ಚಿಕನ್ ಅಂತೂ ಕೊಡ್ಲಿಲ್ಲ.. ಸಿಗರೇಟ್ ಆದ್ರೂ ಕೊಡಿ ಅಂತ ಕೇಳಿದರಂತೆ ಸಂಜನಾ!

ಬೆಂಗಳೂರು: ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ನಟಿ ಸಂಜನಾಳ ಬಯಕೆಗಳ ಸರಮಾಲೆಗೆ ಜೈಲಿನ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ. ಐಷಾರಾಮಿ ಜೀವನ ಸಾಗಿಸುತ್ತಿದ್ದ ನಟಿ ಸಂಜನಾ ಗುರುವಾರ ತಡ ರಾತ್ರಿ ಜೈಲು ಅಧಿಕಾರಿಗಳನ್ನು ಚಿಕನ್ ಊಟ ಕೇಳಿದ್ದಾಳೆ. ಜೈಲಿನ ಅಧಿಕಾರಿಗಳು ಚಿಕನ್ ಊಟ ಇವತ್ತು ಕೊಡಲ್ಲ, ಬದಲಿಗೆ ಜೈಲಿನ ನಿಯಮಾವಳಿ ಪ್ರಕಾರ ನಾಳೆ ಶುಕ್ರವಾರ ಮಾತ್ರ ಚಿಕನ್ ಊಟ ನೀಡಲಾಗುತ್ತೆ ಎಂದಿದ್ದಾರೆ. ಇದರಿಂದ ಬೇಸರಗೊಂಡ ಸಂಜನಾ ಚಿಕನ್ ಕೊಡಲಿಲ್ಲ […]

ಚಿಕನ್ ಅಂತೂ ಕೊಡ್ಲಿಲ್ಲ.. ಸಿಗರೇಟ್ ಆದ್ರೂ ಕೊಡಿ ಅಂತ ಕೇಳಿದರಂತೆ ಸಂಜನಾ!
ಸಾಧು ಶ್ರೀನಾಥ್​

Updated on: Sep 19, 2020 | 11:20 AM

ಬೆಂಗಳೂರು: ಸ್ಯಾಂಡಲ್​ವುಡ್​​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ನಟಿ ಸಂಜನಾಳ ಬಯಕೆಗಳ ಸರಮಾಲೆಗೆ ಜೈಲಿನ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ.

ಐಷಾರಾಮಿ ಜೀವನ ಸಾಗಿಸುತ್ತಿದ್ದ ನಟಿ ಸಂಜನಾ ಗುರುವಾರ ತಡ ರಾತ್ರಿ ಜೈಲು ಅಧಿಕಾರಿಗಳನ್ನು ಚಿಕನ್ ಊಟ ಕೇಳಿದ್ದಾಳೆ. ಜೈಲಿನ ಅಧಿಕಾರಿಗಳು ಚಿಕನ್ ಊಟ ಇವತ್ತು ಕೊಡಲ್ಲ, ಬದಲಿಗೆ ಜೈಲಿನ ನಿಯಮಾವಳಿ ಪ್ರಕಾರ ನಾಳೆ ಶುಕ್ರವಾರ ಮಾತ್ರ ಚಿಕನ್ ಊಟ ನೀಡಲಾಗುತ್ತೆ ಎಂದಿದ್ದಾರೆ.

ಇದರಿಂದ ಬೇಸರಗೊಂಡ ಸಂಜನಾ ಚಿಕನ್ ಕೊಡಲಿಲ್ಲ ಅಂದ್ರು ಪರವಾಗಿಲ್ಲ ಒಂದು ಸಿಗರೇಟ್ ಕೊಡಿ ಅಂತಾ ದಯನೀಯವಾಗಿ ಕೇಳಿಕೊಂಡಿದ್ದಾಳೆ. ಇದಕ್ಕೂ ನಿಯಮಾವಳಿಗಳ ಪ್ರಕಾರ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರಕ್ಕೆ ಸಂಜನಾ ಕೆಂಡಾಮಂಡಲವಾಗಿದ್ದಾಳೆ. ಆಗ ಜೈಲಿನ ಅಧಿಕಾರಿಗಳು ಸಾಹಸಪಟ್ಟು ಸಮಾಧಾನ ಮಾಡಿದ್ದಾರೆ.

ಸದ್ಯ ಜೈಲಿನಲ್ಲಿ ರಾಗಿಣಿಗಿಂತ ಸಂಜನಾಳದ್ದೆ ಟೆನ್ಷನ್ ಜಾಸ್ತಿಯಾಗಿದ್ದು, ಜೈಲಿನ ಅಧಿಕಾರಿಗಳಿಗೆ ಸಂಜನಾಳನ್ನು ನಿಭಾಯಿಸುವುದು ದೊಡ್ಡ ತಲೆನೋವಾಗಿದೆ. ಆದರೆ ಈ ಕಡೆ ನಟಿ ರಾಗಿಣಿ ತನ್ನ ಪಾಡಿಗೆ ತಾಯಿ ಕೊಟ್ಟ  ಪುಸ್ತಕ ಓದುತ್ತಾ, ನಿಶ್ಚಿಂತೆಯಿಂದ ಕಾಲ ಕಳೆಯುತ್ತಿದ್ದಾಳಂತೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us