ಟಾಲಿವುಡ್ನಲ್ಲಿ ಬಿಗ್ ಸ್ಟಾರ್ಗಳ ಫಿಲ್ಮಿ ಫೈಟ್: ಮುಂದಿನ ಸಂಕ್ರಾಂತಿಗೂ ಫ್ರಿನ್ಸ್, ಅಲ್ಲು ಮಧ್ಯೆ ವಾರ್?
ಟಾಲಿವುಡ್ ಸ್ಟಾರ್ ನಟರ ನಡುವಿನ ಸಿನಿಮಾಗಳ ಕ್ಲ್ಯಾಶ್ ಕಹಾನಿ ಮತ್ತೆ ಚರ್ಚೆಗೆ ಬಂದಿದೆ. ಅಂದಹಾಗೆ ಸದ್ಯ 2020ರ ಸಂಕ್ರಾಂತಿ ಈಗಷ್ಟೇ ಕಂಪ್ಲೀಟ್ ಆಗಿದೆ. ಈಗಾಗಲೇ 2021ರ ಸಂಕ್ರಾಂತಿಗೆ ಆಗಮಿಸೋ ಸಿನಿಮಾಗಳು ಮತ್ತು ಸ್ಟಾರ್ ನಟರ ಸಿನಿಮಾಗಳ ನಡುವಿನ ಕ್ಲ್ಯಾಶ್ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಾದ್ರೆ ಅದ್ಯಾವ ಸ್ಟಾರ್‌ಗಳು ಅದ್ಯಾವ ನಟರುಗಳು ಅನ್ನೋದನ್ನ ತೋರಿಸ್ತೀವಿ ನೋಡಿ. ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಪ್ರಿನ್ಸ್ ಮಹೇಶ್ ಬಾಬು ನಡುವಿನ ಸಿನಿಮಾಗಳು ಹಾಗು ಅವರ ಸಿನಿಮಾಗಳ ಬಾಕ್ಸ್ ಆಫೀಸ್ […]
ಟಾಲಿವುಡ್ ಸ್ಟಾರ್ ನಟರ ನಡುವಿನ ಸಿನಿಮಾಗಳ ಕ್ಲ್ಯಾಶ್ ಕಹಾನಿ ಮತ್ತೆ ಚರ್ಚೆಗೆ ಬಂದಿದೆ. ಅಂದಹಾಗೆ ಸದ್ಯ 2020ರ ಸಂಕ್ರಾಂತಿ ಈಗಷ್ಟೇ ಕಂಪ್ಲೀಟ್ ಆಗಿದೆ. ಈಗಾಗಲೇ 2021ರ ಸಂಕ್ರಾಂತಿಗೆ ಆಗಮಿಸೋ ಸಿನಿಮಾಗಳು ಮತ್ತು ಸ್ಟಾರ್ ನಟರ ಸಿನಿಮಾಗಳ ನಡುವಿನ ಕ್ಲ್ಯಾಶ್ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಾದ್ರೆ ಅದ್ಯಾವ ಸ್ಟಾರ್‌ಗಳು ಅದ್ಯಾವ ನಟರುಗಳು ಅನ್ನೋದನ್ನ ತೋರಿಸ್ತೀವಿ ನೋಡಿ.
ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಪ್ರಿನ್ಸ್ ಮಹೇಶ್ ಬಾಬು ನಡುವಿನ ಸಿನಿಮಾಗಳು ಹಾಗು ಅವರ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ದೊಡ್ಡ ಚರ್ಚೆ ಆಗಿ ಸದ್ಯ ಈಗಷ್ಟೆ ಎಲ್ಲವೂ ತಣ್ಣಗಾಗಿದೆ ಅಂತ ಟಾಲಿವುಡ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟು ಸುಮ್ಮನಾಗಿದ್ದಾರೆ. ಆದ್ರೆ ಇದರ ಮಧ್ಯೆಯೇ ಮತ್ತೊಂದು ವಿಚಾರ ಈಗ ಚರ್ಚೆಗೆ ಬಂದಿದೆ.
