ನಿಖಿಲ್-ರೇವತಿ ನವ ಜೋಡಿ: ನಗರದಲ್ಲಿ ಅದ್ಧೂರಿ ನಿಶ್ಚಿತಾರ್ಥ
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಯುವರಾಜನಾಗಿ, ರಾಜಕೀಯದಲ್ಲೂ ಗುರುತಿಸಿಕೊಂಡಿರೋ ದೊಡ್ಡಗೌಡರ ಪ್ರೀತಿಯ ಮೊಮ್ಮಗ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುದ್ದಿನ ಮಗ ನಿಖಿಲ್ ಕುಮಾರಸ್ವಾಮಿಗೆ ಯುವರಾಣಿ ಸಿಕ್ಕಿದ್ದಾಳೆ. ಅದು ಬೇರೆ ಯಾರೂ ಅಲ್ಲ. ಬೆಂಗಳೂರಿನ ಉದ್ಯಮಿ ಪುತ್ರಿ ರೇವತಿ. ರೇವತಿಗೆ ವಜ್ರದ ಉಂಗುರ ತೊಡಿಸಿದ ನಿಖಿಲ್: ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಎಂಗೇಜ್ಮೆಂಟ್ ನಡೆದಿದೆ. ನಿಖಿಲ್ ಅವರು ಕ್ರೀಮ್, ಗೋಲ್ಡನ್ ಕಲರ್ ಕುರ್ತಾ ಧರಿಸಿದ್ದು, ರೇವತಿ ಕೂಡ ಕ್ರೀಮ್ ಗೋಲ್ಡನ್ ಸಿಲ್ಕ್ ಸ್ಯಾರಿಯಲ್ಲಿ ಮಿಂಚುತ್ತಿದ್ದಾರೆ. ನಿಖಿಲ್ ತಾತ ಹೆಚ್.ಡಿ.ದೇವೇಗೌಡ […]
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಯುವರಾಜನಾಗಿ, ರಾಜಕೀಯದಲ್ಲೂ ಗುರುತಿಸಿಕೊಂಡಿರೋ ದೊಡ್ಡಗೌಡರ ಪ್ರೀತಿಯ ಮೊಮ್ಮಗ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುದ್ದಿನ ಮಗ ನಿಖಿಲ್ ಕುಮಾರಸ್ವಾಮಿಗೆ ಯುವರಾಣಿ ಸಿಕ್ಕಿದ್ದಾಳೆ. ಅದು ಬೇರೆ ಯಾರೂ ಅಲ್ಲ. ಬೆಂಗಳೂರಿನ ಉದ್ಯಮಿ ಪುತ್ರಿ ರೇವತಿ.
ರೇವತಿಗೆ ವಜ್ರದ ಉಂಗುರ ತೊಡಿಸಿದ ನಿಖಿಲ್:
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಎಂಗೇಜ್ಮೆಂಟ್ ನಡೆದಿದೆ. ನಿಖಿಲ್ ಅವರು ಕ್ರೀಮ್, ಗೋಲ್ಡನ್ ಕಲರ್ ಕುರ್ತಾ ಧರಿಸಿದ್ದು, ರೇವತಿ ಕೂಡ ಕ್ರೀಮ್ ಗೋಲ್ಡನ್ ಸಿಲ್ಕ್ ಸ್ಯಾರಿಯಲ್ಲಿ ಮಿಂಚುತ್ತಿದ್ದಾರೆ. ನಿಖಿಲ್ ತಾತ ಹೆಚ್.ಡಿ.ದೇವೇಗೌಡ ದಂಪತಿ ಸಮಕ್ಷಮದಲ್ಲಿ ರೇವತಿಗೆ ವಜ್ರದ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ, ರೇವತಿಗೆ ಸೀರೆ ನೀಡಿ, ಅರಿಸಿಣ, ಕುಂಕುಮ ಕೊಟ್ಟಿದ್ದಾರೆ. ಬಂಗಾರದ ಝರಿ ಇರುವ ಪಂಚೆ ತೊಟ್ಟು, ಮೇಲೆ ಬಿಳಿ ಬಣ್ಣದ ಹಾಫ್ ಸ್ಲ್ಯಾಗ್ ಧರಿಸಿ ಮಗನ ನಿಶ್ಚಿತಾರ್ಥದಲ್ಲಿ ಲಗುಬಗೆಯಿಂದ ಕುಮಾರಸ್ವಾಮಿ ಓಡಾಡಿಕೊಂಡಿದ್ದರು.
ಇನ್ನು, ಎಂಗೇಜ್ಮೆಂಟ್ಗಾಗಿ ಹೋಟೆಲ್ ಒಳಗೆ ಅದ್ಧೂರಿ ಸೆಟ್ ಹಾಕಲಾಗಿದ್ದು, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ADGP ಅಲೋಕ್ ಕುಮಾರ್, ನಟ ಪುನೀತ್ ರಾಜ್ ಕುಮಾರ್, ಮಾಜಿ ಸಚಿವ ಸಾರಾ ಮಹೇಶ್ ಸೇರಿದಂತೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ನಾಯಕರು, ಮುಖಂಡರು ಆಗಮಿಸಿದ್ದಾರೆ.
ಸಿಎಂ ಬಿಎಸ್ವೈ ಆಗಮಿಸುವ ಸಾಧ್ಯತೆ: ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರಿಗೂ ಮುಕ್ತ ಆಹ್ವಾನ ನೀಡಿದ್ದಾರೆ. ಹಾಗಾಗಿ ಮಧ್ಯಾಹ್ನ 12.30ರ ವೇಳೆಗೆ ನಿಖಿಲ್ ನಿಶ್ಚಿತಾರ್ಥಕ್ಕೆ ಸಿಎಂ ಯಡಿಯೂರಪ್ಪ ಆಗಮಿಸುವ ಸಾಧ್ಯತೆಯಿದೆ.
Published On - 11:40 am, Mon, 10 February 20