‘ನನಗೇ ಅವಾರ್ಡ್ ಸಿಕ್ಕಷ್ಟು ಖುಷಿ ಇದೆ’; ಬಿಗ್ ಬಾಸ್ ವೇದಿಕೆ ಮೇಲೆ ಅನಂತ್ ನಾಗ್​ ನೆನೆದ ಸುದೀಪ್

| Updated By: ರಾಜೇಶ್ ದುಗ್ಗುಮನೆ

Updated on: Jan 26, 2025 | 6:40 PM

ಭಾರತೀಯ ಸಿನಿಮಾ ರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಸಂಭ್ರಮ ಮನೆ ಮಾಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ಸಾಧನೆಗೆ ಗೌರವ ಸೂಚಿಸಿದ್ದಾರೆ. ಹಲವು ವರ್ಷಗಳ ಕಾಲ ನಡೆದ ಈ ಬೇಡಿಕೆ ಈಗ ಈಡೇರಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

‘ನನಗೇ ಅವಾರ್ಡ್ ಸಿಕ್ಕಷ್ಟು ಖುಷಿ ಇದೆ’; ಬಿಗ್ ಬಾಸ್ ವೇದಿಕೆ ಮೇಲೆ ಅನಂತ್ ನಾಗ್​ ನೆನೆದ ಸುದೀಪ್
ಅನಂತ್ ನಾಗ್-ಸುದೀಪ್
Follow us on

ಅನಂತ್ ನಾಗ್ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಗೌರವ ನೀಡಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಕಿಚ್ಚ ಸುದೀಪ್ ಅರು ಕೂಡ ಬಿಗ್ ಬಾಸ್ ವೇದಿಕೆ ಮೇಲೆ ಅನಂತ್ ನಾಗ್ ಅವರನ್ನು ನೆನಪಿಸಿಕೊಂಡರು. ಅವರಿಗೆ ಅವಾರ್ಡ್ ಸಿಕ್ಕಿದ್ದಕ್ಕೆ ತುಂಬಾನೇ ಖುಷಿ ಇದೆ ಎಂದು ಸುದೀಪ್ ಅವರು ಹೇಳಿದ್ದಾರೆ. ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ಅನಂತ್ ನಾಗ್ ಎಂದರೆ ವಿಶೇಷ ಗೌರವ ಹಾಗೂ ಪ್ರೀತಿ ಇದೆ. ಸುದೀಪ್ ಅವರು ಅನಂತ್ ನಾಗ್ ಅವರನ್ನು ಸ್ಫೂರ್ತಿ ಆಗಿ ಇಟ್ಟುಕೊಂಡಿದ್ದಾರೆ. ಅನಂತ್ ನಾಗ್ ಅವರಿಗೆ ಪದ್ಮಭೂಷಣ ಸಿಗಬೇಕು ಎಂಬುದು ಈ ಮೊದಲಿನಿಂದಲೂ ಬರುತ್ತಿದ್ದ ಕೋರಿಕೆಗಳಲ್ಲಿ ಒಂದಾಗಿತ್ತು. ಇದಕ್ಕೆ ಈ ಮೊದಲು ಸುದೀಪ್ ಕೂಡ ಧ್ವನಿ ಗೂಡಿಸಿದ್ದರು. ಕೊನೆಗೂ ಕೋರಿಕೆ ಈಡೇರಿದೆ ಎಂದು ಸುದೀಪ್ ಹೇಳಿದ್ದಾರೆ.

‘ಅನಂತ್ ನಾಗ್ ಅವರಿಗೆ ಪದ್ಮಭೂಷಣ ಬಂದಿದೆ. ಇದು ಹಲವು ವರ್ಷಗಳ ಕೋರಿಕೆ ಆಗಿತ್ತು. ಈ ಕೋರಿಕೆ ಈಡೇರಿದೆ. ಬಹಳ ಲೇಟ್ ಆಗಿ ಬಂದಿದೆ. ಲೇಟ್ ಆಗ್ ಬಂದ್ರೂ ಲೇಟೆಸ್ಟ್ ಆಗಿದೆ’ ಎಂದು ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ಅನಂತ್ ನಾಗ್ ಅವರಿಗೆ ಅಭಿನಂದನೆ ತಿಳಿಸಿದರು.

‘ಅನಂತ್ ನಾಗ್ ಅವರಿಗೆ ಪದ್ಮಭೂಷಣ ಸಿಕ್ಕಿದ್ದು, ನನಗೆ ಸಿಕ್ಕಷ್ಟು ಖುಷಿ ಇದೆ. ವೈಯಕ್ತಿಕವಾಗಿ, ಬಿಗ್ ಬಾಸ್ ತಂಡದ ಕಡೆಯಿಂದ, ಕನ್ನಡದ ಜನತೆಯಿಂದ ನಿಮಗೆ ಅಭಿನಂದನೆಗಳು. ಕನ್ನಡ ಚಿತ್ರರಂಗಕ್ಕೆ ನೀವು ಕೊಟ್ಟ ಕೊಡುಗೆಗೆ ಧನ್ಯವಾದಗಳು. ಲವ್ ಯೂ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿಯನ್ನು ಕರ್ನಾಟಕ ಜನರಿಗೆ ಅರ್ಪಿಸಿದ ಅನಂತ್ ನಾಗ್

ಅನಂತ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಹಾಗೂ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹಲವಾರು ದಶಕಗಳಿಂದ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಪದ್ಮ ಅವಾರ್ಡ್ ಸಿಗಬೇಕು ಎಂಬ ಕೋರಿಕೆ ಮೊದಲಿನಿಂದಲೂ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಕೊನೆಗೂ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 6:40 pm, Sun, 26 January 25