AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ನಿಂದನೆ ಆರೋಪ: ಉಪೇಂದ್ರ ಹೇಳಿದ್ದೇನು? ಆ ಮಾತಿನ ಹಿನ್ನೆಲೆ ಏನಿತ್ತು? ಉಪ್ಪಿಯ ಮಾತು ಯಥಾವತ್ತು ಇಲ್ಲಿದೆ

Upendra: ಜಾತಿ ನಿಂದನೆ ಆರೋಪದ ಮೇಲೆ ಉಪೇಂದ್ರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಉಪೇಂದ್ರರ ಯಾವ ಮಾತಿನಿಂದಾಗಿ ಅವರ ಮೇಲೆ ದೂರು ದಾಖಲಾಗಿದೆ? ಯಾಕೆ ಅವರು ಆ ವಾಕ್ಯ ಹೇಳಿದರು? ಹಿನ್ನೆಲೆ ಏನಿತ್ತು? ಇಲ್ಲಿದೆ ಮಾಹಿತಿ..

ಜಾತಿ ನಿಂದನೆ ಆರೋಪ: ಉಪೇಂದ್ರ ಹೇಳಿದ್ದೇನು? ಆ ಮಾತಿನ ಹಿನ್ನೆಲೆ ಏನಿತ್ತು? ಉಪ್ಪಿಯ ಮಾತು ಯಥಾವತ್ತು ಇಲ್ಲಿದೆ
ಉಪೇಂದ್ರ
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ|

Updated on:Aug 14, 2023 | 10:49 AM

Share

ನಟ ಉಪೇಂದ್ರ (Upendra) ವಿವಾದದಲ್ಲಿ ಸಿಲುಕಿ ಕೊಂಡಿದ್ದಾರೆ. ತಮ್ಮ ಪ್ರಜಾಕೀಯದ ಆರನೇ ವರ್ಷದ ವಾರ್ಷಿಕೋತ್ಸವದ ಸಂದರ್ಭ ಇನ್​ಸ್ಟಾಗ್ರಾಂ, ಫೇಸ್​ಬುಕ್​ನ ಲೈವ್ ವಿಡಿಯೋದಲ್ಲಿ ಮಾತನಾಡುತ್ತಾ ಬಳಸಿದ ಆಕ್ಷೇಪಾರ್ಹ ಶಬ್ದದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಉಪೇಂದ್ರ ವಿರುದ್ಧ ಬೆಂಗಳೂರಿನ ಎರಡು ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಜೊತೆಗೆ ರಾಮನಗರದಲ್ಲಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ, ಪ್ರತಿಕೃತ ದಹನವೂ ನಡೆದಿದೆ. ಉಪೇಂದ್ರ ಏಕೆ ಆ ವಾಕ್ಯ ಅಥವಾ ಗಾದೆಯನ್ನು ಹೇಳಿದರು? ಆ ವಾಕ್ಯ ಹೇಳುವ ಅವಶ್ಯಕತೆ ಏನಿತ್ತು? ಯಾವ ಹಿನ್ನೆಲೆಯಲ್ಲಿ ಉಪೇಂದ್ರ ಆ ಮಾತು ಬಳಸಿದರು? ಇಲ್ಲಿದೆ ಮಾಹಿತಿ.

ಆರನೇ ವರ್ಷದ ‘ಪ್ರಜಾಕೀಯ ದಿನ’ದ ಪ್ರಯುಕ್ತ ಲೈವ್ ಬಂದಿದ್ದ ಉಪೇಂದ್ರ ಲೈವ್​ನ ಆರಂಭದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಪ್ರಚಾರವಿಲ್ಲದೆ ತೋರಿರುವ ಗಮನಾರ್ಹ ಪ್ರದರ್ಶನವನ್ನು ಕೊಂಡಾಡಿದರು. ಬಳಿಕ ತಮ್ಮ ಪಕ್ಷದ ಮುಂದಿನ ರೂಪು ರೇಷೆ ಹೇಗಿರಬೇಕು? ಹೇಗೆ ನಾವು ಮುಂದುವರೆಯಬೇಕು ಎಂಬ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಕೋರಿದರು. ಸಲಹೆಗಳನ್ನು ಕಮೆಂಟ್ ಮಾಡುವಂತೆ ಕೋರಿದರು. ಆ ವೇಳೆಗೆ ಉಪೇಂದ್ರರ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂ ಲೈವ್ ಅನ್ನು 5000 ಮಂದಿ ನೋಡುತ್ತಿದ್ದರು.

