನೆಗಳು ಉಪೇಂದ್ರ ವಿರುದ್ಧ ದೂರು ದಾಖಲು ಮಾಡಿದರು. ಈ ದೂರನ್ನು ಆಧರಿಸಿ ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡರು.
  5. ಉಪೇಂದ್ರ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಉಪೇಂದ್ರ ವಿರುದ್ಧ ಕಠಿಣ ಕ್ರಮಕ್ಕೆ ಅನೇಕರು ಆಗ್ರಹಿಸಿದರು.
  6. ಮತ್ತೆ ಟ್ವೀಟ್ ಮಾಡಿದ ಉಪೇಂದ್ರ, ‘ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ.. ನಾನು ಎಂತಹ ಪರಿಸರದಲ್ಲಿ ಬೆಳೆದೆ.. ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ. ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ? ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ?’ ಎಂದು ಬರೆದುಕೊಂಡರು.
  7. ಪೊಲೀಸರು ಉಪೇಂದ್ರಗೆ ನೋಟಿಸ್ ಜಾರಿ ಮಾಡಿದ್ದಾರೆ. ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