AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಸಿನಿಮಾ ‘ಉಗ್ರಂ’ ರೀಮೇಕ್ ಎನ್ನುವುದು ನಿಜವೇ? ಎರಡೂ ಕತೆಗಳಿರುವ ಸಾಮ್ಯತೆ ಏನು?

Salaar: ‘ಸಲಾರ್’ ಸಿನಿಮಾ ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಎಂಬುದು ನಿಜವೇ? ‘ಸಲಾರ್’ ಟ್ರೈಲರ್ ಬಿಡುಗಡೆ ಸಿನಿಮಾದ ಕತೆಯ ಎಳೆಗಳನ್ನು ಬಿಟ್ಟುಕೊಡಲಾಗಿದೆ. ಆ ಮೂಲಕ ಇದು ‘ಉಗ್ರಂ’ ಸಿನಿಮಾದ ರೀಮೇಕ್ ಹೌದೋ? ಅಲ್ಲವೋ? ಎಂಬ ಪ್ರಶ್ನೆಗೆ ಉತ್ತರ ಬಹುತೇಕ ದೊರಕಿದೆ.

‘ಸಲಾರ್’ ಸಿನಿಮಾ ‘ಉಗ್ರಂ’ ರೀಮೇಕ್ ಎನ್ನುವುದು ನಿಜವೇ? ಎರಡೂ ಕತೆಗಳಿರುವ ಸಾಮ್ಯತೆ ಏನು?
ಮಂಜುನಾಥ ಸಿ.
|

Updated on: Dec 01, 2023 | 8:15 PM

Share

‘ಸಲಾರ್’ (Salaar) ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ಇದು ಕನ್ನಡದ ‘ಉಗ್ರಂ’ ಸಿನಿಮಾ ರೀಮೇಕ್ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ‘ಸಲಾರ್’ ಸಿನಿಮಾಕ್ಕೆ ಸಂಗೀತ ನೀಡಿರುವ ರವಿ ಬಸ್ರೂರು ಸಹ ‘ಸಲಾರ್’ ಉಗ್ರಂ ಸಿನಿಮಾದ ರೀಮೇಕ್ ಎಂದಿದ್ದರು. ಆದರೆ ಚಿತ್ರತಂಡ ಇದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ‘ಸಲಾರ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, 3:46 ನಿಮಿಷದ ದೀರ್ಘ ಅವಧಿಯ ಟ್ರೈಲರ್​ನಲ್ಲಿ ಸಿನಿಮಾದ ಕತೆಯ ಎಳೆಗಳನ್ನು ಬಿಟ್ಟುಕೊಡಲಾಗಿದೆ. ಆ ಮೂಲಕ ಇದು ‘ಉಗ್ರಂ’ ಸಿನಿಮಾದ ರೀಮೇಕ್ ಹೌದೋ? ಅಲ್ಲವೋ? ಎಂಬ ಪ್ರಶ್ನೆಗೆ ಉತ್ತರ ಬಹುತೇಕ ದೊರಕಿದೆ.

‘ಸಲಾರ್’ ಸಿನಿಮಾ ‘ಉಗ್ರಂ’ ಸಿನಿಮಾದ ಯಥಾವತ್ತು ರೀಮೇಕ್ ಅಲ್ಲ ಆದರೆ ‘ಉಗ್ರಂ’ ಸಿನಿಮಾದ ಕತೆಯ ದಟ್ಟ ಛಾಯೆ ‘ಸಲಾರ್’ ಸಿನಿಮಾದ ಮೇಲಿದೆ. ‘ಉಗ್ರಂ’ ಸಿನಿಮಾದ ಕತೆಯ ಮೂಲ ಧಾತುವೇ ‘ಸಲಾರ್’ ಸಿನಿಮಾದ ಕತೆಯಲ್ಲಿಯೂ ಇದೆ. ಕೆಲವು ದೃಶ್ಯಗಳು, ಸನ್ನಿವೇಶಗಳು ‘ಉಗ್ರಂ’ ಸಿನಿಮಾದಿಂದಲೇ ನೇರವಾಗಿ ಎತ್ತಿಕೊಂಡಂತೆಯೂ ಇದೆ.

