ಧನಂಜಯ (Dhananjay) ನಟನೆಯ ‘ಬಡವ ರಾಸ್ಕಲ್’ ಸಿನಿಮಾ (Badava Rasacal Movie) ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ‘ಒಟಿಟಿ’ಯಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಪ್ರಶಂಸೆ ಸಿಕ್ಕಿದೆ. ಈಗ ಈ ಸಿನಿಮಾ ಟಾಲಿವುಡ್ಗೆ ಕಾಲಿಡೋಕೆ ರೆಡಿ ಆಗಿದೆ. ‘ಬಡವ ರಾಸ್ಕಲ್’ ಸಿನಿಮಾ ತೆಲುಗಿಗೆ ಡಬ್ ಆಗಿ ತೆರೆಗೆ ಬರುತ್ತಿದೆ. ಶೀಘ್ರವೇ ರಿಲೀಸ್ ದಿನಾಂಕ ಘೋಷಣೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಚಿತ್ರ ತೆಲುಗಿನಲ್ಲಿ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಗುವ ನಿರೀಕ್ಷೆ ಇದೆ. ಇದಕ್ಕೆ ಕಾರಣ ‘ಪುಷ್ಪ’ ಚಿತ್ರ (Pushpa Movie). ‘ಬಡವ ರಾಸ್ಕಲ್’ ಚಿತ್ರಕ್ಕಿಂತ ಒಂದು ವಾರ ಮೊದಲು ತೆರೆಗೆ ಬಂದಿದ್ದು ‘ಪುಷ್ಪ’ ಚಿತ್ರ. ಈ ಸಿನಿಮಾದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಧನಂಜಯ ಅವರು ಮಿಂಚಿದ್ದರು. ‘ಪುಷ್ಪ 2’ನಲ್ಲೂ ಅವರ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸುವ ಸಾಧ್ಯತೆ ಇದೆ. ಸೂಪರ್ ಹಿಟ್ ಚಿತ್ರದ ಮೂಲಕ ಧನಂಜಯ ಅವರು ಟಾಲಿವುಡ್ ಚಿತ್ರ ಲೋಕಕ್ಕೆ ಪರಿಚಯ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ‘ಬಡವ ರಾಸ್ಕಲ್’ ತೆಲುಗಿನಲ್ಲಿ ರಿಲೀಸ್ ಆದರೆ, ಇದು ಚಿತ್ರಕ್ಕೆ ಪ್ಲಸ್ಪಾಯಿಂಟ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡಿತ್ತು. ಧನಂಜಯ ಅವರು ಹೀರೋ ಆಗಿ ಮಿಂಚಿದರೆ, ಅಮೃತಾ ಅಯ್ಯಂಗಾರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಂಗಾಯಣ ರಘು ಹಾಗೂ ತಾರಾ ಅವರು ಧನಂಜಯ ಅವರ ತಂದೆ-ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸಿತ್ತು. ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಜನವರಿ 26ರಂದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ಟಾಲಿವುಡ್ ಅಂಗಳಕ್ಕೆ ಕಾಲಿಡೋಕೆ ಸಿನಿಮಾ ಸಜ್ಜಾಗಿದೆ.
‘ಪುಷ್ಪ’ ಚಿತ್ರದ ಜಾಲಿ ರೆಡ್ಡಿ ಪಾತ್ರಕ್ಕೆ ಧನಂಜಯ ಅವರೇ ಡಬ್ಬಿಂಗ್ ಮಾಡಿದ್ದರು. ಈಗ ‘ಬಡವ ರಾಸ್ಕಲ್’ ತೆಲುಗು ವರ್ಷನ್ಗೆ ಅವರೇ ಡಬ್ ಮಾಡುತ್ತಾರಾ ಎಂಬುದು ಸದ್ಯದ ಕುತೂಹಲ. ಈ ಸಿನಿಮಾ ಯಾವಾಗ ತೆಲುಗಿನಲ್ಲಿ ರಿಲೀಸ್ ಆಗಲಿದೆ ಎಂಬ ಕೌತಕವೂ ಮೂಡಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
@daali_pictures Associates With @RizwanEntrepre1 To Execute @Dhananjayaka ’s #BadavaRascal In Telugu@amrutha_iyengar @dir_shankarguru @vasukivaibhav @dr_bhushana @PoornaMysore @Kushi_FME@aanandaaudio@ramvamsikrishna@TheSaiSatish@ParvathaneniRam pic.twitter.com/CibpevLel8
— Rajasekar (@sekartweets) January 29, 2022
ಇತ್ತೀಚೆಗೆ ಸಿನಿಮಾ ಗೆಲುವಿನ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಈ ಮೂಲಕ ಗೆಲುವನ್ನು ಸಂಭ್ರಮಿಸಿತ್ತು. ಆದರೆ, ಕೊವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಿಗೆ ಭೇಟಿ ನೀಡೋಕೆ ಚಿತ್ರತಂಡದ ಬಳಿ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಧನಂಜಯ ಅವರು ಬೇಸರ ಹೊರ ಹಾಕಿದ್ದರು. ಎಲ್ಲರೂ ಸುರಕ್ಷಿತವಾಗಿರಿ ಎಂದು ಅವರು ಕೋರಿಕೊಂಡಿದ್ದರು.
ಇದನ್ನೂ ಓದಿ: ‘ಬಡವ ರಾಸ್ಕಲ್’ ಒಟಿಟಿ ರಿಲೀಸ್ ದಿನಾಂಕ ಘೋಷಣೆ; ಯಾವ ಪ್ಲಾಟ್ಫಾರ್ಮ್ನಲ್ಲಿ ತೆರೆಕಾಣಲಿದೆ ಧನಂಜಯ ಚಿತ್ರ?
‘ಬಡವ ರಾಸ್ಕಲ್’ ಕಲೆಕ್ಷನ್ 15 ಕೋಟಿ ರೂಪಾಯಿ? ಧನಂಜಯ ಹೇಳಿದ್ದು ಇಷ್ಟು