‘ಅವರಿಗೊಂದು ಕಾನೂನು, ಇವರಿಗೊಂದು ಕಾನೂನನ್ನು ಬಿಜೆಪಿ ಮಾಡಿಲ್ಲ’; ಪಿಎಫ್​​ಐ ನಿಷೇಧದ ಬಗ್ಗೆ ತಾರಾ ಮಾತು

ಅಲ್ಪ ಸಂಖ್ಯಾತರನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದಲೇ ಪಿಎಫ್​ಐ ಬ್ಯಾನ್ ಮಾಡಲಾಗಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಈ ಬಗ್ಗೆ ತಾರಾ ಮಾತನಾಡಿದ್ದಾರೆ.

‘ಅವರಿಗೊಂದು ಕಾನೂನು, ಇವರಿಗೊಂದು ಕಾನೂನನ್ನು ಬಿಜೆಪಿ ಮಾಡಿಲ್ಲ’; ಪಿಎಫ್​​ಐ ನಿಷೇಧದ ಬಗ್ಗೆ ತಾರಾ ಮಾತು
ತಾರಾ
TV9kannada Web Team

| Edited By: Rajesh Duggumane

Sep 28, 2022 | 2:44 PM

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India-PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಹಾಗೂ ಅಧೀನ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ಈ ಸಂಘಟನೆಗಳನ್ನು ಕಾನೂನು ಬಾಹಿರ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಬಗ್ಗೆ ಪರ-ವಿರೋಧ ಡಿಬೇಟ್​ಗಳು ಆಗುತ್ತಿವೆ. ನಟಿ, ಮೇಲ್ಮನೆ ಸದಸ್ಯೆ ತಾರಾ ಅನುರಾಧ (Tara Anuradha) ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೋಲಾರದಲ್ಲಿ ಮಾತನಾಡಿರುವ ತಾರಾ ಅವರು, ‘ಭಾರತವು ಎಲ್ಲಾ ಜಾತಿ, ಧರ್ಮವನ್ನು ಅಪ್ಪಿಕೊಂಡಿರುವ ದೇಶ. ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನ ನೀಡಿದೆ. ಯಾವುದೆ ಜಾತಿ ಅಥವಾ ಧರ್ಮವು ದೇಶ ವಿರೋಧಿ ಕೆಲಸ‌ ಮಾಡಿದಾಗ ಕಾನೂನು ಅದರ‌ ಕ್ರಮ ಕೈಗೊಳ್ಳುತ್ತದೆ. ಅವರಿಗೊಂದು ಕಾನೂನು, ಇವರಿಗೊಂದು ಕಾನೂನನ್ನು ಬಿಜೆಪಿ ಮಾಡಿಲ್ಲ’ ಎಂದು ತಾರಾ ಹೇಳಿದ್ದಾರೆ.

ಅಲ್ಪ ಸಂಖ್ಯಾತರನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದಲೇ ಪಿಎಫ್​ಐ ಬ್ಯಾನ್ ಮಾಡಲಾಗಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಈ ಬಗ್ಗೆ ತಾರಾ ಮಾತನಾಡಿದ್ದಾರೆ. ‘ಅಲ್ಪ ಸಂಖ್ಯಾತರಿಗೆ ಬಿಜೆಪಿ ಹೆಚ್ಚಿನ ಯೋಜನೆಗಳನ್ನು ನೀಡಿದೆ. ಕಡೆಗಣಿಸಲ್ಪಟ್ಟ ಧರ್ಮಗಳಿಗೆ ಮೋದಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಯಾರು ಮಾಡುತ್ತಾರೆ ಅವರ ವಿರುದ್ಧ ನಮ್ಮ ಸರ್ಕಾರ ಇದೆ. ನ್ಯಾಯಾಲಯ ಯಾವುದು ಸರಿ ಯಾವುದು ತಪ್ಪು ಎಂಬ ತೀರ್ಮಾನ ಮಾಡಲಿದೆ. ಇದರಲ್ಲಿ ಯಾರನ್ನೂ ದೂಷಿಸುವ ಮಾತಿಲ್ಲ. ಜಾತಿ ಆಧಾರದ ಮೇಲೆ ಶಿಕ್ಷೆ ಆಗಿಲ್ಲ, ಅಪರಾಧದ ಆಧಾರದ ಮೇಲೆ ಶಿಕ್ಷೆಯಾಗಿದೆ’ ಎಂದು ತಾರಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Raj Kundra: ಅಶ್ಲೀಲ ಚಿತ್ರ ನಿರ್ಮಾಣ ಕೇಸ್​​ನಲ್ಲಿ ರಾಜ್​ ಕುಂದ್ರಾಗೆ ಮತ್ತೆ ಸಂಕಷ್ಟ; ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯ ಮತ್ತು ಗುಪ್ತಚರದಳ ಸಾಕಷ್ಟು ಮಾಹಿತಿ ಕಲೆಹಾಕಿದ ನಂತರವೇ ಪಿಎಫ್​ಐ ಹಾಗೂ ಎಸ್​ಡಿಪಿಐ ಮೇಲೆ ಕೇಂದ್ರ ಸರ್ಕಾರದ ಏಜೆನ್ಸಿಗಳು ದಾಳಿ ನಡೆಸಿದ್ದವು. ಈ ಸಂಘಟನೆಯ ಬಗ್ಗೆ ಹಲವು ಮಾಹಿತಿಯನ್ನು ಕಲೆ ಹಾಕಿದ ನಂತರ ಕೇಂದ್ರ ಸರ್ಕಾರವು ನಿರ್ಬಂಧ ಹೇರುವ ನಿರ್ಧಾರವನ್ನು ಕೈಗೊಂಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada