ಯಶ್ ಹೊಸ ಲುಕ್ ನೋಡಿ ಫ್ಯಾನ್ಸ್ ಫಿದಾ; ಅಭಿಮಾನಿಗಳು ಹೇಳಿದ್ದು ಒಂದೇ ಮಾತು
ಯಶ್ ಕತ್ತಲಲ್ಲಿ ಕುಳಿತಿದ್ದಾರೆ. ಅವರು ಬಿಳಿ ಬಣ್ಣದ ಬಟ್ಟೆ ಹಾಕಿದ್ದಾರೆ. ಅವರ ಗಡ್ಡ ಹಾಗೂ ತಲೆಕೂದಲು ಸಾಕಷ್ಟು ಗಮನ ಸೆಳೆದಿದೆ. ಈ ಫೋಟೋ ಪೋಸ್ಟ್ ಮಾಡಿ ಕೇವಲ 3 ಗಂಟೆಯಲ್ಲಿ 11 ಲಕ್ಷ ಮಂದಿ ಲೈಕ್ಸ್ ಒತ್ತಿದ್ದಾರೆ.
‘ಕೆಜಿಎಫ್ 2’ ಸಿನಿಮಾ (KGF Chapter 2) ತೆರೆಕಂಡ ಬಳಿಕ ಯಶ್ ಅವರು ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡರು. ಕರ್ನಾಟಕಕ್ಕೆ ಸೀಮಿತವಾಗಿದ್ದ ಅವರ ಮಾರುಕಟ್ಟೆ ಈಗ ಸಾಕಷ್ಟು ವಿಸ್ತರಣೆ ಆಗಿದೆ. ಯಶ್ (Yash) ಇಮೇಜ್ಗೆ ತಕ್ಕಂತೆ ಹಲವು ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ. ದೊಡ್ಡ ದೊಡ್ಡ ನಿರ್ಮಾಪಕರು, ಹಲವು ನಿರ್ದೇಶಕರು ಯಶ್ ಕಾಲ್ಶೀಟ್ ಪಡೆಯಲು ಕಾದು ನಿಂತಿದ್ದಾರೆ. ಆದರೆ, ಯಶ್ ತಮಗೆ ಸಿಕ್ಕ ಯಶಸ್ಸನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಹೀಗಾಗಿ, ಅವರು ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಯಶ್ ಹೊಸ ಫೋಟೋ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.
ಯಶ್ ಅವರು ಈ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. ಆದರೆ, ‘ಕೆಜಿಎಫ್ 2’ ರಿಲೀಸ್ ಆದ ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್ ಆದರು. ಫ್ಯಾನ್ಸ್ಗೋಸ್ಕರ ಹೊಸಹೊಸ ಪೋಸ್ಟ್ ಹಂಚಿಕೊಳ್ಳೋಕೆ ಪ್ರಾರಂಭಿಸಿದ್ದಾರೆ. ಮಕ್ಕಳ ಜತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಯಶ್ ಹಂಚಿಕೊಳ್ಳುತ್ತಿದ್ದಾರೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 1.12 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಕನ್ನಡದ ಯಾವ ಹೀರೋಗೂ ಇನ್ಸ್ಟಾಗ್ರಾಮ್ನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರಿಲ್ಲ. ಈಗ ಯಶ್ ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಯಶ್ ಕತ್ತಲಲ್ಲಿ ಕುಳಿತಿದ್ದಾರೆ. ಅವರು ಬಿಳಿ ಬಣ್ಣದ ಬಟ್ಟೆ ಹಾಕಿದ್ದಾರೆ. ಅವರ ಗಡ್ಡ ಹಾಗೂ ತಲೆಕೂದಲು ಸಾಕಷ್ಟು ಗಮನ ಸೆಳೆದಿದೆ. ಈ ಫೋಟೋ ಪೋಸ್ಟ್ ಮಾಡಿ ಕೇವಲ 3 ಗಂಟೆಯಲ್ಲಿ 11 ಲಕ್ಷ ಮಂದಿ ಲೈಕ್ಸ್ ಒತ್ತಿದ್ದಾರೆ. ಲೈಕ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಫೋಟೋ ನೋಡಿದ ಫ್ಯಾನ್ಸ್ ‘ಕೆಜಿಎಫ್’ ಡೈಲಾಗ್ ‘ಸಲಾಂ ರಾಕಿ ಭಾಯ್’ ಎಂದು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
ಇದನ್ನೂ ಓದಿ: Yash: ಮಲ್ಟಿಸ್ಟಾರರ್ ಸಿನಿಮಾದಲ್ಲಿ ಯಶ್? ಹೈ ಬಜೆಟ್ ಚಿತ್ರಕ್ಕೆ ನಿರ್ದೇಶಕರು ಇವರೇ
‘ಕೆಜಿಎಫ್ 2’ ತೆರೆಗೆ ಬಂದು 5 ತಿಂಗಳು ಕಳೆದಿದೆ. ಆದಾಗ್ಯೂ ಯಶ್ ಮುಂದಿನ ಸಿನಿಮಾ ಈವರೆಗೆ ಘೋಷಣೆ ಆಗಿಲ್ಲ. ನಿರ್ದೇಶಕ ನರ್ತನ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ರಾಮ್ ಚರಣ್ ಕೂಡ ಅಭಿನಯಿಸಲಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಅದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.
Published On - 4:39 pm, Thu, 15 September 22