Yash Birthday: ರಾಕಿಂಗ್ ಸ್ಟಾರ್ ನಿಜವಾದ ಹೆಸರೇನು? ಯಶ್ ಎಂದು ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ

ಯಶ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಯಾವುದೇ ಹೊಸ ಘೋಷಣೆ ಆಗಿಲ್ಲ. ಬರ್ತ್​ಡೇ ದಿನ ಹೊಸ ಸಿನಿಮಾ ಘೋಷಣೆ ಆಗುವ ನಿರೀಕ್ಷೆ ಇದೆ.

Yash Birthday: ರಾಕಿಂಗ್ ಸ್ಟಾರ್ ನಿಜವಾದ ಹೆಸರೇನು? ಯಶ್ ಎಂದು ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ
ಯಶ್
Edited By:

Updated on: Jan 06, 2023 | 11:50 AM

ರಾಕಿಂಗ್ ಸ್ಟಾರ್ ಯಶ್​​ಗೆ (Yash) ಜನವರಿ 8 ಜನ್ಮದಿನ. ಅವರ ಬರ್ತ್​ಡೇನ ಅದ್ದೂರಿಯಾಗಿ ಆಚರಿಸಬೇಕು ಎಂಬುದು ಅವರ ಅಭಿಮಾನಿಗಳ ಆಲೋಚನೆ ಆಗಿತ್ತು. ಆದರೆ, ಇದಕ್ಕೆ ಅವಕಾಶ ನೀಡುತ್ತಿಲ್ಲ. ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬುದನ್ನು ಯಶ್ ಹೇಳಿದ್ದಾರೆ. ಹುಟ್ಟುಹಬ್ಬದ (Yash Birthday) ಸಂದರ್ಭದಲ್ಲಿ ಅವರ ಕುರಿತ ಹಲವು ಆಸಕ್ತಿಕರ ವಿಷಯಗಳು ಚರ್ಚೆ ಆಗುತ್ತಿವೆ. ಆ ಪೈಕಿ ಯಶ್ ಹೆಸರು ಕೂಡ ಒಂದು. ರಾಕಿಂಗ್​ ಸ್ಟಾರ್ ಮೂಲ ಹೆಸರು ಯಶ್ ಅಲ್ಲ.

ಯಶ್ ಅವರು ಹುಟ್ಟಿದ್ದು 1986ರಲ್ಲಿ. ಹಾಸನ ಅವರ ಹುಟ್ಟೂರು. ಅವರಿಗೆ ಕುಟುಂಬದವರು ನವೀನ್ ಕುಮಾರ್ ಎಂದು ಹೆಸರು ಇಟ್ಟಿದ್ದರು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ‘ಯ’ ಅಕ್ಷರದಿಂದ ಬರುವ ಹೆಸರನ್ನು ಇಡಲು ಸೂಚಿಸಲಾಗಿತ್ತು. ಈ ಕಾರಣಕ್ಕೆ ಯಶ್ ತಾಯಿ ನವೀನ್​​ಗೆ ಯಶ್ವಂತ್ ಎಂದು ಹೆಸರು ಇಟ್ಟರು. ಯಶ್ವಂತ್ ಎಂದರೆ ನಂಜುಂಡೇಶ್ವರ ದೇವರು. ನಂಜುಡೇಶ್ವರ ಎಂದರೆ ವಿಷಕಂಠ ಎಂದರ್ಥ.

ಯಶ್ ಚಿತ್ರರಂಗಕ್ಕೆ ಕಾಲಿಡುವಾಗ ಅನೇಕರು ನವೀನ್ ಕುಮಾರ್ ಬೇಡ, ಯಶ್ ಎಂಬ ಹೆಸರಿನೊಂದಿಗೆ ಪರಿಚಯಗೊಳ್ಳುವಂತೆ ಸೂಚಿಸಿದರು. ಯಶ್ ಇದನ್ನು ಪಾಲಿಸಿದರು. ಈಗ ಯಶ್ ಆಗಿ ಅವರು ಜಗತ್ತಿಗೆ ಪರಿಚಯಗೊಂಡಿದ್ದಾರೆ.

ಇದನ್ನೂ ಓದಿ
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಯಶ್ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರ ನಟನೆಯ ‘ಮೊಗ್ಗಿನ ಮನಸು’ ಚಿತ್ರ ಸೂಪರ್ ಹಿಟ್ ಆಯಿತು. ‘ಕಿರಾತಕ’ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿತು. ‘ಗೂಗ್ಲಿ’, ‘ರಾಜಾಹುಲಿ’, ‘ಮಾಸ್ಟರ್​ಪೀಸ್​’ ಅಂತಹ ಸೂಪರ್ ಹಿಟ್​ ಚಿತ್ರಗಳನ್ನು ಅವರು ನೀಡಿದ್ದಾರೆ. 2022ರಲ್ಲಿ ತೆರೆಗೆ ಬಂದ ‘ಕೆಜಿಎಫ್ 2’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು.

ಇದನ್ನೂ ಓದಿ: Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ

ಯಶ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಯಾವುದೇ ಹೊಸ ಘೋಷಣೆ ಆಗಿಲ್ಲ. ಬರ್ತ್​ಡೇ ದಿನ ಹೊಸ ಸಿನಿಮಾ ಘೋಷಣೆ ಆಗುವ ನಿರೀಕ್ಷೆ ಇದೆ.

ಅಭಿಮಾನಿಗಳಿಗೆ ಯಶ್ ಪತ್ರ

ಅಭಿಮಾನಿಗಳಿಗೆ ಯಶ್ ಪತ್ರ ಬರೆದಿದ್ದಾರೆ. ತಾವು ಬರ್ತ್​​ಡೇ ಆಚರಿಸಿಕೊಳ್ಳುತ್ತಿಲ್ಲ ಎಂಬುದನ್ನು ಅವರು ಹೇಳಿದ್ದಾರೆ. ‘ಕ್ಷಮಿಸಿ.. ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ. ನಿಮ್ಮ ಪ್ರೀತಿಯ ಯಶ್’ ಎಂದು ಅವರು ಬರೆದುಕೊಂಡಿದ್ದಾರೆ. ಯಶ್ ಮುಂದಿನ ಸಿನಿಮಾ ಅಪ್​ಡೇಟ್ ಇದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