ಉಪೇಂದ್ರ ನಿರ್ದೇಶನದ ಸಿನಿಮಾಗಳು ಸಖತ್ ಭಿನ್ನ. ಅವರು ಹೊಸ ರೀತಿಯ ಪ್ರಯೋಗಗಳನ್ನು ಮಾಡಿ ಪ್ರೇಕ್ಷಕರ ಎದುರು ಇಡುವ ಪ್ರಯತ್ನ ಮಾಡುತ್ತಾರೆ. ಅವರ ನಿರ್ದೇಶನದ ‘ಯುಐ’ ಸಿನಿಮಾ ಇಂದು (ಡಿಸೆಂಬರ್ 20) ರಿಲೀಸ್ ಆಗಿದೆ. ಈ ಚಿತ್ರ ನೋಡಿ ಪ್ರೇಕ್ಷಕರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಹೀಗಿರುವಾಗಲೇ ‘ಯುಐ’ ಚಿತ್ರ ನೋಡುವ ಪ್ರೇಕ್ಷಕರಿಗೆ ಉಪೇಂದ್ರ ಸವಾಲೊಂದನ್ನು ಹಾಕಿದ್ದಾರೆ.
ಉಪೇಂದ್ರ ಅವರ ಆಲೋಚನೆಗಳೇ ಭಿನ್ನ. ಅವುಗಳನ್ನು ಸಿನಿಮಾಗಳಲ್ಲೂ ತರುವ ಪ್ರಯತ್ನವನ್ನು ಉಪೇಂದ್ರ ಮಾಡುತ್ತಾರೆ. ಈಗ ‘ಯುಐ’ ಚಿತ್ರದ ರಿಲೀಸ್ ಸಂದರ್ಭದಲ್ಲಿ ಅವರು ಟ್ವೀಟ್ ಒಂದನ್ನು ಮಾಡಿ ಸವಾಲು ಹಾಕಿದ್ದಾರೆ. ಇದನ್ನು ಎಷ್ಟು ಮಂದಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಉಪೇಂದ್ರ ಸಿಎಂ ಆದರೆ ಮೊದಲು ಮಾಡೋ ಕೆಲಸ ಏನು? ಅವರೇ ಹೇಳಿದ್ರು ಕೇಳಿ
‘ಕಾತುರದಿಂದ ಕಾಯುತ್ತಿದ್ದೇನೆ. UI ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು’ ಎಂಬುದಾಗಿ ಉಪೇಂದ್ರ ಬರೆದುಕೊಂಡಿದ್ದಾರೆ. ಈ ಮೂಲಕ ಕ್ಲೈಮ್ಯಾಕ್ಸ್ ಬೇರೆಯದೇ ರೀತಿಯಲ್ಲಿ ಇರಲಿದೆ ಎಂಬ ಸೂಚನೆ ಸಿಕ್ಕಿದೆ.
ಕಾತುರದಿಂದ ಕಾಯುತ್ತಿದ್ದೇನೆ……
U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು …..Eagerly waiting……….,
How many screens of U I you can decode and
How much time you take to decode the last shot.— Upendra (@nimmaupendra) December 20, 2024
ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದಲೂ ‘ಯುಐ’ ಚಿತ್ರ ನಿರೀಕ್ಷೆ ಮೂಡಿಸಿದೆ. ಇನ್ನು, ‘ಯುಐ’ ಚಿತ್ರದ ಕಥೆ 2040ರಲ್ಲಿ ಸಾಗಲಿದೆ ಎನ್ನಲಾಗಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಹಾಗೂ ಟೀಸರ್ ಮೂಲಕ ಹುಳ ಬಿಡುವ ಕೆಲಸ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.