AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಲ್ಲಿಂದಲೇ ವಿಚ್ಛೇದನ ಪ್ರಕ್ರಿಯೆ ಶುರು ಮಾಡಬೇಕಾಗುತ್ತದೆ’; ಎಚ್ಚರಿಕೆ ಕೊಟ್ಟ ಅಂಕಿತಾ ಲೋಖಂಡೆ

ಪ್ರತಿದಿನ ಅಂಕಿತಾ-ವಿಕ್ಕಿ ಯಾವುದಾದರೂ ಕಾರಣಕ್ಕೆ ಜಗಳವಾಡುತ್ತಾ ಇರುತ್ತಾರೆ. ಈ ಶೋನಲ್ಲಿ ಏನಾಗಬಾರದು ಅಂದುಕೊಡಿದ್ದರೋ ಅದೇ ಆಗುವ ಸೂಚನೆ ಸಿಕ್ಕಿದೆ. ಅಂಕಿತಾ ನೇರವಾಗಿ ವಿಕ್ಕಿಗೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾರೆ.

‘ಇಲ್ಲಿಂದಲೇ ವಿಚ್ಛೇದನ ಪ್ರಕ್ರಿಯೆ ಶುರು ಮಾಡಬೇಕಾಗುತ್ತದೆ’; ಎಚ್ಚರಿಕೆ ಕೊಟ್ಟ ಅಂಕಿತಾ ಲೋಖಂಡೆ
ಅಂಕಿತಾ-ವಿಕ್ಕಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jan 01, 2024 | 2:29 PM

Share

ಸಲ್ಮಾನ್ ಖಾನ್ (Salman Khan) ನಡೆಸಿಕೊಡುತ್ತಿರುವ ‘ಬಿಗ್ ಬಾಸ್ ಹಿಂದಿ ಸೀಸನ್ 17′ ಶೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈ ಸೀಸನ್ ಮೊದಲ ಸಂಚಿಕೆಯಿಂದಲೇ ಪ್ರೇಕ್ಷಕರನ್ನು ರಂಜಿಸುತ್ತಿದೆ. ಸಾಮಾನ್ಯ ಸ್ಪರ್ಧಿಗಳ ಜೊತೆಗೆ, ಎರಡು ವಿವಾಹಿತ ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕರೆತರಲಾಗಿದೆ. ಪತಿ-ಪತ್ನಿಯರು ಸಾಮಾನ್ಯ ಸ್ಪರ್ಧಿಗಳಿಗಿಂತ ಹೆಚ್ಚು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಬಿಗ್ ಬಾಸ್​​ನಲ್ಲಿ ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡುವ ಸೂಚನೆ ಸಿಕ್ಕಿದೆ. ‘ಪವಿತ್ರ ರಿಷ್ತ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್ ಜೋಡಿ ಗಮನ ಸೆಳೆಯುತ್ತಿದೆ. ಇವರ ವಿಚ್ಛೇದನದ ವಿಚಾರ ಮತ್ತೆ ಚರ್ಚೆಯಲ್ಲಿದೆ. ಮತ್ತೆ ಅಂಕಿತಾ ಅವರು ವಿಚ್ಛೇದನ ನೀಡುವ ಬಗ್ಗೆ ಪತಿಗೆ ಬೆದರಿಕೆ ಹಾಕಿದ್ದಾರೆ.

ಪ್ರತಿದಿನ ಅಂಕಿತಾ-ವಿಕ್ಕಿ ಯಾವುದಾದರೂ ಕಾರಣಕ್ಕೆ ಜಗಳವಾಡುತ್ತಾ ಇರುತ್ತಾರೆ. ಈ ಶೋನಲ್ಲಿ ಏನಾಗಬಾರದು ಅಂದುಕೊಡಿದ್ದರೋ ಅದೇ ಆಗುವ ಸೂಚನೆ ಸಿಕ್ಕಿದೆ. ಅಂಕಿತಾ ನೇರವಾಗಿ ವಿಕ್ಕಿಗೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾರೆ. ಇವರು ವಿಚ್ಛೇದನ ಪಡೆಯದಿರಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಕೋರ್ಟ್ ಸೆಟ್ ಹಾಕಲಾಗಿತ್ತು. ಇದರಲ್ಲಿ ಮುನಾವರ್ ಫಾರೂಕಿ ಮತ್ತು ಅಂಕಿತಾ ಲೋಖಂಡೆ ಇಬ್ಬರನ್ನೂ ವಕೀಲರನ್ನಾಗಿ ನೇಮಿಸಲಾಗಿತ್ತು. ವಿಕ್ಕಿ ಜೈನ್ ಅವರ ವಿರುದ್ಧ ಇವರು ಹರಿಹಾಯ್ದರು.

