ಏನೇ ಆದ್ರು ಇದನ್ನ ಮಿಸ್ ಮಾಡಲ್ಲ, ಹಾಗಂತ ಅತಿಯಾಗೂ ಮಾಡಲ್ವಂತೆ

ಬೋಲ್ಡ್​ ಅಂಡ್​ ಬ್ಯೂಟಿಫುಲ್ ಪ್ರಾಚಿ ದೇಸಾಯಿ ಕಿರುತೆರೆಯಲ್ಲಿ ಮೊದಲು ಕಾಣಿಸಿಕೊಂಡು, ನಂತರ ಬಾಲಿವುಡ್​ನಲ್ಲಿ ತನ್ನ ಹವಾ ಕ್ರಿಯೇಟ್​ ಮಾಡಿದ ನಟಿ. ಪ್ರಾಚಿ ದೇಸಾಯಿಯ ಬ್ಯೂಟಿ, ಡಯಟ್ ಮತ್ತು ಫಿಟ್ನೆಸ್​ ಸೂತ್ರ ಏನು ಅನ್ನೋದರ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ. ಪ್ರಾಚಿಯ ಪ್ರಕಾರ ಹೆಲ್ತಿ ತ್ವಚೆಯಿದ್ರೆ ಅದು ಸುಂದರ ತ್ವಚೆಯಂತೆ. ಅದಕ್ಕಾಗಿ ಪ್ರಾಚಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಾರಂತೆ. ತನ್ನ ಡಯಟ್​ನಲ್ಲಿ ಫ್ರೆಶ್​ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸ್ತಾರಂತೆ. ಸರಿಯಾದ ರೀತಿಯಲ್ಲಿ ವರ್ಕೌಟ್​ ಮಾಡೋದು ಕೂಡಾ ತುಂಬಾನೇ ಮುಖ್ಯಾ ಅಂತಾರೆ […]

ಏನೇ ಆದ್ರು ಇದನ್ನ ಮಿಸ್ ಮಾಡಲ್ಲ, ಹಾಗಂತ ಅತಿಯಾಗೂ ಮಾಡಲ್ವಂತೆ
Follow us
ಸಾಧು ಶ್ರೀನಾಥ್​
|

Updated on:Nov 04, 2019 | 10:41 PM

ಬೋಲ್ಡ್​ ಅಂಡ್​ ಬ್ಯೂಟಿಫುಲ್ ಪ್ರಾಚಿ ದೇಸಾಯಿ ಕಿರುತೆರೆಯಲ್ಲಿ ಮೊದಲು ಕಾಣಿಸಿಕೊಂಡು, ನಂತರ ಬಾಲಿವುಡ್​ನಲ್ಲಿ ತನ್ನ ಹವಾ ಕ್ರಿಯೇಟ್​ ಮಾಡಿದ ನಟಿ. ಪ್ರಾಚಿ ದೇಸಾಯಿಯ ಬ್ಯೂಟಿ, ಡಯಟ್ ಮತ್ತು ಫಿಟ್ನೆಸ್​ ಸೂತ್ರ ಏನು ಅನ್ನೋದರ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ.

ಪ್ರಾಚಿಯ ಪ್ರಕಾರ ಹೆಲ್ತಿ ತ್ವಚೆಯಿದ್ರೆ ಅದು ಸುಂದರ ತ್ವಚೆಯಂತೆ. ಅದಕ್ಕಾಗಿ ಪ್ರಾಚಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಾರಂತೆ. ತನ್ನ ಡಯಟ್​ನಲ್ಲಿ ಫ್ರೆಶ್​ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸ್ತಾರಂತೆ. ಸರಿಯಾದ ರೀತಿಯಲ್ಲಿ ವರ್ಕೌಟ್​ ಮಾಡೋದು ಕೂಡಾ ತುಂಬಾನೇ ಮುಖ್ಯಾ ಅಂತಾರೆ ಪ್ರಾಚಿ ದೇಸಾಯಿ.  

ಆಂತರಿಕವಾಗಿ ಹೆಲ್ತಿಯಾಗಿದ್ರೆ, ಹೊರಗಿನಿಂದ ಶೈನ್ ಆಗಿ ಕಾಣೋಕೆ ಸಹಾಯಕ ಅನ್ನೋದು ಪ್ರಾಚಿಯ ಮಾತು. ಸುಂದರ ತ್ವಚೆಯನ್ನು ಪಡೆಯಲು ಅಲೋವೆರಾ ಮತ್ತು ಅರಿಶಿನ ಮಿಶ್ರಿತ ಪೇಸ್ಟ್​ ಅನ್ನು ಅಪ್ಲೈ ಮಾಡಿಕೊಳ್ತಾರಂತೆ ಬ್ಯೂಟಿಫುಲ್​ ಪ್ರಾಚಿ. ಎಳನೀರನ್ನು ಸಹ ಸೇವಿಸ್ತಾರಂತೆ ಇದರಿಂದ ತ್ವಚೆಗೆ ಉತ್ತಮ ಪೋಷಣೆ ದೊರೆಯುತ್ತೆ ಅಂತಾರೆ.

ಮಿಸ್ ಮಾಡಲ್ಲ, ಹೆಚ್ಚಾಗೂ ಸೇವಿಸಲ್ಲ: ಯಾವುದೇ ಕಾರಣಕ್ಕೂ ಪ್ರಾಚಿ ತನ್ನ ಊಟವನ್ನು ಸ್ಕಿಪ್​ ