ಆಶಿಕಾ, ದುಷ್ಯಂತ್ ನಟನೆಯ ‘ಗತವೈಭವ’ ಸಿನಿಮಾಗೆ ಶೂಟಿಂಗ್ ಮುಕ್ತಾಯ
‘ಗತವೈಭವ’ ಸಿನಿಮಾದಲ್ಲಿ ದುಷ್ಯಂತ್, ಆಶಿಕಾ ರಂಗನಾಥ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾಗೆ ಅನೇಕ ಲೊಕೇಷನ್ಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಜೊತೆ ಒಂದು ಲವ್ಸ್ಟೋರಿ ಹೇಳಲು ಸುನಿ ಪ್ಲ್ಯಾನ್ ಮಾಡಿದ್ದಾರೆ. ಚಿತ್ರದ ಕೆಲಸಗಳು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ.
![ಆಶಿಕಾ, ದುಷ್ಯಂತ್ ನಟನೆಯ ‘ಗತವೈಭವ’ ಸಿನಿಮಾಗೆ ಶೂಟಿಂಗ್ ಮುಕ್ತಾಯ](https://images.tv9kannada.com/wp-content/uploads/2025/01/ashika-ranganath-dushyanth.jpg?w=1280)
ಪ್ರತಿಯೊಂದು ಸಿನಿಮಾದಲ್ಲೂ ನಿರ್ದೇಶಕ ಸಿಂಪಲ್ ಸುನಿ ಅವರು ಡಿಫರೆಂಟ್ ಕಥಾವಸ್ತುವನ್ನು ಪ್ರೇಕ್ಷಕರ ಮುಂದಿಡುತ್ತಾರೆ. ಈಗ ಅವರು ‘ಗತವೈಭವ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರತಂಡದಿಂದ ಹೊಸದೊಂದು ಅಪ್ಡೇಟ್ ಸಿಕ್ಕಿದೆ. ‘ಗತವೈಭವ’ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ವಿದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಪೋರ್ಚುಗಲ್ ಹಾಗೂ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಿದೆ ‘ಗತವೈಭವ’ ಚಿತ್ರತಂಡ.
‘ಗತವೈಭವ’ ಸಿನಿಮಾಗೆ 100 ದಿನಗಳ ಕಾಲ್ ಶೀಟ್ಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಹೊಸ ನಟ ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಶೂಟಿಂಗ್ ಅನುಭವನ್ನು ಚಿತ್ರತಂಡದವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ‘ಗತವೈಭವ’ ಚಿತ್ರವನ್ನು ಬಿಡುಗಡೆ ಮಾಡಲು ಗುರಿ ಇಟ್ಟುಕೊಳ್ಳಲಾಗಿದೆ.
View this post on Instagram
ಡೈರೆಕ್ಟರ್ ಸಿಂಪಲ್ ಸುನಿ ಅವರು ಎಲ್ಲ ಬಗೆಯ ಸಿನಿಮಾಗಳನ್ನೂ ಪ್ರಯತ್ನಿಸಿದ್ದಾರೆ. ಕಾಮಿಡಿ, ಸೀರಿಯಸ್, ಹಾರರ್, ಫ್ಯಾಂಟಸಿ ಮಂತಾದ ಪ್ರಕಾರಗಳ ಸಿನಿಮಾವನ್ನು ಅವರು ಮಾಡಿದ್ದಾರೆ. ಈಗ ಅವರು ‘ಗತವೈಭವ’ ಸಿನಿಮಾದಲ್ಲಿ ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಶೈಲಿಯಲ್ಲಿ ತೆರೆಗೆ ತರುತ್ತಿದ್ದಾರೆ. ಈ ಚಿತ್ರದ ಮೂಲಕ ನಟ ದುಷ್ಯಂತ್ ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಯುರೋಪ್ನಲ್ಲಿ ಜಾಲಿ ಡ್ರೈವ್ ಮಾಡಿದ ಆಶಿಕಾ ರಂಗನಾಥ್
‘ಗತವೈಭವ’ ಸಿನಿಮಾಗೆ ಸಿಂಪಲ್ ಸುನಿ ಅವರು ಡೈರೆಕ್ಟರ್ ಮಾತ್ರವಲ್ಲ ನಿರ್ಮಾಪಕನೂ ಹೌದು. ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಬರೆದಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಅವರು ಸಂಗೀತ ನೀಡಿದ್ದಾರೆ. ಹಲವು ಕಡೆಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಮಂಗಳೂರು, ಕೊಡಗು, ಪೋರ್ಚುಗಲ್ ಮುಂತಾದೆಡೆ ಚಿತ್ರೀಕರಣ ನಡೆದಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.