ಬಿಗ್ ಬಾಸ್ ವೇದಿಕೆ ಮೇಲೆ ಮಾಡಿದ ತಪ್ಪಿಗೆ ಅಪ್ಪನ ಬಳಿ ಕ್ಷಮೆ ಕೇಳಿದ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಯಲ್ಲಿ ಸುದೀಪ್ ಅವರ ತಂದೆ ಸಂಜೀವ್ ಮತ್ತು ಮಗಳು ಸಾನ್ವಿ ವೇದಿಕೆ ಮೇಲೆ ಬಂದಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲಿನ ವರ್ತನೆಗೆ ಸುದೀಪ್ ತಮ್ಮ ತಂದೆಗೆ ಕ್ಷಮೆ ಕೇಳಿದರು. ತಮ್ಮ ತಂದೆ-ತಾಯಿಗೆ ಅವರು ಹೊಂದಿರುವ ಅಪಾರ ಪ್ರೀತಿ ಮತ್ತು ಗೌರವವನ್ನು ಈ ಘಟನೆ ಎತ್ತಿ ತೋರಿಸಿದೆ.

ಬಿಗ್ ಬಾಸ್ ವೇದಿಕೆ ಮೇಲೆ ಮಾಡಿದ ತಪ್ಪಿಗೆ ಅಪ್ಪನ ಬಳಿ ಕ್ಷಮೆ ಕೇಳಿದ ಸುದೀಪ್
ಸುದೀಪ್-ಸಂಜೀವ್
Follow us
ರಾಜೇಶ್ ದುಗ್ಗುಮನೆ
|

Updated on: Jan 27, 2025 | 9:22 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಸುದೀಪ್ ಪಾಲಿಗೆ ತುಂಬಾನೇ ವಿಶೇಷವಾಗಿತ್ತು. ಇದಕ್ಕೆ ಕಾರಣ ಅವರ ಕುಟುಂಬ ವೇದಿಕೆ ಮೇಲೆ ಬಂದಿತ್ತು. ಸುದೀಪ್ ಅವರ ತಂದೆ ಸಂಜೀವ್ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆ ಏರಿದ್ದರು. ಇದಲ್ಲದೆ, ಅವರ ಮಗಳು ಸಾನ್ವಿ ಕೂಡ ಬಂದಿದ್ದರು. ಇದು ಸುದೀಪ್ ಖುಷಿಯನ್ನು ಹೆಚ್ಚಿಸಿತ್ತು. ಅವರು ವೇದಿಕೆ ಏರಿದಾಗ ತಂದೆಗೆ ಕ್ಷಮೆ ಕೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

ಸುದೀಪ್ ಅವರು ಬೇರೆ ರಾಜ್ಯಗಳಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದರೂ ಬಿಗ್ ಬಾಸ್ ಶೂಟ್ ಸಂದರ್ಭದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಈ ರೀತಿ ಬರುವಾಗ ಅವರು ಒಮ್ಮೆ ಮನೆಗೆ ತೆರಳಿ ತಂದೆ-ತಾಯಿನ ಭೇಟಿ ಮಾಡಿ ಆಶೀರ್ವಾದ ಪಡೆದೇ ಬಿಗ್ ಬಾಸ್ ಸೆಟ್​ಗೆ ತೆರಳುತ್ತಿದ್ದರು. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಕಿಚ್ಚ ಸುದೀಪ್ ಅವರಿಗೆ ತಂದೆ-ತಾಯಿ ಬಗ್ಗೆ ವಿಶೇಷ ಪ್ರೀತಿ ಇದೆ ಎಂಬುದನ್ನು ಈ ಘಟನೆ ಸಾಬೀತು ಮಾಡುತ್ತದೆ. ಈ ಗೌರವಕ್ಕೆ ಧಕ್ಕೆ ಬಂದರಿಬಹುದು ಎಂದು ಸುದೀಪ್​ಗೆ ಅನಿಸಿದೆ. ಈ ಕಾರಣಕ್ಕೆ ತಂದೆ ಬಳಿ ಕ್ಷಮೆ ಕೇಳಿದರು.

ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಗತ್ತಿನಿಂದ ಮಾತನಾಡುತ್ತಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಇಷ್ಟ ಆಗುತ್ತಾರೆ. ಆದರೆ, ಈ ಬಾರಿ ಹೀಗೆ ಮಾತನಾಡುವಾಗ ಎದುರಿಗೆ ತಂದೆ ಕೂಡ ಇದ್ದರು. ಅವರ ಎದುರು ಈ ರೀತಿ ಮಾತನಾಡಿದ್ದಕ್ಕೆ ಸುದೀಪ್ ಅವರಿಗೆ ಮುಜುಗರ ಎನಿಸಿದೆ. ‘ವೇದಿಕೆ ಮೇಲೆ ಬಂದು ತಂದೆ ಎದುರು ಜೋಬ್ ಅಲ್ಲಿ ಕೈ ಹಾಕಿಕೊಂಡು ನಿಂತಿದ್ದು ಇಲ್ಲ. ಕ್ಷಮೆ ಇರಲಿ ಅಪ್ಪ’ ಎಂದು ಸುದೀಪ್  ಕೋರಿದರು.

ಇದನ್ನೂ ಓದಿ: ಮಂಜು ನಿರ್ಧಾರಕ್ಕೆ ಸುದೀಪ್ ಅಸಮಾಧಾನ; ಬಿಗ್ ಬಾಸ್ ವೇದಿಕೆ ಮೇಲೆ 2 ಲಕ್ಷ ರೂ. ದಾನ ಮಾಡಿದ ಕಿಚ್ಚ

ಸುದೀಪ್ ಅವರು ತಂದೆಯನ್ನು ಬಾಸ್ ಎಂದೇ ಸಂಬೋಧಿಸೋದು. ಈ ಮೊದಲು ಕೂಡ ಇದನ್ನು ಅವರು ಹೇಳಿಕೊಂಡಿದ್ದರು. ಸುದೀಪ್ ಅವರು ತಾಯಿಯನ್ನು ಕಳೆದುಕೊಂಡಿದ್ದು, ಸಾಕಷ್ಟು ನೋವಿನಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್