‘ಉಗ್ರಂ’ ಸಿನಿಮಾನಲ್ಲಿ ನಾಯಕ ಶ್ರೀಮುರಳಿ ಹಾಗೂ ತಿಲಕ್ ಬಾಲ್ಯ ಸ್ನೇಹಿತರು, ತಿಲಕ್ ಕತೆ ನಡೆಯುವ ಮುಘೋರ್ ಪ್ರದೇಶವನ್ನು ಒಂದು ಸಮಯದಲ್ಲಿ ಆಳಿದ್ದ ಕುಟುಂಬದವನು ಆದರೆ ಈಗ ಅಲ್ಲಿ ಬೇರೆಯವರ ಹಿಡಿತವಿದೆ. ಆ ಪ್ರದೇಶವನ್ನು ಮತ್ತೆ ವಶಪಡಿಸಿಕೊಳ್ಳಬೇಕು ಎಂಬುದು ತಿಲಕ್ ಆಸೆ. ಅದಕ್ಕೆ ನಾಯಕ ಶ್ರೀಮುರಳಿಯ ಸಹಾಯವನ್ನು ಕೇಳುತ್ತಾರೆ. ‘ಸಲಾರ್’ ಸಿನಿಮಾದಲ್ಲಿಯೂ ಇದೇ ಕತೆ ಇದೆ. ‘ಉಗ್ರಂ’ ಸಿನಿಮಾದಲ್ಲಿ ಶ್ರೀಮುರಳಿ, ನಿನಗೇನಾದ್ರೂ ಬೇಕಾದ್ರು ಕೇಳು ಎಂದು ತಿಲಕ್​ಗೆ ಬಾಲ್ಯದಲ್ಲಿ ಹೇಳಿರುತ್ತಾನೆ, ‘ಸಲಾರ್’ ಸಿನಿಮಾದಲ್ಲಿಯೂ ಬಾಲಕ ದೇವ (ಪ್ರಭಾಸ್) ವರದರಾಜ್​ (ಪೃಥ್ವಿರಾಜ್​)ಗೆ ಇದೇ ರೀತಿಯ ಭರವಸೆಯೊಂದನ್ನು ನೀಡುತ್ತಾನೆ.

ಇದನ್ನೂ ಓದಿ:‘ಸಲಾರ್’ ಟ್ರೈಲರ್ ಬಿಡುಗಡೆ: ಹೇಗಿದೆ? ಏನಿದೆ ಟ್ರೈಲರ್​ನಲ್ಲಿ?

‘ಉಗ್ರಂ’ ಸಿನಿಮಾದಲ್ಲಿ ತಿಲಕ್, ಮುಘೋರ್ ನನಗೆ ಬೇಕು ಎಂದು ದುರಾಸೆಯಿಂದ ಕೇಳುತ್ತಾನೆ, ಅಂತೆಯೇ ‘ಸಲಾರ್’ನಲ್ಲಿ ಸಹ ವರದರಾಜ್ (ಪೃಥ್ವಿರಾಜ್ ಸುಕುಮಾರ್) ನನ್ನ ಕಣ್ಣಿಗೆ ಕಂಡಿದ್ದೆಲ್ಲ ನನಗೆ ಬೇಕು ಎನ್ನುತ್ತಾನೆ. ‘ಉಗ್ರಂ’ ಸಿನಿಮಾದಲ್ಲಿ ತಿಲಕ್​ಗೆ ಒಬ್ಬ ತಮ್ಮನಿರುತ್ತಾನೆ, ಇಲ್ಲಿಯೂ ಸಹ ಪೃಥ್ವಿರಾಜ್​ಗೆ ಒಬ್ಬ ಸಹೋದರನಿದ್ದಾನೆ. ಹೀಗೆ ಇನ್ನೂ ಹಲವು ಸಾಮ್ಯತೆಗಳು ಈ ಎರಡೂ ಸಿನಿಮಾಗಳಲ್ಲಿ ಇವೆ. ಆದರೆ ‘ಉಗ್ರಂ’ ಸಿನಿಮಾ ಒಂದೇ ಭಾಗದಲ್ಲಿ ಮುಗಿದು ಹೋಗಿತ್ತು, ಆದರೆ ‘ಸಲಾರ್’ ಸಿನಿಮಾವನ್ನು ತುಸು ಎಳೆದು, ತುಸು ಹೆಚ್ಚು ಬಜೆಟ್ ಹಾಕಿ ಕತೆಯ ಕ್ಯಾನ್ವಾಸ್ ದೊಡ್ಡದು ಮಾಡಲಾಗಿದೆ. ಮೊದಲ ಭಾಗದಲ್ಲಿ ಇಬ್ಬರ ಗೆಳೆತನ ಹಾಗೂ ಪ್ರಭಾಸ್ ಹೇಗೆ ಪೃಥ್ವಿರಾಜ್​ಗೆ ಖಾನ್​ಸರ್ ಅನ್ನು ಬಿಡಿಸಿಕೊಡುತ್ತಾನೆ ಎಂಬುದನ್ನು ತೋರಿಸಿ, ಎರಡನೇ ಭಾಗದಲ್ಲಿ ಈ ಇಬ್ಬರು ಹೇಗೆ ವೈರಿಗಳಾಗುತ್ತಾರೆ ಎಂಬುದನ್ನು ತೋರಿಸುತ್ತಾರೆ ಎಂದು ಸುಲಭವಾಗಿ ಊಹಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್