ಶಾಸಕ ಜಮೀರ್ ಅಹ್ಮದ್ ಮಗ ಝೈದ್ ಖಾನ್ (Zaid Khan) ನಟನೆಯ ಮೊದಲ ಸಿನಿಮಾ ‘ಬನಾರಸ್’ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅನುಭವಿ ಹೀರೋಗಳಂತೆ ಅವರು ನಟನೆ ಮಾಡಿ ತೋರಿಸಿದ್ದಾರೆ. ಟೈಮ್ ಟ್ರಾವೆಲಿಂಗ್, ಟೈಮ್ ಲೂಪ್ ವಿಚಾರಗಳನ್ನು ಇಟ್ಟುಕೊಂಡು ‘ಬನಾರಸ್’ ಸಿನಿಮಾ (Banaras Movie) ಸಿದ್ಧವಾಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲ ಚಿತ್ರದಲ್ಲೇ ಝೈದ್ ಖಾನ್ ಗೆದ್ದು ಬೀಗಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ‘ಬೆಲ್ ಬಾಟಂ’ ಸಿನಿಮಾ ಯಶಸ್ಸು ಕಂಡಿತ್ತು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಜಯತೀರ್ಥ ಅವರೇ ‘ಬನಾರಸ್’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರತಿ ಚಿತ್ರದಲ್ಲೂ ಭಿನ್ನ ಕಥೆಗಳನ್ನು ಜಯತೀರ್ಥ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ‘ಬನಾರಸ್’ ಮೂಲಕ ಹೊಸ ಮಾದರಿಯ ಕಥೆಯೊಂದಿಗೆ ಅವರು ಬಂದಿದ್ದಾರೆ.
‘ಬನಾರಸ್’ ಸಿನಿಮಾ ಮೊದಲ ದಿನ ಬರೋಬ್ಬರಿ 3 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೊಸ ನಟನ ಚಿತ್ರಕ್ಕೆ ಈ ಪರಿ ಮೆಚ್ಚುಗೆ ಸಿಗೋದು ತುಂಬಾನೇ ಅಪರೂಪ. ಆದರೆ, ಝೈದ್ ಖಾನ್ ಅವರು ಈ ವಿಚಾರದಲ್ಲಿ ಗೆದ್ದಿದ್ದಾರೆ. ಅವರು ಮೊದಲ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಸಿನಿಮಾಗೆ ಬಾಯಿಮಾತಿನ ಪ್ರಚಾರ ಚೆನ್ನಾಗಿಯೇ ಸಿಕ್ಕಿದೆ. ಇನ್ನು, ನಾನಾ ಕಡೆಗಳಿಗೆ ತೆರಳಿ ಚಿತ್ರತಂಡದವರು ಪ್ರಚಾರ ಮಾಡಿದ್ದು ಸಹಕಾರಿ ಆಗಿದೆ.
ಕನ್ನಡ ಚಿತ್ರರಂಗದ ಮೇಲೆ ಪರಭಾಷೆಯವರು ಕಣ್ಣು ಇಟ್ಟಿದ್ದಾರೆ. ಇಲ್ಲಿ ರಿಲೀಸ್ ಆಗುವ ಚಿತ್ರಗಳನ್ನು ಅವರೂ ವೀಕ್ಷಿಸುತ್ತಾರೆ. ‘ಬನಾರಸ್’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ ಹಾಗೂ ಇತರ ಭಾಷೆಗಳಲ್ಲಿ ರಿಲೀಸ್ ಆಗಿರುವುದರಿಂದ ಪರಭಾಷೆಯವರೂ ಸಿನಿಮಾ ವೀಕ್ಷಿಸಿದ್ದಾರೆ. ಹೀಗಾಗಿ, ಗಳಿಕೆ ಹೆಚ್ಚಿದೆ. ಇಂದು (ನವೆಂಬರ್ 5) ಹಾಗೂ ನಾಳೆ (ನವೆಂಬರ್ 6) ವೀಕೆಂಡ್ ಇದೆ. ಈ ಸಂದರ್ಭದಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ‘ಬನಾರಸ್’ ನೋಡಿ ಜಮೀರ್ ಅಹ್ಮದ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿ
Banaras Movie Review: ಇದು ‘ಮಾಯಾ’ಗಂಗೆಯ ಬನಾರಸ್; ಝೈದ್ ಖಾನ್ ಕ್ಲಾಸ್-ಮಾಸ್
‘ಬನಾರಸ್’ ಸಿನಿಮಾದ ಕಥೆ ಕನ್ನಡದ ಪಾಲಿಗೆ ಹೊಸತು. ಹೀಗಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗುತ್ತಿದೆ. ಝೈದ್ ಖಾನ್ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ನಟಿ ಸೋನಲ್ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.