Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ಪಾತ್ರದಲ್ಲಿ ಬಿಗ್​ ಬಾಸ್​ ಖ್ಯಾತಿಯ ರೂಪೇಶ್​ ಶೆಟ್ಟಿ; ‘ಅಧಿಪತ್ರ’ ಸಿನಿಮಾಗೆ ಬಿರುಸಿನ ಶೂಟಿಂಗ್​

ಈ ಮೊದಲು ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಚಯನ್ ಶೆಟ್ಟಿ ಅವರು ‘ಅಧಿಪತ್ರ’ ಚಿತ್ರಕ್ಕೆ ಈಗ ನಿರ್ದೇಶನ ಮಾಡುತ್ತಿದ್ದಾರೆ. ‘ಕೆ.ಆರ್. ಸಿನಿ ಕಂಬೈನ್ಸ್’ ಸಂಸ್ಥೆಯು ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ನೈಜ ಘಟನೆಯೊಂದರ ಸ್ಫೂರ್ತಿಯಿಂದ ಈ ಸಿನಿಮಾದ ಕಥೆ ಬರೆಯಲಾಗಿದೆ.

ಪೊಲೀಸ್​ ಪಾತ್ರದಲ್ಲಿ ಬಿಗ್​ ಬಾಸ್​ ಖ್ಯಾತಿಯ ರೂಪೇಶ್​ ಶೆಟ್ಟಿ; ‘ಅಧಿಪತ್ರ’ ಸಿನಿಮಾಗೆ ಬಿರುಸಿನ ಶೂಟಿಂಗ್​
ರೂಪೇಶ್​ ಶೆಟ್ಟಿ
Follow us
ಮದನ್​ ಕುಮಾರ್​
|

Updated on:Dec 01, 2023 | 5:30 PM

ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ ಬಳಿಕ ಜನಪ್ರಿಯತೆ ಹೆಚ್ಚುತ್ತದೆ. ನಟ ರೂಪೇಶ್​ ಕೂಡ ರಿಯಾಲಿಟಿ ಶೋನಿಂದ ತಮ್ಮ ಖ್ಯಾತಿ ಹೆಚ್ಚಿಸಿಕೊಂಡರು. ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋ ಮೂಲಕ ಅವರು ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರ ಆಗಿದ್ದರು. ಈಗ ಅವರು ​ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಅಭಿನಯಿಸುತ್ತಿರುವ ‘ಅಧಿಪತ್ರ’ (Adhipatra) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಗಿದೆ. ‘ಅಧಿಪತ್ರ’ ಸಿನಿಮಾದಲ್ಲಿ ರೂಪೇಶ್​ ಶೆಟ್ಟಿ (Roopesh Shetty) ಅವರು ಪೊಲೀಸ್​ ಪಾತ್ರ ಮಾಡುತ್ತಿದ್ದಾರೆ. ಅವರ ಖಡಕ್​ ಲುಕ್​ ಹೇಗಿದೆ ಎಂಬುದನ್ನು ತಿಳಿಸುವ ಫೋಟೋ ಕೂಡ ರಿವೀಲ್​ ಆಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬರಲಿದೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಆಶೀರ್ವಾದ ಪಡೆದು, ಚಿತ್ರೀಕರಣ ಶುರುಮಾಡಿದ್ದ ‘ಅಧಿಪತ್ರ’ ಸಿನಿಮಾ ತಂಡವು ಕುಂದಾಪುರ ಬಳಿಯ ಕೆರಾಡಿಯಲ್ಲಿ ಶೂಟಿಂಗ್​ ನಡೆಸುತ್ತಿದೆ. ಈಗಾಗಲೇ ಹತ್ತು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ನಾಯಕ ನಟ ರೂಪೇಶ್ ಶೆಟ್ಟಿ ಅವರು ಖಾಕಿ ಖದರ್​ನಲ್ಲಿ ಕಾಣಿಸಿಕೊಂಡ ಫೋಟೋಗಳು ಅವರ ಫ್ಯಾನ್ಸ್​ ಪೇಜ್​ಗಳಲ್ಲಿ ವೈರಲ್ ಆಗಿವೆ. ಆ ಮೂಲಕ ‘ಅಧಿಪತ್ರ’ ಸಿನಿಮಾ ಕೌತುಕ ಮೂಡಿಸುತ್ತಿದೆ.

ಇದನ್ನೂ ಓದಿ: ‘ಡಂಕಿ’ ಕ್ರೇಜ್: ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಅಭಿಮಾನಿಗಳು

ನಟ ರೂಪೇಶ್ ಶೆಟ್ಟಿ ಅವರಿಗೆ ತುಳು ಸಿನಿಮಾರಂಗದಲ್ಲಿ ಸಾಕಷ್ಟು ಅನುಭವ ಇದೆ. ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಅವರು ಅನುಭವ ಪಡೆದಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಟ್ಟು ಟ್ರೋಫಿ ಗೆದ್ದ ಬಳಿಕ ತುಳು ಭಾಷೆಯಲ್ಲಿ ‘ಸರ್ಕಸ್’ ಸಿನಿಮಾವನ್ನು ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಆ ಸಿನಿಮಾದಿಂದ ಸಕ್ಸಸ್​ ಪಡೆದ ಬಳಿಕ ಕನ್ನಡದಲ್ಲಿ ‘ಅಧಿಪತ್ರ’ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಬಿಚ್ಚುಗತ್ತಿ’ ಮೂಲಕ ಗಮನ ಸೆಳೆದಿದ್ದ ರಾಜವರ್ಧನ್ ಹೊಸ ಚಿತ್ರ ಅನೌನ್ಸ್; ಇಲ್ಲಿದೆ ಹೊಸ ಸಮಾಚಾರ

ಕೊಂಚ ಲೇಟ್ ಆದರೂ ಪರವಾಗಿಲ್ಲ. ಒಂದೊಳ್ಳೆಯ ಕಥೆಯೊಂದಿಗೆ ಡಿಫರೆಂಟ್ ಆದಂತಹ ಪಾತ್ರದ ಮೂಲಕ ಜನರ ಎದುರು ಬರಬೇಕು ಎಂಬ ಆಶಯ ರೂಪೇಶ್ ಶೆಟ್ಟಿ ಅವರದ್ದು. ಅದಕ್ಕೆ ತಕ್ಕಂತೆ ‘ಅಧಿಪತ್ರ’ ಸಿನಿಮಾವನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡ ಜಾಹ್ನವಿ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರೂಪೇಶ್​ ಶೆಟ್ಟಿಗೆ ಜಾಹ್ನವಿ ಅವರು ಜೋಡಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:30 pm, Fri, 1 December 23

ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು