‘ಭೀಮ’ನ ಎದುರು ತೊಡೆ ತಟ್ಟಲಿದ್ದಾನೆ ‘ಜೀನಿಯಸ್ ಮುತ್ತ’; ಈ ಸಿನಿಮಾಗಳ ವಿಶೇಷತೆಗಳೇನು?

‘ಭೀಮ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದು ಪಕ್ಕಾ ಮಾಸ್ ಸಿನಿಮಾ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾಗಳ ಜೊತೆಗೆ ‘ಜೀನಿಯಸ್ ಮುತ್ತ’, ‘ಇದು ಎಂಥಾ ಲೋಕವಯ್ಯ’, ‘ಕಬಂಧ’ ಹೆಸರಿನ ಸಿನಿಮಾಗಳೂ ಬಿಡುಗಡೆ ಕಾಣುತ್ತಿವೆ.

‘ಭೀಮ’ನ ಎದುರು ತೊಡೆ ತಟ್ಟಲಿದ್ದಾನೆ ‘ಜೀನಿಯಸ್ ಮುತ್ತ’; ಈ ಸಿನಿಮಾಗಳ ವಿಶೇಷತೆಗಳೇನು?
ಭೀಮ-ಜೀನಿಯ್ ಮುತ್ತ

Updated on: Aug 08, 2024 | 3:09 PM

ಕನ್ನಡದಲ್ಲಿ ಇತ್ತೀಚೆಗೆ ಸ್ಟಾರ್ ಹೀರೋಗಳ ಸಿನಿಮಾಗಳು ಕಡಿಮೆ ಆಗಿವೆ. ಅದಕ್ಕೆ ಕಾರಣ ಆಗಿದ್ದು ಎಲೆಕ್ಷನ್ ಅಬ್ಬರ. ಹೌದು, ಲೋಕಸಭೆ ಚುನಾವಣೆ ಕಾರಣಕ್ಕೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗ ಚುನಾವಣಾ ಅಬ್ಬರ ಮುಗಿದಿದೆ. ಸರ್ಕಾರದ ರಚನೆಯೂ ಆಗಿದೆ. ಈ ಬೆನ್ನಲ್ಲೇ ಒಂದೊಂದೇ ಸಿನಿಮಾಗಳು ರಿಲೀಸ್ ಆಗುತ್ತಿವೆ. ಸಿನಿಮಾಗಳು ಇಲ್ಲದೆ ಸೊರಗುತ್ತಿರುವ ಥಿಯೇಟರ್​​ಗಳಿಗೆ ಜೀವಕಳೆ ಬರುತ್ತಿದೆ.

ಭೀಮ

ನಿರ್ದೇಶನ: ದುನಿಯಾ ವಿಜಯ್.

ಪಾತ್ರವರ್ಗ: ದುನಿಯಾ ವಿಜಯ್, ಅಶ್ವಿನಿ ಅಂಬರೀಷ್, ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್.
ನಿರ್ಮಾಣ: ಕೃಷ್ಣ ಸಾರ್ಥಕ್, ಜಗದೀಶ್ ಗೌಡ

ಸಂಗೀತ: ಚರಣ್ ರಾಜ್

ಛಾಯಾಗ್ರಹಣ: ಧನು ಕುಮಾರ್

ಸಂಭಾಷಣೆ: ಮಾಸ್ತಿ

ಛಾಯಾಗ್ರಹಣ: ಶಿವಸೇನಾ

‘ಭೀಮ’ ಪಕ್ಕಾ ಮಾಸ್ ಸಿನಿಮಾ. ಈ ಚಿತ್ರ ಆಗಸ್ಟ್ 9ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಇದು ಕೂಡ ರೌಡಿಸಂ ಸಿನಿಮಾ. ಇದರಲ್ಲಿ ಅಗಾಧವಾಗಿ ರಕ್ತ, ಮಚ್ಚು-ಲಾಂಗ್, ಅವಾಚ್ಯ ಶಬ್ದಗಳ ಬಳಕೆ ಆಗಿದೆ. ಈ ಕಾರಣಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.

