Yash Birthday: ಯಶ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಸಾಲು ಸಾಲು ಸರ್​ಪ್ರೈಸ್?

ನೆಚ್ಚಿನ ನಟನ ಬರ್ತ್​ಡೇ ಬಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಈಗ ಯಶ್ ಬರ್ತ್​ಡೇ ಸಮೀಪಿಸಿದೆ. ಹೀಗಾಗಿ, ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಜೊತೆ ಈ ವರ್ಷ ಬರ್ತ್​ಡೇ ಆಚರಿಸಿಕೊಳ್ಳಲು ಪ್ಲಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

Yash Birthday: ಯಶ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಸಾಲು ಸಾಲು ಸರ್​ಪ್ರೈಸ್?
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 01, 2024 | 8:11 AM

ಯಶ್ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್​. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಅಲ್ಲಿಯೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಇತ್ತೀಚಿಗಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಪ್ಯಾನ್​ ಇಂಡಿಯಾಗೆ ಸೂಕ್ತವಾಗುತ್ತದೆ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ‘ಟಾಕ್ಸಿಕ್’ ಎಂದು ಹೆಸರು ಇಡಲಾಗಿದೆ. ಈ ಚಿತ್ರಕ್ಕೆ ಮಲಯಾಳಂನ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗ ಎಲ್ಲರ ಗಮನ ಯಶ್ ಅವರ ಜನ್ಮದಿನದ ಮೇಲಿದೆ. ಜನವರಿ 8 ಯಶ್ ಬರ್ತ್​ಡೇ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಅಂದು ಯಶ್ (Yash) ಹಾಗೂ ಅವರ ತಂಡದ ಕಡೆಯಿಂದ ಅಭಿಮಾನಿಗಳಿಗೆ ಸರ್​ಪ್ರೈಸ್ ಸಿಗಲಿದೆ ಎನ್ನಲಾಗುತ್ತಿದೆ.

ನೆಚ್ಚಿನ ನಟನ ಬರ್ತ್​ಡೇ ಬಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಈಗ ಯಶ್ ಬರ್ತ್​ಡೇ ಸಮೀಪಿಸಿದೆ. ಹೀಗಾಗಿ, ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಜೊತೆ ಈ ವರ್ಷ ಬರ್ತ್​ಡೇ ಆಚರಿಸಿಕೊಳ್ಳಲು ಪ್ಲಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಯಶ್ ಕೂಡ ಈ ವರ್ಷ ಸಖತ್ ಖುಷಿ ಮೂಡ್​ನಲ್ಲಿ ಇದ್ದಾರೆ. ಅವರು ಕೂಡ ಅಭಿಮಾನಿಗಳನ್ನು ಭೇಟಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ ಎಂದು ವರದಿ ಆಗಿದೆ. ಅಭಿಮಾನಿಗಳನ್ನು ಭೇಟಿ ಮಾಡೋಕೆ ಸ್ಥಳ ಹಾಗೂ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ.

ಇನ್ನು, ಹೀರೋ ಬರ್ತ್​ಡೇ ಎಂದರೆ ಸಿನಿಮಾ ತಂಡದಿಂದ ಒಂದಷ್ಟು ಘೋಷಣೆಗಳು ಆಗುತ್ತವೆ. ‘ಟಾಕ್ಸಿಕ್’ ತಂಡ ಕೂಡ ಈ ಬಗ್ಗೆ ಯೋಜನೆ ಹಾಕಿಕೊಂಡಿದೆ. ಕಳೆದ ಡಿಸೆಂಬರ್​ನಲ್ಲಿ ಸಿನಿಮಾ ಅನೌನ್ಸ್ ಆಯಿತು. ಈಗ ಜನವರಿ 8ರಂದು ಈ ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡುವ ಆಲೋಚನೆಯಲ್ಲಿ ತಂಡ ಇದೆ.

‘ಟಾಕ್ಸಿಕ್’ ಟೈಟಲ್ ರಿವೀಲ್ ಮಾಡುವಾಗ ಯಶ್ ಅವರನ್ನು ಎಲ್ಲಿಯೂ ನೇರವಾಗಿ ತೋರಿಸಿಲ್ಲ. ಅವರ ಬರ್ತ್​ಡೇ ದಿನ ವಿಶೇಷ ಗ್ಲಿಂಪ್ಸ್ ರಿಲೀಸ್ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

‘ಕೆಜಿಎಫ್ 2’ ಬಳಿಕ ಯಶ್ ಅವರು ಸಾಕಷ್ಟು ಸಮಯ ತೆಗೆದುಕೊಂಡರು. ಅವರು ತಮ್ಮ ಮುಂದಿನ ಸಿನಿಮಾಗೆ ಗೀತು ಮೋಹನ್​ದಾಸ್ ಅವರಿಗೆ ಅವಕಾಶ ನೀಡಿದ್ದು ಫ್ಯಾನ್ಸ್​ಗೆ ಅಚ್ಚರಿ ತಂದಿದೆ. ಗೀತು ನಿರ್ದೇಶನದ ಸಿನಿಮಾಗಳು ಹಲವು ಪ್ರಶಸ್ತಿ ಬಾಚಿಕೊಂಡಿವೆ. ಹೀಗಾಗಿ, ಯಶ್ ಕೂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಎಂಬ ವಿಚಾರ ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ‘ಯಶ್’ ಸಿನಿಮಾ ಬಗ್ಗೆ ನಿರ್ದೇಶಕಿ ಮಾತು: ಕತೆಯ ಎಳೆ ಏನು?

ಯಶ್ ಅವರಿಗೆ ಈಗ 37 ವರ್ಷ. ಜನವರಿ 8ರಂದು ಅವರು 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​ಡೇಗೆ ಈಗಲೇ ಕೌಂಟ್​ಡೌನ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಯಾವುದಾದರೂ ಹೊಸ ಸಿನಿಮಾ ಘೋಷಣೆ ಆಗಲಿದೆಯೇ ಎನ್ನುವ ಕುತೂಹಲ ಕೂಡ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