ಕ್ಯಾನ್ಸರ್ಗೆ ಮತ್ತೊಬ್ಬ ಬಾಲಿವುಡ್ ನಟಿ ಬಲಿ
ಸಿನಿಮಾ, ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ದಿವ್ಯಾ ಚೌಕ್ಸಿ ಕ್ಯಾನ್ಸರ್ನಿಂದ ಭಾನುವಾರ ನಿಧನರಾಗಿದ್ದಾರೆ. ನಟಿ ದಿವ್ಯಾ ಚೌಕ್ಸಿ ಸಾಯುವ ಮುನ್ನ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿ ಹೋಗಿದ್ದಾರೆ. ಸಾಯುವ ಮುನ್ನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ದಿವ್ಯಾ ಚೌಕ್ಸಿ, ‘ನಾನು ಮರಣಶಯ್ಯೆಯಲ್ಲಿದ್ದೀನಿ, ಮುಂದಿನ ಜನ್ಮದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ಮುಂದಿನ ಜನ್ಮವಾದರೂ ನೋವಿಲ್ಲದ ಜನ್ಮವಾಗಲಿ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ದಿವ್ಯಾ 2011 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ, ಅವರು ಸಂಗೀತ, […]
ಸಿನಿಮಾ, ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ದಿವ್ಯಾ ಚೌಕ್ಸಿ ಕ್ಯಾನ್ಸರ್ನಿಂದ ಭಾನುವಾರ ನಿಧನರಾಗಿದ್ದಾರೆ.
ನಟಿ ದಿವ್ಯಾ ಚೌಕ್ಸಿ ಸಾಯುವ ಮುನ್ನ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿ ಹೋಗಿದ್ದಾರೆ. ಸಾಯುವ ಮುನ್ನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ದಿವ್ಯಾ ಚೌಕ್ಸಿ, ‘ನಾನು ಮರಣಶಯ್ಯೆಯಲ್ಲಿದ್ದೀನಿ, ಮುಂದಿನ ಜನ್ಮದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ಮುಂದಿನ ಜನ್ಮವಾದರೂ ನೋವಿಲ್ಲದ ಜನ್ಮವಾಗಲಿ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.
ದಿವ್ಯಾ 2011 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ, ಅವರು ಸಂಗೀತ, ಟಿವಿ ಕಾರ್ಯಕ್ರಮಗಳು ಮತ್ತು ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಎಂಟಿವಿಯ ಮೇಕಿಂಗ್ ದಿ ಕಟ್ 2 ಮತ್ತು ಟ್ರೂ ಲೈಫ್‌ನಲ್ಲೂ ಕೆಲಸ ಮಾಡಿದ್ದಾರೆ. 2016 ರಲ್ಲಿ ಅವರು ಸ್ಟೂಡೆಂಟ್ ಆಫ್ ದಿ ಇಯರ್ ಖ್ಯಾತಿಯ ಸಾಹಿಲ್ ಆನಂದ್ ಅವರೊಂದಿಗೆ ಹೈ ಅಪ್ನಾ ದಿಲ್ ತೋಹ್ ಆವಾರಾ ಎಂಬ ಚಲನಚಿತ್ರದಲ್ಲಿ ನಟಿಸಿದ್ದರು. ದಿವ್ಯಾ ಅವರ ‘ಪಟಿಯಾಲೆ ಡಿ ಕ್ವೀನ್’ ಮೂಲಕ ಗಾಯಕಿಯಾಗಿ ಮನಗೆದ್ದಿದ್ದರು.
Published On - 8:59 am, Mon, 13 July 20