AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daali Dhananjay: ‘ಉತ್ತರಕಾಂಡ’ಕ್ಕೆ ಡಾಲಿ ಧನಂಜಯ್​ ಸಜ್ಜು; ಮತ್ತೆ ಒಂದಾಯ್ತು ‘ರತ್ನನ್​ ಪ್ರಪಂಚ’ ಟೀಮ್​

Uttarakaanda | KRG Studios: ‘ಉತ್ತರಕಾಂಡ’ ಸಿನಿಮಾಗೆ ರೋಹಿತ್​ ಪದಕಿ ನಿರ್ದೇಶನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 6ರಂದು ಈ ಚಿತ್ರಕ್ಕೆ ಅದ್ದೂರಿಯಾಗಿ ಪೂಜೆ ನೆರವೇರಿಸಲಾಗುತ್ತದೆ.

Daali Dhananjay: ‘ಉತ್ತರಕಾಂಡ’ಕ್ಕೆ ಡಾಲಿ ಧನಂಜಯ್​ ಸಜ್ಜು; ಮತ್ತೆ ಒಂದಾಯ್ತು ‘ರತ್ನನ್​ ಪ್ರಪಂಚ’ ಟೀಮ್​
ಉತ್ತರಕಾಂಡ ಪೋಸ್ಟರ್​, ಡಾಲಿ ಧನಂಜಯ್
TV9 Web
| Updated By: ಮದನ್​ ಕುಮಾರ್​|

Updated on:Nov 02, 2022 | 7:31 AM

Share

ನಟ ಡಾಲಿ ಧನಂಜಯ್​ (Daali Dhananjay) ಅವರ ಪ್ರತಿ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಭರವಸೆ ಮೂಡಿದೆ. ಪ್ರತಿ ಚಿತ್ರದಲ್ಲೂ ಅವರು ಏನಾದರೊಂದು ಹೊಸತನ್ನು ಪ್ರಯತ್ನಿಸುತ್ತಾರೆ. ಒಂದು ಪಾತ್ರ ಹಿಟ್​ ಆಯ್ತು ಎಂದ ಮಾತ್ರಕ್ಕೆ ಅದೇ ಮಾದರಿಯ ಪಾತ್ರಕ್ಕೆ ಗಂಟು ಬೀಳುವವರಲ್ಲ ಧನಂಜಯ್​. ಈಗಾಗಲೇ ಹಲವು ಸಿನಿಮಾಗಳ ಮೂಲಕ ಅವರು ಅದನ್ನು ಸಾಬೀತು ಮಾಡಿದ್ದಾಗಿದೆ. ಇತ್ತೀಚೆಗೆ ಅವರ ‘ಹೆಡ್​ ಬುಷ್​’ (Head Bush) ಚಿತ್ರ ತೆರೆಕಂಡು ಸಾಕಷ್ಟು ಸದ್ದು ಮಾಡಿತು. ಈಗ ಅವರ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ಕೇಳಿಬಂದಿದೆ. ಈ ಚಿತ್ರಕ್ಕೆ ‘ಉತ್ತರಕಾಂಡ’ (Uttarakaanda) ಎಂದು ಶೀರ್ಷಿಕೆ ಇಡಲಾಗಿದೆ. ಪ್ರೀ-ಪ್ರೊಡಕ್ಷನ್​ ಕೆಲಸಗಳು ಕೊನೇ ಹಂತದಲ್ಲಿವೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ಅವರು ನಿರ್ಮಿಸುತ್ತಿದ್ದಾರೆ.

