Banaras: ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಝೈದ್​ ಖಾನ್​; ಗಡಿನಾಡಲ್ಲಿ ‘ಬನಾರಸ್​’ ಹೀರೋ ರಾಜ್ಯೋತ್ಸವ ಆಚರಣೆ

| Updated By: ಮದನ್​ ಕುಮಾರ್​

Updated on: Nov 02, 2022 | 12:34 PM

Zaid Khan | Karnataka Rajyotsava: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಆರಂಭಿಸಿದ್ದವು. ಅದರಲ್ಲಿ ಝೈದ್ ಖಾನ್ ಉತ್ಸಾಹದಿಂದ ಪಾಲ್ಗೊಂಡರು.

Banaras: ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಝೈದ್​ ಖಾನ್​; ಗಡಿನಾಡಲ್ಲಿ ‘ಬನಾರಸ್​’ ಹೀರೋ ರಾಜ್ಯೋತ್ಸವ ಆಚರಣೆ
ಝೈದ್ ಖಾನ್
Follow us on

ನಟ ಝೈದ್​ ಖಾನ್​ ಅವರು ‘ಬನಾರಸ್​’ (Banaras Movie) ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಜಯತೀರ್ಥ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಝೈದ್​ ಖಾನ್ (Zaid Khan)​ ಅವರಿಗೆ ಜೋಡಿಯಾಗಿ ಸೋನಲ್​ ಮಾಂಥೆರೋ ನಟಿಸಿದ್ದಾರೆ. ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ಇಡೀ ಚಿತ್ರತಂಡ ಕಾದಿದೆ. ಈ ಚಿತ್ರ ನವೆಂಬರ್​ 4ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಝೈದ್​ ಖಾನ್​ ಅವರು ರಾಜ್ಯದ ವಿವಿಧ ಕಡೆಗಳಲ್ಲಿ ಸಂಚರಿಸಿದ್ದಾರೆ. ಇದೇ ವೇಳೆ ಕನ್ನಡ ರಾಜ್ಯೋತ್ಸವ (Kannada Rajyotsava) ಬಂದಿರುವುದು ಕೂಡ ವಿಶೇಷ. ಗಡಿನಾಡು ಬೆಳಗಾವಿಗೆ ಭೇಟಿ ನೀಡಿದ ಝೈದ್​ ಖಾನ್​ ಅವರು ಅಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಅಲ್ಲಿನ ಕನ್ನಡ ಪರ ಸಂಘಟನೆಗಳ ಜೊತೆ ಸೇರಿ ಅವರು ಕರ್ನಾಟಕದ ಬಾವುಟ ಹಾರಿಸಿದ್ದಾರೆ.

ಬೆಳಗಾವಿಗೆ ಬಂದಿಳಿದ ಝೈದ್ ಖಾನ್ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಜಿಲ್ಲೆಯ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಯೂ ಝೈದ್ ಖಾನ್ ಅವರನ್ನು ಸನ್ಮಾನಿಸಲಾಯಿತು. ಅದಾದ ಬಳಿಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಆರಂಭಿಸಿದ್ದವು. ಅದರಲ್ಲಿಯೂ ಝೈದ್ ಖಾನ್ ಉತ್ಸಾಹದಿಂದ ಪಾಲ್ಗೊಂಡರು.

10 ಸಾವಿರ ಮೀಟರ್ ಕನ್ನಡ ಧ್ವಜ ಪ್ರದರ್ಶನ ನಡೆಸಲಾಯಿತು. ಈ ಕಾರ್ಯಕ್ರಮಲ್ಲೂ ಝೈದ್ ಖಾನ್ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಗಡಿನಾಡು ಕನ್ನಡ ಸಂಘದ ಅಧ್ಯಕ್ಷರಾದ ಸೈಯದ್ ಮನ್ಸೂರ್, ತೌಫಿಕ್ ಮೊಯಿನುದ್ದೀನ್, ಡಾ. ಆಸಿಫ್ ಮೊಕಾಶಿ, ಸಂತೋಷ್ ಕಾಮತ್, ಕನ್ನಡ ಸೇನೆಯ ರಾಜು ಹಾಗೂ ಹುಬ್ಬಳಿಯ ಯುವ ನಾಯಕ ರಶೀದ್ ಹಾಗೂ ಆಯೂಬ್ ಹಾಜರಿದ್ದರು.

ಇದನ್ನೂ ಓದಿ
Banaras: ಶಾರುಖ್​ ಅಥವಾ ಸಲ್ಮಾನ್​.. ಇಬ್ಬರಲ್ಲಿ ಝೈದ್​ ಖಾನ್​ಗೆ ಹೆಚ್ಚು ಇಷ್ಟ ಯಾರು? ಉತ್ತರಿಸಿದ ಜಮೀರ್​ ಪುತ್ರ
Zaid Khan: ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಜಮೀರ್​ ಪುತ್ರ ಝೈದ್​ ಖಾನ್​ ಭೇಟಿ; ‘ಬನಾರಸ್​​’ ಬಿಡುಗಡೆಗೆ ಸಜ್ಜು
Zaid Khan: ಗಣೇಶೋತ್ಸವ ಸಂಭ್ರಮದಲ್ಲಿ ಭಾಗಿಯಾದ ಜಮೀರ್​ ಅಹ್ಮದ್​ ಪುತ್ರ, ‘ಬನಾರಸ್​’ ಹೀರೋ ಝೈದ್​ ಖಾನ್​
Banaras: ಜಮೀರ್​ ಅಹ್ಮದ್​ ಪುತ್ರ ಜೈದ್​ ಖಾನ್​ ಬದ್ಧತೆಗೆ ಭೇಷ್​ ಎಂದ ‘ಬನಾರಸ್​’ ನಿರ್ದೇಶಕ ಜಯತೀರ್ಥ

ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪತ್ರಿಕಾಗೋಷ್ಠಿ ನಡೆಸಲಾಯಿತು. ಅದರಲ್ಲಿಯೂ ಝೈದ್ ಖಾನ್ ಮತ್ತು ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಅದ್ದೂರಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಝೈದ್ ಖಾನ್‌ರನ್ನು ಆಹ್ವಾನಿಸಲಾಗಿತ್ತು.

‘ಬನಾರಸ್’ ಚಿತ್ರದಲ್ಲಿ ಟೈಮ್ ಟ್ರಾವೆಲ್​ ಕಥಾಹಂದರ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಆ ಮೂಲಕ ಪ್ಯಾನ್​ ಇಂಡಿಯಾ ಮಾರ್ಕೆಟ್​ ಮೇಲೆ ಝೈದ್​ ಖಾನ್​ ಕಣ್ಣಿಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:12 am, Wed, 2 November 22