ಮಾರಕಾಸ್ತ್ರಗಳೊಂದಿಗೆ ಅಲಯನ್ಸ್ ವಿವಿಗೆ ನುಗ್ಗಿದ್ದ ಹಿನ್ನೆಲೆಯಲ್ಲಿ ನಟಿ ಶ್ರೀಲೀಲಾ (Sreeleela) ತಾಯಿ ಸ್ವರ್ಣಲತಾ ಅವರಿಗೆ ಬಂಧನದ ಭೀತಿ ಎದುರಾಗಿದೆ. ಅವರನ್ನು ಅರೆಸ್ಟ್ ಮಾಡಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸೆಪ್ಟೆಂಬರ್ 10ರಂದು ಮಾರಕಾಸ್ತ್ರಗಳೊಂದಿಗೆ ಬೌನ್ಸರ್ಗಳ ಜತೆ ವಿವಿಗೆ ನುಗ್ಗಿರುವ ಆರೋಪ ಸ್ವರ್ಣಲತಾ (Swarnalatha) ಅವರ ಮೇಲಿದೆ. ಅಲಯನ್ಸ್ ಕಾಲೇಜು ಒಡೆತನದ ಕುರಿತು ಆಗಾಗ ಕಿರಿಕ್ ಆಗುತ್ತಿದೆ. ‘ಕೋರ್ಟ್ ಆದೇಶವಿದೆ, ಕಾಲೇಜು ನಮ್ಮದು ಅಂತ’ ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ಅವರು ಕಾಲೇಜಿಗೆ ಅಕ್ರಮವಾಗಿ ನುಗ್ಗಿದ್ದಾರೆ ಎಂದು ಎಫ್ಐಆರ್ (FIR) ಆಗಿದೆ.
ಸ್ವರ್ಣಲತಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿದ್ದಾರೆ. ವಿವಿ ಒಡೆತನಕ್ಕೆ ಸಂಬಂಧಿಸಿದಂತೆ ಕಲಹ ಮುಂದುವರಿದಿದೆ.
(ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ)
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:57 am, Thu, 15 September 22