ಬಡ ಮಕ್ಕಳಿಗೆ ‘ಚಿಂದಿ ಸ್ಟಾರ್ಸ್​’ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ ನಟಿ ಡಾ. ಪೂಜಾ ರಮೇಶ್​

| Updated By: ಮದನ್​ ಕುಮಾರ್​

Updated on: Jun 29, 2022 | 10:30 AM

ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂಬುದು ಡಾ. ಪೂಜಾ ರಮೇಶ್​ ಅವರ ಆಶಯ. ಚಿಂದಿ ಆಯುವ ಮಕ್ಕಳು ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ‘ಚಿಂದಿ ಸ್ಟಾರ್ಸ್​’ ಕಾರ್ಯಕ್ರಮ ಮಾಡಲಾಗಿದೆ.

ಬಡ ಮಕ್ಕಳಿಗೆ ‘ಚಿಂದಿ ಸ್ಟಾರ್ಸ್​’ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ ನಟಿ ಡಾ. ಪೂಜಾ ರಮೇಶ್​
ನಟಿ ಡಾ. ಪೂಜಾ ರಮೇಶ್
Follow us on

ನಟಿ ಡಾ. ಪೂಜಾ ರಮೇಶ್​ (Dr Pooja Ramesh) ಅವರು ಅಭಿನಯ ಮತ್ತು ಮಾಡೆಲಿಂಗ್​ ಜೊತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನೂ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಾಡು, ಡ್ಯಾನ್ಸ್​ ಎಂದರೆ ಅದು ಕೆಲವರಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಸಾಮಾನ್ಯವಾಗಿ ಬಡಮಕ್ಕಳು ಪ್ರತಿ ದಿನವೂ ತಮ್ಮ ಕಷ್ಟದಲ್ಲೇ ಮುಳುಗಿ ಹೋಗಿರುತ್ತಾರೆ. ಅವರಿಗೆ ಹಾಡುತ್ತ, ಕುಣಿಯುತ್ತ ನಲಿಯಲು ಅವಕಾಶವೇ ಸಿಗುವುದಿಲ್ಲ. ಅಂಥ (Underprivileged Children) ಮಕ್ಕಳಿಗಾಗಿ ‘ಚಿಂದಿ ಸ್ಟಾರ್ಸ್​’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಪೂಜಾ ರಮೇಶ್​. ರಾಯಚೂರಿನಲ್ಲಿ  (Raichur) ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ 80ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಝಗಮಗಿಸುವ ವೇದಿಕೆಯಲ್ಲಿ ಬಡಮಕ್ಕಳು ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಆ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗಿದೆ. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ರಾಯಚೂರು ಜನತೆಯ ಜೊತೆಗೆ ಶಾಸಕ ಡಾ. ಶಿವರಾಜ್​ ಪಾಟೀಲ್​ ಕೂಡ ಸಾಕ್ಷಿ ಆದರು.

ಶ್ರೀಮಂತರ ಮಕ್ಕಳಿಗೆ ಸುಲಭವಾಗಿ ವೇದಿಕೆ ಸಿಗುತ್ತದೆ. ಮಧ್ಯಮ ವರ್ಗದ ಮಕ್ಕಳು ಕೂಡ ಹೇಗೋ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ತೀರಾ ಕಡುಬಡತನದಲ್ಲಿ ಇರುವ ಮಕ್ಕಳು ಒಂದು ಸೂಕ್ತ ವೇದಿಕೆಗಾಗಿ ಕನಸು ಕಾಣುತ್ತಾರೆ. ಅಂಥ ಮಕ್ಕಳ ಕನಸನ್ನು ‘ಚಿಂದಿ ಸ್ಟಾರ್ಸ್​’ ಕಾರ್ಯಕ್ರಮ ನನಸಾಗಿಸಿದೆ.

‘ಕಲಾ ಸಂಕುಲ’ ಸಂಸ್ಥೆ ಹಾಗೂ ‘ವಸಂತಲಕ್ಷ್ಮೀ ಫೌಂಡೇಶನ್​’ ಸಹಯೋಗದಲ್ಲಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇದಿಕೆಯಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ ಮತ್ತು ಸರ್ಟಿಫಿಕೇಟ್​ ನೀಡಿ, ಬೆನ್ನು ತಟ್ಟಲಾಗಿದೆ. ನಟಿ ಪೂಜಾ ರಮೇಶ್​ ಅವರು ಮಕ್ಕಳಿಗೆ ಶಾಲಾ ಬ್ಯಾಗ್​ ಮತ್ತು ಕಲಿಕಾ ಉಪಕರಣಗಳನ್ನು ವಿತರಿಸಿದ್ದಾರೆ.