ಮುಂದಿನ ಜನವರಿಗೆ ತೆರೆಗೆ ಅಪ್ಪಳಿಸುತ್ತಾ ಸಿನಿಮಾಗಳು? ಹೌದು ಕಳೆದ ತಿಂಗಳು ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ಗಿಫ್ಟ್ ಆಗಿ ಅಲ್ಲು ಅರ್ಜುನ್ ಹಾಗೂ ಮಹೇಶ್ ಬಾಬು ಸಿನಿಮಾಗಳು ರಿಲೀಸ್ ಆಗಿ ಕಮಾಲ್ ಮಾಡ್ತಿವೆ. ಆದ್ರೆ ಇದ್ರ ಜೊತೆಯಲ್ಲೇ ಇದೇ ಸ್ಟಾರ್ ನಟರ ಮುಂದಿನ ಸಿನಿಮಾಗಳ ರಿಲೀಸ್ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.
ಅಂದಹಾಗೆ ಸದ್ಯ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಜೊತೆ ಸಿನಿಮಾಗೆ ಪ್ಲಾನ್ ಮಾಡಿದ್ದಾರೆ. ಮಹೇಶ್ ಬಾಬು, ಮಹರ್ಷಿ ವಂಶಿ ಪಡಿಪಲ್ಲಿ ಜೊತೆ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಹೀಗಿರುವಾಗ ಸದ್ಯ ಅಲ್ಲು ಅರ್ಜುನ್ ಹಾಗೂ ಮಹೇಶ್ ಬಾಬು ಸಿನಿಮಾಗಳು ಬಹುತೇಕ ಮಾರ್ಚ್ನಿಂದ ಶೂಟಿಂಗ್ ಶುರುಮಾಡಲಿವೆ. ಆದ್ರೆ ಅಂದುಕೊಂಡಂತೆ ಆದ್ರೆ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಸಿನಿಮಾಗಳು 2021ರ ಜನವರಿ ವೇಳೆಗೆ ಮತ್ತೆ ತೆರೆಗೆ ಅಪ್ಪಳಿಸಲಿವೆಯಂತೆ.
ಅಲ್ಲು ಅರ್ಜುನ್ ಹಾಗೂ ಮಹೇಶ್ ಬಾಬು ನಡುವೆ ಕ್ಲ್ಯಾಶ್ ಫಿಕ್ಸ್? ಯಾಕಂದ್ರೆ ಟಾಲಿವುಡ್ನಲ್ಲಿ ಜನವರಿ ಅದು ಸಂಕ್ರಾಂತಿ ಟೈಂ ಅಂದರೆ ಸಿನಿಮಾ ರಿಲೀಸ್ಗೆ ಹೇಳಿ ಮಾಡಿಸಿದ ಸಮಯ. ರಜಾ ದಿನಗಳ ಕಾಲವಾಗಿದ್ದು ಪ್ರೇಕ್ಷಕರು ಹೆಚ್ಚು ಹೆಚ್ಚು ಥಿಯೇಟರ್ಗೆ ಬಂದು ಪ್ರೋತ್ಸಾಹಿಸ್ತಾರೆ ಅನ್ನೋ ಮಾತು. ಹೀಗಾಗಿ 2021ಕ್ಕೆ ಮತ್ತೆ ಅಲ್ಲು ಅರ್ಜುನ್ ಹಾಗೂ ಮಹೇಶ್ ಬಾಬು ನಡುವೆ ಕ್ಲ್ಯಾಶ್ ಫಿಕ್ಸ್ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ
ಇದೆಲ್ಲದರ ಜೊತೆಗೆ ರಾಜಮೌಳಿಯ ಆರ್‌ಆರ್‌ಆರ್ ಸಿನಿಮಾ ಕೂಡ ಜನವರಿ 8ಕ್ಕೆ ರಿಲೀಸ್ ಮಾಡೋ ಪ್ಲಾನ್ ಆಗಿದೆ. ಹಾಗಾದ್ರೆ ರಾಜಮೌಳಿ ಸಿನಿಮಾದೆದರು ಅಲ್ಲು ಹಾಗು ಮಹೇಶ್ ಬಾಬು ಸೆಣಸಾಟಕ್ಕಿಳಿತಾರಾ. ಇನ್ನು ಅಲ್ಲು ಅರ್ಜುನ್ ಹಾಗೂ ಮಹೇಶ್ ಬಾಬು ಸಿನಿಮಾಗಳು ಕೂಡ ಬೇರೆ ಬೇರೆ ಟೈಂನಲ್ಲಿ ರಿಲೀಸ್ ಆಗ್ತಾವಾ ಅನ್ನೋದನ್ನ ಕಾದು ನೋಡಬೇಕಿದೆ.