ಮಾತು ಮುಂದುವರೆಸಿ ನಮ್ಮ ನಡುವೆ ಭಿನ್ನ ಪ್ರಕಾರದ ಜನರಿರುತ್ತಾರೆ ಎಂದು ವಿವರಿಸಿದ ಉಪೇಂದ್ರ, 25% ಜನ ನೇರವಾಗಿ ರಾಜಕೀಯದಲ್ಲಿದ್ದಾರೆ, ಇನ್ನು 20 ಅಥವಾ 25% ಜನ ಪರೋಕ್ಷವಾಗಿ ರಾಜಕೀಯದಿಂದ ಲಾಭ ಪಡೆದುಕೊಳ್ಳುತ್ತಿದ್ದಾರೆ ಅವರು ಇದ್ದಾರೆ ಅವರನ್ನು ಬದಲಾಗಿ ಎಂದು ಹೇಳಲಾಗದು, ಅವರು ಬದಲಾಗುವುದೂ ಇಲ್ಲ ಏಕೆಂದರೆ ಅವರ ಜೀವನವೇ ರಾಜಕೀಯದ ಮೇಲೆ ನಿಂತಿದೆ. ಇನ್ನು 25% ಜನ ಐಡಿಯಾಲಜಿಗಳ ಆಧಾರದಲ್ಲಿ ಸಮಾಜವನ್ನು ನೋಡುವ ಜನ ಇದ್ದಾರೆ. ಕೆಲವರು ಬಲಪಂಥೀಯ ಐಡಿಯಾಲಜಿ, ಕೆಲವರದ್ದು ಎಡಪಂಥೀಯ. ಈಗಂತೂ ಏನು ಮಾತನಾಡಿದರು ಇವ ಬಲ, ಇವ ಎಡ ಅನ್ನುತ್ತಿದ್ದಾರೆ ಮಧ್ಯದಲ್ಲಿರುವುದೇ ಕಷ್ಟವಾಗಿದೆ” ಎಂದರು ಉಪೇಂದ್ರ.

ಇದನ್ನೂ ಓದಿ:ಆಕ್ಷೇಪಾರ್ಹ ಹೇಳಿಕೆ, ನಟ ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳ ಪ್ರತಿಭಟನೆ, ದೂರು ದಾಖಲು

ಮಾತು ಮುಂದುವರೆಸಿ, ”ಆದರೆ ಈ ಮೇಲಿನ ವರ್ಗಕ್ಕೆ ಸೇರದ, ಆದರೆ ತಮ್ಮ ತೆರಿಗೆಗಳನ್ನು ಪಾವತಿಸಿಕೊಂಡು, ತಮ್ಮ ಜೀವನ, ಕುಟುಂಬಕ್ಕಾಗಿ ಕಷ್ಟಪಡುತ್ತಾ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುತ್ತಿರುವವರು ಸುಮಾರು 30% ಜನ ಇರಬಹುದು. ಇವರು ಯಾವುದೇ ಐಡಿಯಾಲಜಿಗಳಿಗೆ ಸಿಕ್ಕಿಕೊಳ್ಳದೆ ತಾವಾಯಿತು, ತಮ್ಮ ಜೀವನ, ತಮ್ಮ ಗುರಿ, ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಮಾತ್ರ ಗಮನ ಇರುವವರು ಜೊತೆಗೆ ಶುದ್ಧವಾದ ದೇಶಪ್ರೇಮವನ್ನು ಹೊಂದಿರುವವರು. ಇವರು ನಿಜವಾದ ಪರಿಶುದ್ಧ ಜನ. ಪರಿಶುದ್ಧವಾದ ಮನಸ್ಸು ಇವರದ್ದು, ಇಂಥಹವರ ಸಲಹೆಗಳು ಮೌಲ್ಯಯುತವಾಗಿರುತ್ತವೆ, ಇಂಥಹವರ ಸಲಹೆಗಳು ನಮಗೆ ಬೇಕಿದೆ. ಇವರು ಬೇಕಾಬಿಟ್ಟಿ ಸಲಹೆಗಳನ್ನು ಕೊಡುವುದಿಲ್ಲ. ಇವರು ಸುಮ್ಮನೆ ಅವಹೇಳನ ಮಾಡಲ್ಲ, ಮಾತನಾಡಬೇಕು ಎಂದು ಸುಮ್ಮನೆ ಮಾತನಾಡಲ್ಲ, ಅಂಥಹವರು ಇರುತ್ತಾರೆ,  ಏನೂ ಮಾಡೋಕಾಗಲ್ಲ. ಅಂಥಹದ್ದನ್ನು ಬಿಟ್ಟಾಕನ, ಅಂಥಹದ್ದನ್ನು ಓದೋದು ಬೇಡ ನಾವು. ಆದರೆ ಜನರನ್ನು ಪ್ರೀತಿಸುವವರು, ಸ್ವಚ್ಛವಾದ, ಮುಂದಿನ ತಲೆಮಾರಿಗೆ ಒಳ್ಳೆಯ ಆಡಳಿತ ವ್ಯವಸ್ಥೆ ಮಾಡಬೇಕೆಂಬ ಆಸಕ್ತಿಯಿರುವ ಆಶಾವಾದಿಗಳು ಕಮೆಂಟ್ ಮಾಡಿ, ಅದನ್ನು ನಾವು ಚರ್ಚಿಸುತ್ತೇವೆ, ಹಂಚಿಕೊಳ್ಳುತ್ತೇವೆ” ಎಂದರು. ಈ ವೇಳೆ ಅವರು ಆಕ್ಷೇಪಾರ್ಹ ಶಬ್ದ ಬಳಕೆ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Sun, 13 August 23