ಇದನ್ನೂ ಓದಿ
Sonu Sood: 4 ಕಾಲು, 4 ಕೈ ಇರುವ ಬಾಲಕಿಗೆ ಸರ್ಜರಿ ಮಾಡಿಸಿದ ಸೋನು ಸೂದ್​; ರಿಯಲ್​ ಹೀರೋಗೆ ಜನರ ಆಶೀರ್ವಾದ
ಕಾಲಿಲ್ಲದ ವ್ಯಕ್ತಿಯಿಂದ ಮಕ್ಕಳಿಗಾಗಿ ಬಲೂನ್​ ಖರೀದಿಸಿದ ಅಮೂಲ್ಯ ಪತಿ; ಇದರ ಹಿಂದಿದೆ ಒಂದು ಕಹಾನಿ
ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಸ್ಪೋರ್ಟ್ಸ್​ನಲ್ಲಿ ಆಸಕ್ತಿಯಿದೆ ಎಂದು ಪತ್ರ ಬರೆದು ನಾಪತ್ತೆಯಾದ 7 ಮಕ್ಕಳು; ಪೊಲೀಸರಿಂದ ಶೋಧ
ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾವಿರ ಮಕ್ಕಳಿಗೆ ಸಹಾಯ ಮಾಡುತ್ತಿರುವ ನಟಿ ಲಕ್ಷ್ಮೀ ಮಂಚು

2021ರಲ್ಲಿ ‘ಇನ್​ಫ್ಯಾಂಟ್​ ಸ್ಕೂಲ್ ಆಫ್​ ಫ್ಯಾಷನ್​ ಸಂಸ್ಥೆ’ ಆಯೋಜಿಸಿದ್ದ ಶೋನಲ್ಲಿ ಮಿಸ್​ ಇಂಡಿಯಾ ಟೈಟಲ್​ ಗೆದ್ದವರು ನಟಿ ಡಾ. ಪೂಜಾ ರಮೇಶ್​. ಈ ಟೈಟಲ್​ ಗೆದ್ದಾಗ ಅವರನ್ನು ರಾಯಚೂರಿನ ಜನರು ಸನ್ಮಾನಿಸಿದ್ದರು. ಅದಕ್ಕಾಗಿ ರಾಯಚೂರಿಗೆ ಧನ್ಯವಾದ ಅರ್ಪಿಸಬೇಕು, ಕೈಲಾದ ಸೇವೆ ಸಲ್ಲಿಸಬೇಕು ಎಂಬ ಕಾರಣಕ್ಕಾಗಿ ಅವರು ‘ಚಿಂದಿ ಸ್ಟಾರ್ಸ್​’ ಕಾರ್ಯಕ್ರಮ ಮಾಡಿದ್ದಾರೆ. ಈ ವೇದಿಕೆಯಲ್ಲಿ ಅವರು ಜಿಲ್ಲೆಯ ಜನರ ಪ್ರೀತಿಯ ಬಗ್ಗೆ ಮನಸಾರೆ ಮಾತನಾಡಿದರು.

ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂಬುದು ಪೂಜಾ ರಮೇಶ್​ ಅವರ ಆಶಯ. ಚಿಂದಿ ಆಯುವ ಮಕ್ಕಳು ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಅವರಲ್ಲಿ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಈ ವೇದಿಕೆಯಲ್ಲಿ ಪೂಜಾ ರಮೇಶ್​ ಮತ್ತು ಅವರ ಪೋಷಕರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಫ್ಯಾಷನ್, ಕಿರುತೆರೆ​ ಲೋಕದ ಪ್ರತಿಭಾವಂತ ಕನ್ನಡತಿ ಡಾ. ಪೂಜಾ ರಮೇಶ್​ಗೆ ಗೋವಾದಲ್ಲಿ ​ಸನ್ಮಾನ

‘ಆನ್‌ಲೈನ್ ಕ್ಲಾಸ್‌ನಿಂದ ಶ್ರೀಮಂತರ ಮಕ್ಕಳು ಕಲಿಯುತ್ತಾರೆ, ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ’

Published On - 9:49 am, Wed, 29 June 22