‘ಉತ್ತರಕಾಂಡ’ ಸಿನಿಮಾಗೆ ರೋಹಿತ್​ ಪದಕಿ ನಿರ್ದೇಶನ ಮಾಡಲಿದ್ದಾರೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಚಿತ್ರದ ಬಗ್ಗೆ ಅಪ್​ಡೇಟ್​ ನೀಡಲಾಗಿದೆ. ನವೆಂಬರ್ 6ರಂದು, ಮಧ್ಯಾಹ್ನ 3.22ಕ್ಕೆ ಚಿತ್ರದ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆಯಲಿದೆ. ಚಿತ್ರತಂಡದ ಬಗ್ಗೆ ಮತ್ತು ಸಿನಿಮಾದ ಇನ್ನಿತರ ಅಂಶಗಳ ಕುರಿತು ಮತ್ತಷ್ಟು ವಿವರಗಳನ್ನು ಆ ದಿನ ಹಂಚಿಕೊಳ್ಳಲಾಗುತ್ತದೆ. ಡಾಲಿ ಧನಂಜಯ್​ ವೃತ್ತಿಬದುಕಿನಲ್ಲಿ ಈ ಸಿನಿಮಾ ಕೂಡ ಡಿಫರೆಂಟ್​ ಆಗಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ
Image
‘ಹೆಡ್​ ಬುಷ್​’ ಚಿತ್ರದ ವೀರಗಾಸೆ ವಿವಾದ: ಧನಂಜಯ್ ಸುದ್ದಿಗೋಷ್ಠಿಯ ಲೈವ್ ನೋಡಿ
Image
ಮೂರು ದಿನಕ್ಕೆ ಬಂಗಾರದ ಬೆಳೆ ತೆಗೆದ ‘ಹೆಡ್​ ಬುಷ್​’ ಸಿನಿಮಾ; ಇಲ್ಲಿದೆ ಕಲೆಕ್ಷನ್ ವಿವರ
Image
Head Bush: ಡಾಲಿ ಧನಂಜಯ್​ ಮೇಲೆ ಹೂಮಳೆ ಸುರಿಸಿದ ಫ್ಯಾನ್ಸ್​; ಚಿತ್ರದುರ್ಗದಲ್ಲಿ ‘ಹೆಡ್​ ಬುಷ್​’ ತಂಡಕ್ಕೆ ಭರ್ಜರಿ ಸ್ವಾಗತ
Image
Head Bush: ಸೈಕಲ್​ ಏರಿ ಅಪ್ಪು ಸಮಾಧಿಗೆ ಬಂದ ಡಾಲಿ ಧನಂಜಯ್; ‘ಹೆಡ್​ ಬುಷ್​’ ಚಿತ್ರಕ್ಕೆ ಡಿಫರೆಂಟ್​ ಪ್ರಚಾರ

‘ಟಗರು’ ಸಿನಿಮಾದಲ್ಲಿ ಡಾಲಿ ಎಂಬ ವಿಲನ್​​​ ಪಾತ್ರ ಮಾಡಿದ ಬಳಿಕ ಧನಂಜಯ್​ ಅವರ ಬದುಕು ಬದಲಾಯ್ತು. ‘ಪುಷ್ಪ’ ಚಿತ್ರದಲ್ಲೂ ಖಳನಟನಾಗಿ ಅಬ್ಬರಿಸುವ ಅವಕಾಶ ಅವರಿಗೆ ಸಿಕ್ತು. ಹಾಗಂತ ಅವರು ಅಷ್ಟಕ್ಕೇ ಮಿತಿ ಹೇರಿಕೊಳ್ಳಲಿಲ್ಲ. ‘ರತ್ನನ್​ ಪ್ರಪಂಚ’ ರೀತಿಯ ಎಮೋಷನಲ್​ ಆದಂತಹ ಕಥೆಯನ್ನೂ ಆಯ್ಕೆ ಮಾಡಿಕೊಂಡರು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ರೋಹಿತ್​ ಪದಕಿ. ನಿರ್ಮಾಣ ಮಾಡಿದ್ದು ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​. ಈಗ ಈ ನಾಲ್ಕು ಜನರ ಕಾಂಬಿನೇಷನ್​ನಲ್ಲಿ ‘ಕೆಆರ್​ಜಿ ಸ್ಟುಡಿಯೋಸ್​’ ಮೂಲಕ ‘ಉತ್ತರ ಕಾಂಡ’ ಮೂಡಿಬರಲಿದೆ. ಈ ಚಿತ್ರವನ್ನು ವಿಜಯ್​ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿದ್ದಾರೆ.

ವಿಷೇಶವೆಂದರೆ, ‘ಉತ್ತರಕಾಂಡ’ ಸಿನಿಮಾದ ಪೂರ್ತಿ ಕಥೆ ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣಗೊಳ್ಳಲಿದೆ. ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ಸ್ವಾಮಿ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕೆ ಇರಲಿದೆ. ‘ಉತ್ತರಕಾಂಡ’ ಚಿತ್ರದ ಶೀರ್ಷಿಕೆ ವಿನ್ಯಾಸ ಮತ್ತು ಪೋಸ್ಟರ್ ಗಮನ ಸೆಳೆಯುತ್ತಿದೆ. ಇನ್ನಷ್ಟು ಅಪ್​ಡೇಟ್​ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:27 am, Wed, 2 November 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​