Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಣ್ಣಯ್ಯ’ ಸೀರಿಯಲ್ ನಟನ ಹೊಸ ಸಿನಿಮಾ ‘ಅಪಾಯವಿದೆ ಎಚ್ಚರಿಕೆ’; ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ

ಸೀರಿಯಲ್ ಮತ್ತು ಸಿನಿಮಾಗೆ ಹತ್ತಿರದ ನಂಟು. ಧಾರಾವಾಹಿಗಳಲ್ಲಿ ನಟಿಸಿದ ಹಲವರ ಮುಂದಿನ ಗುರಿಯೇ ಸಿನಿಮಾ. ಕಿರುತೆರೆಯಲ್ಲಿ ಗುರುತಿಸಿಕೊಂಡ ಬಹುತೇಕರು ಹಿರಿತರೆಯಲ್ಲಿ ಸಾಧನೆ ಮಾಡುವ ಕನಸು ಇಟ್ಟುಕೊಂಡಿರುತ್ತಾರೆ. ಅಂಥವರ ಸಾಲಿನಲ್ಲಿ ವಿಕಾಶ್ ಉತ್ತಯ್ಯ ಕೂಡ ಇದ್ದಾರೆ. ಅವರ ಹೊಸ ಸಿನಿಮಾದ ಬಗ್ಗೆ ಇಲ್ಲಿದೆ ಮಾಹಿತಿ..

‘ಅಣ್ಣಯ್ಯ’ ಸೀರಿಯಲ್ ನಟನ ಹೊಸ ಸಿನಿಮಾ ‘ಅಪಾಯವಿದೆ ಎಚ್ಚರಿಕೆ’; ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ
‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Dec 08, 2024 | 5:03 PM

ಸ್ಯಾಂಡಲ್​ವುಡ್​ನಲ್ಲಿ ಗಟ್ಟಿ ಕಥಾಹಂದರದ ಸಿನಿಮಾಗಳಿಗೆ ಜನಮೆಚ್ಚುಗೆ ಸಿಗುತ್ತಿದೆ. ಅವುಗಳ ಸಾಲಿಗೆ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಕೂಡ ಸೇರ್ಪಡೆ ಆಗುವ ಭರವಸೆ ಸಿಕ್ಕಿದೆ. ಇತ್ತೀಚೆಗೆ ಈ ಸಿನಿಮಾದ ಪೋಷನ್ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಈ ಸಿನಿಮಾಗೆ ಅಭಿಜಿತ್ ತೀರ್ಥಹಳ್ಳಿ ಅವರು ನಿರ್ದೇಶನ ಮಾಡಿದ್ದಾರೆ. ‘ಜೀ‌ ಕನ್ನಡ’ ಚಾನೆಲ್​ನಲ್ಲಿ ಪ್ರಸಾರ ಆಗುತ್ತಿರುವ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ವಿಕಾಶ್ ಉತ್ತಯ್ಯ ಅವರು ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ.

ವಿ.ಜಿ. ಮಂಜುನಾಥ್ ಮತ್ತು ಪೂರ್ಣಿಮಾ ಎಂ. ಗೌಡ ಅವರು ‘ಅಪಾಯವಿದೆ ಎಚ್ಚರಿಕೆ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ‘ನಾನು ‘ಕದ್ದು ಮಚ್ಚಿ’ ಚಿತ್ರದ ನಂತರ ನಿರ್ಮಾಣ ಮಾಡಿದ ಸಿನಿಮಾ ಇದು. ನಿರ್ಮಾಣದಲ್ಲಿ ಸಹೋದರಿ ಪೂರ್ಣಿಮಾ ಸಹ ಕೈ ಜೋಡಿಸಿದ್ದಾರೆ. ನಿರ್ದೇಶಕರ ಶ್ರಮ ಈ ಸಿನಿಮಾಗೆ ಸಾಕಷ್ಟಿದೆ ಎಂದಿದ್ದಾರೆ ನಿರ್ಮಾಪಕ ಮಂಜುನಾಥ್.

‘ಅಪಾಯವಿದೆ ಎಚ್ಚರಿಕೆ’ ಚಿತ್ರತಂಡ

ಕಳೆದ 10 ವರ್ಷಗಳಿಂದ ಅಭಿಜಿತ್ ತೀರ್ಥಹಳ್ಳಿ ಅವರು ಚಿತ್ರರಂಗದಲ್ಲಿ ಇದ್ದಾರೆ. ‘ಕೆಲವು ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿದ್ದೆ. ಈಗ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕ ಆಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಪ್ರತಿಯೊಂದು‌ ಪಾತ್ರವೂ ಒಂದೊಂದು ತತ್ವವನ್ನು ಪ್ರತಿನಿಧಿಸುತ್ತದೆ‌’ ಎಂದು ಅಭಿಜಿತ್ ಹೇಳಿದ್ದಾರೆ.

ಇದನ್ನೂ ಓದಿ: ದಿ ರಾಜಾ ಸಾಬ್: ಹುಟ್ಟುಹಬ್ಬದ ದಿನ ಹಾರರ್ ಅವತಾರದಲ್ಲಿ ದರ್ಶನ ನೀಡಿದ ಪ್ರಭಾಸ್

ವಿಕಾಶ್ ಉತ್ತಯ್ಯ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ರಾಧಾ ಭಗವತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್, ಅಡ್ವೆಂಚರ್ ಹಾಗೂ ಹಾರರ್​ ಶೈಲಿಯ ಕಹಾನಿ ಈ ಸಿನಿಮಾದಲ್ಲಿ ಇದೆ. ಸುನಾದ್ ಗೌತಮ್ ಅವರು ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ 3 ಹಾಡುಗಳಿದ್ದು, ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಲಿವೆ. ಹರ್ಷಿತ್ ಪ್ರಭು ಸಂಕಲನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