AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ನಟಿಗೆ ಲೈಂಗಿಕ ಕಿರುಕುಳ; ನಿರ್ಮಾಪಕ ಅರವಿಂದ್ ವೆಂಕಟೇಶ ರೆಡ್ಡಿ ಬಂಧನ

ಕನ್ನಡ ನಟಿ ಕಿರುಕುಳ ಪ್ರಕರಣದಲ್ಲಿ ಎವಿಆರ್ ಗ್ರೂಪ್ ಸಂಸ್ಥಾಪಕ ಅರವಿಂದ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. 2021ರಲ್ಲಿ ಪರಿಚಯ, ನಂತರ ಪ್ರೀತಿ-ಕಾಳಜಿ, ಬಳಿಕ ಸಂಪರ್ಕ ಕಡಿತಗೊಳಿಸಿ ಕಿರುಕುಳ ಶುರುಮಾಡಿದ್ದ. ಮದುವೆ ಭರವಸೆ, ನಟಿಯ ಆತ್ಮಹತ್ಯೆ ಯತ್ನ, ಆಸ್ಪತ್ರೆ ಸೇರಿದಾಗ ಹಲ್ಲೆ ಸೇರಿದಂತೆ ಹಲವು ಆರೋಪಗಳಿವೆ.

ಕನ್ನಡದ ನಟಿಗೆ ಲೈಂಗಿಕ ಕಿರುಕುಳ; ನಿರ್ಮಾಪಕ ಅರವಿಂದ್ ವೆಂಕಟೇಶ ರೆಡ್ಡಿ ಬಂಧನ
ಅರವಿಂದ್-ನಟಿ
ರಾಜೇಶ್ ದುಗ್ಗುಮನೆ
|

Updated on: Nov 15, 2025 | 11:40 AM

Share

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಆರ್ ಗ್ರೂಪ್ ಸಂಸ್ಥಾಪಕ ಆಗಿರುವ ಅರವಿಂದ್ ರೆಡ್ಡಿನ ಬಂಧಿಸಲಾಗಿದೆ. ಎಸಿಪಿ ಚಂದನ್ ಮತ್ತು ತಂಡದಿಂದ ಆರೋಪಿ ಅರೆಸ್ಟ್ ಮಾಡಲಾಗಿದೆ. ಶ್ರೀಲಂಕದಿಂದ ಬೆಂಗಳೂರಿಗೆ ಬರುವಾಗ ಆರೋಪಿ ಲಾಕ್ ಆಗಿದ್ದಾನೆ. ಕಳೆದ ತಿಂಗಳು 17ರಂದು ಅರವಿಂದ್ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಕನ್ನಡದಲ್ಲಿ 9ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ನಟಿ ಅಭಿನಯಿಸಿದ್ದಾರೆ. 2021ರಲ್ಲಿ ಅರವಿಂದ್​ಗೂ ಈ ನಟಿಗೂ ಪರಿಚಯ ಬೆಳೆದಿತ್ತು. 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ‘ಲಾರ್ಸ್​ ಕ್ರಿಕೆಟ್ ಕಪ್’ ಉದ್ಘಾಟನೆಗೆ ಬರುವಂತೆ ಅರವಿಂದ್ ನಟಿ ಬಳಿ ಕೇಳಿದ್ದ. ಅಂತೆಯೇ ನಟಿ ತೆರಳಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಅಲ್ಲಿಂದ ಪ್ರೀತಿ-ಕಾಳಜಿಯಿಂದ ಅರವಿಂದ್ ನಡೆದುಕೊಳ್ಳುತ್ತಿದ್ದನಂತೆ. ಆ ಬಳಿಕ 2022ರ ಆಗಸ್ಟ್​ನಲ್ಲಿ ಅರವಿಂದ್ ನಟಿಯ ಜೊತೆ ಸಂಪರ್ಕ ಕಳೆದುಕೊಂಡ. ಇದಕ್ಕೆ ಕಾರಣ ನಟಿಗೆ ತಿಳಿದಿರಲಿಲ್ಲ.

ನಂತರ ಅರವಿಂದ್ ಮತ್ತೆ ನಟಿಯ ಜೊತೆ ಸಂಪರ್ಕ ಬೆಳೆಸಿದ್ದೂ ಅಲ್ಲದೆ, ನಟಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಆತನ ಮಾನಸಿಕ ಸ್ಥಿತಿ ಹಾಗೂ ಕುಡಿತದ ಚಟದ ಬಗ್ಗೆ ನಟಿಗೆ ಆಗ ಗೊತ್ತಾಯಿತು. 2024ರಲ್ಲಿ ಒಮ್ಮೆ ಅರವಿಂದ್ ನಟಿಗೆ ಕರೆ ಮಾಡಿದ್ದೂ ಅಲ್ಲದೆ, ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದ. ಇದರಿಂದ ಭಯಗೊಂಡ ನಟಿ ನೂರು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ. ಈ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ನಂತರ ಅರವಿಂದ್ ಮನೆಗೆ ಬಂದು ನಟಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದ. ಈ ವಿಚಾರವನ್ನು ನಟಿಯ ಮನೆಯವರಿಗೆ ಹೇಳಲು ಅವಕಾಶವನ್ನೇ ನೀಡಿರಲಿಲ್ಲವಂತೆ. ಕರೆ ಮಾಡುತ್ತೇನೆ ಮೊಬೈಲ್ ಕೊಡು ಎಂದು ನಟಿ ಹೇಳಿದಾಗ, ಅರವಿಂದ್ ಏಕಾಏಕಿ ನಟಿಯ ಮೇಲೆ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ. ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದ.

ನಂತರ ನಟಿ ಬೇರೆ ದಾರಿ ಕಾಣದೆ ತಾಯಿ ಬಳಿ ವಿಚಾರ ಹೇಳಿಕೊಂಡಿದ್ದರು. ಆಗ ಅರವಿಂದ್, ‘ನಟಿ ನನ್ನಿಂದ ಸಾಕಷ್ಟು ಖರ್ಚು ಮಾಡಿಸಿದ್ದಾಳೆ. ಕೋಟಿ ರೂಪಾಯಿ ಕೊಡಬೇಕು’ ಎಂದು ಬೆದರಿಕೆ ಹಾಕಿದ್ದ.  ನಂತರ ನಟಿ ಹಾಗೂ ಅವರ ಗೆಳೆಯರ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಅರವಿಂದ್ ಮಾಡಿದ್ದರಂತೆ. ಈ ಎಲ್ಲಾ ಕಾರಣಕ್ಕೆ ಅವರನ್ನು ಬಂಧಿಸುವಂತೆ ನಟಿ ಕೋರಿದ್ದರು.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್​​ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ

ಅರವಿಂದ್ ರಿಯಲ್ ಎಸ್ಟೇಟ್ ಉದ್ಯಮಿ. ‘ಮಹಾರಾಜ ಬಳ್ಳಾರಿ ಟಸ್ಕರ್ಸ್’ ಕ್ರಿಕೆಟ್ ತಂಡದ ನಾಯಕ ಕೂಡ ಹೌದು. ಆತ ಸಿನಿಮಾ ನಿರ್ಮಾಪಕ ಕೂಡ ಹೌದು. ಚಲನ ಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.