ಈ ಟಾಸ್ಕ್ ಪ್ರಕಾರ ಸ್ಪರ್ಧಿಗಳ ವಿಚಾರಣೆ ಮಾಡಬೇಕು. ಟಾಸ್ಕ್ ಪ್ರಾರಂಭವಾಗುವ ಮೊದಲು ಶುಲ್ಕದ ಬಗ್ಗೆ ಚರ್ಚಿಸಬೇಕು ಎಂದು ವಿಕ್ಕಿಗೆ ಬಿಗ್ ಬಾಸ್​​ ಹೇಳಿದರು. ಮುನಾವರ್ ಜೊತೆ ಶುಲ್ಕದ ಬಗ್ಗೆ ಚರ್ಚಿಸಲು ಅಂಕಿತಾಗೆ ಬಿಗ್ ಬಾಸ್ ಕೂಡ ಹೇಳಿದ್ದರು. ವಿಕ್ಕಿ ಅವರು ಅಂಕಿತಾ ಮೇಲೆ ಕಿಡಿಕಾರಿದರು. ಶುಲ್ಕದ ಬಗ್ಗೆ ಚರ್ಚಿಸಲು ಹಿಂದೇಟು ಹಾಕಿದ್ದಲ್ಲದೇ ಕಿಡಿಕಾರಿದ್ದಾರೆ.

ಇಷ್ಟೆಲ್ಲ ಆದ ನಂತರ ಅಂಕಿತಾಗೆ ವಿಕ್ಕಿ ಶುಲ್ಕ ವಂಚನೆ ಮಾಡುತ್ತಿರುವುದು ನಿರಂತರವಾಗಿ ಕಂಡು ಬಂದಿದೆ. ಕೊನೆಗೆ ಅಂಕಿತಾ ವಿಕ್ಕಿಯ ವರ್ತನೆಯಿಂದ ಬೇಸರಗೊಂಡು. ‘ನನ್ನೊಂದಿಗೆ ಇದೆಲ್ಲ ಮಾಡಬೇಡ. ಇಲ್ಲದಿದ್ದರೆ, ನಮ್ಮ ವಿಚ್ಛೇದನ ಪ್ರಕರಣದ ಪ್ರಕ್ರಿಯೆ ಇಲ್ಲಿಂದ ಪ್ರಾರಂಭವಾಗುತ್ತದೆ’ ಎಂದಿದ್ದಾರೆ ಅಂಕಿತಾ.

ಅಂಕಿತಾ ಅವರ ಬಾಯಿಂದ ಈ ಮಾತುಗಳನ್ನು ಕೇಳಿದ ನಂತರ ಮನೆಯಲ್ಲಿದ್ದ ಇತರ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಆಗ ಮುನಾವರ್, ‘ನೀವು ತುಂಬಾ ಮಾತನಾಡುತ್ತಿದ್ದೀರಿ’ ಎಂದರು. ನ್ಯಾಯಾಲಯದ ಕಾರ್ಯದ ಸಮಯದಲ್ಲಿ, ವಿಕ್ಕಿ ಜೈನ್ ನಿರಂತರವಾಗಿ ತನ್ನ ಅಭಿಪ್ರಾಯವನ್ನು ಹೇಳಲು ಮತ್ತು ಆಯೇಷಾ ಖಾನ್ ಅವರನ್ನು ಅಣಕಿಸಲು ಪ್ರಯತ್ನಿಸುತ್ತಿದ್ದರು. ಮುನಾವರ್ ವಿರುದ್ಧ ಹರಿಹಾಯ್ದಿದ್ದರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ಪತಿ-ಪತ್ನಿ ಸಂಬಂಧ; ಅಂಕಿತಾ ಕೆನ್ನೆಗೆ ಹೊಡೆಯಲು ಹೋದ ವಿಕ್ಕಿ

ಕೆಲವು ದಿನಗಳ ಹಿಂದೆ ಅಂಕಿತಾ ಮತ್ತು ವಿಕ್ಕಿ ವೀಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅಂಕಿತಾ ಮೇಲೆ ಕೈ ಎತ್ತಲು ವಿಕ್ಕಿ ಮುಂದಾಗಿದ್ದರು. ಈ ವಿಡಿಯೋ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ಇದಲ್ಲದೇ ವಿಚ್ಛೇದನ ನೀಡುವ ಬಗ್ಗೆಯೂ ಅಂಕಿತಾ ಹಾಗೂ ವಿಕ್ಕಿ ಚರ್ಚೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:22 pm, Mon, 1 January 24