Zaid Khan: 4 ಮಿಲಿಯನ್ ವೀವ್ಸ್ ಪಡೆದ ‘ಬನಾರಸ್’ ಟ್ರೇಲರ್; ಝೈದ್ ಖಾನ್ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Banaras Trailer: ಟೈಮ್ ಟ್ರಾವೆಲಿಂಗ್ ಪರಿಕಲ್ಪನೆಯನ್ನು ಇಟ್ಟುಕೊಂಡು ‘ಬನಾರಸ್’ ಸಿನಿಮಾ ಮಾಡಲಾಗಿದೆ. ಝೈದ್ ಖಾನ್ ನಟನೆಯ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ಚಿತ್ರರಂಗಕ್ಕೆ ಪ್ರತಿ ದಿನ ಹೊಸ ಹೀರೋಗಳ ಎಂಟ್ರಿ ಆಗುತ್ತಲೇ ಇರುತ್ತದೆ. ಆದರೆ ಗಮನ ಸೆಳೆಯುವವರ ಸಂಖ್ಯೆ ವಿರಳ. ಚೊಚ್ಚಲ ಚಿತ್ರದಲ್ಲಿಯೇ ಮೋಡಿ ಮಾಡುವ ಅಪರೂಪದ ಪ್ರತಿಭೆಗಳ ಸಾಲಿಗೆ ಝೈದ್ ಖಾನ್ (Zaid Khan) ಸೇರ್ಪಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಅವರು ನಟಿಸಿರುವ ‘ಬನಾರಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅನುಭವಿ ನಿರ್ದೇಶಕ ಜಯತೀರ್ಥ (Jayatheertha) ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸೋಮವಾರ (ಸೆ.26) ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. 5 ಭಾಷೆಗಳಿಂದ ಸೇರಿ ಒಟ್ಟು 40 ಲಕ್ಷಕ್ಕೂ ಅಧಿಕ ವೀವ್ಸ್ ಪಡೆಯುವ ಮೂಲಕ ಯೂಟ್ಯೂಬ್ನಲ್ಲಿ ‘ಬನಾರಸ್’ (Banaras) ಟ್ರೇಲರ್ ಧೂಳೆಬ್ಬಿಸುತ್ತಿದೆ. ಟ್ರೇಲರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಟ್ರೇಲರ್ನಲ್ಲಿ ಹಲವು ಅಂಶಗಳು ಹೈಲೈಟ್ ಆಗಿವೆ.
ಝೈದ್ ಖಾನ್ ಅವರದ್ದು ರಾಜಕೀಯದ ಕುಟುಂಬ. ಆದರೆ ಅವರು ಆಯ್ದುಕೊಂಡಿರುವುದು ಸಿನಿಮಾ ಹಾದಿ. ಚೊಚ್ಚಲ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರೀ ತುಂಬ ಚೆನ್ನಾಗಿ ಮೂಡಿಬಂದಿದೆ ಎಂಬುದರ ಝಲಕ್ ಟ್ರೇಲರ್ ಮೂಲಕ ಕಾಣಿಸುತ್ತಿದೆ. ಸಿನಿಮಾದ ಕಥೆ ಏನು ಎನ್ನುವ ಸುಳಿವು ಕೂಡ ಟ್ರೇಲರ್ನಲ್ಲಿ ಸಿಕ್ಕಿದೆ.
ಟೈಮ್ ಟ್ರಾವೆಲಿಂಗ್ ಪರಿಕಲ್ಪನೆಯನ್ನು ಇಟ್ಟುಕೊಂಡು ‘ಬನಾರಸ್’ ಸಿನಿಮಾ ಮಾಡಲಾಗಿದೆ. ಜೊತೆಗೆ ಒಂದು ಲವ್ ಸ್ಟೋರಿ ಕೂಡ ಇರಲಿದೆ. ಅಲ್ಲದೇ ಅನೇಕ ಸಸ್ಪೆನ್ಸ್ ಅಂಶಗಳು ಪ್ರೇಕ್ಷಕರನ್ನು ಎದುರುಕೊಳ್ಳಲಿವೆ. ಅದೆಲ್ಲವನ್ನೂ ನೋಡಲು ನವೆಂಬರ್ 4ರವರೆಗೆ ಕಾಯಬೇಕು. ಅಂದು ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಬನಾರಸ್’ ಚಿತ್ರ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ಒಂದೇ ದಿನದಲ್ಲಿ ಎಲ್ಲ ಭಾಷೆಯ ವರ್ಷನ್ಗಳಿಂದ ಒಟ್ಟು 4 ಮಿಲಿಯನ್ಗಿಂತಲೂ (40 ಲಕ್ಷ) ಅಧಿಕ ವೀವ್ಸ್ ಪಡೆದುಕೊಂಡಿದೆ. ಈ ಮೊದಲು ಬಿಡುಗಡೆ ಆಗಿದ್ದ ‘ಮಾಯಗಂಗೆ..’ ಸಾಂಗ್ ಕೂಡ ಜನಮೆಚ್ಚುಗೆ ಗಳಿಸಿದೆ. ಅಜನೀಶ್ ಬಿ. ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಅವರು ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:41 am, Wed, 28 September 22