ವಿಶೇಷತೆ: ಇದು ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ. ಅವರ ನಿರ್ದೇಶನದ ಮೊದಲ ಸಿನಿಮಾ ‘ಸಲಗ’ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಿಂದ ಅವರು ಭರ್ಜರಿ ಯಶಸ್ಸು ಕಂಡರು. ಈಗ ಅವರು ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರೌಡಿಸಂ ಇಷ್ಟಪಡೋರಿಗೆ ಈ ಸಿನಿಮಾ ಇಷ್ಟ ಆಗಲಿದೆ. ಇದರ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಕಥೆಯೂ ಚಿತ್ರದಲ್ಲಿ ಇದೆ.

ಜೀನಿಯಸ್ ಮುತ್ತ

ನಿರ್ದೇಶನ: ನಾಗಿಣಿ ಭರಣ, ಟಿಎಸ್ ನಾಗಾ ಭರಣ

ಪಾತ್ರವರ್ಗ: ಶ್ರೇಯಸ್ ಜಯ್​ಪ್ರಕಾಶ್, ಪ್ರಿಯಾ ಅವಿನಾಶ್, ಸುಮನ್ ಜಾದೂಗಾರ್, ಗಿರಿಜಾ ಲೋಕೇಶ್, ಸುಂದರ್ ರಾಜ್

ನಿರ್ಮಾಣ: ಜಿಎಸ್ ಲತಾ ಜೈ ಪ್ರಕಾಶ್

ಸಂಗೀತ ಬಾಪು ಪದ್ಮನಾಭ

‘ಜೀನಿಯಸ್ ಮುತ್ತ’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಇದು ‘ಯು’ ಸರ್ಟಿಫಿಕೇಟ್ ಪಡೆದ ಚಿತ್ರ. ಈ ಸಿನಿಮಾ 1 ಗಂಟೆ 44 ನಿಮಿಷ ಇದೆ. ನಾಗಾಭರಣ ಅವರು ಈ ಮೊದಲು ‘ಚಿನ್ನಾರಿ ಮುತ್ತ’ ಸಿನಿಮಾ ಮಾಡಿದ್ದರು. ಈಗ ಅವರು ‘ಜೀನಿಯಸ್ ಮುತ್ತ’ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್​ನಲ್ಲಿ ಬರಲಿದೆ ಸಿನಿಮಾ; ಇರಲಿದೆ ‘ಭೀಮ’ನ ನಿರ್ದೇಶನ

ವಿಶೇಷತೆ:

‘ಚಿನ್ನಾರಿ ಮುತ್ತ’ ಆಗಿನ ಕಾಲಕ್ಕೆ ಸಖತ್ ಹಿಟ್ ಸಿನಿಮಾ. ವಿಜಯ್ ರಾಘವೇಂದ್ರ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಜೀನಿಯಸ್ ಮುತ್ತ’ ಸಿನಿಮಾದಲ್ಲಿ ಬರೋ ಪ್ರಮುಖ ಪಾತ್ರದ ಹೆಸರು ಮುತ್ತ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ಅತಿಥಿ ಪಾತ್ರ ಮಾಡಿದ್ದಾರೆ.

ಇತರೆ ಸಿನಿಮಾಗಳು

‘ಇದು ಎಂಥಾ ಲೋಕವಯ್ಯ’, ‘ಕಬಂಧ’ ಹೆಸರಿನ ಸಿನಿಮಾಗಳೂ ಕನ್ನಡದಲ್ಲಿ ರಿಲೀಸ್ ಆಗಲಿವೆ. ತೆಲುಗಿನಲ್ಲಿ ‘ಕಮಿಟಿ ಕುರ್ರೋಳು’, ಹಿಂದಿಯ ‘ಆಲಿಯಾ ಬಸು ಗಯಾಬ್ ಹೇ’ ಚಿತ್ರ ಬಿಡುಗಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us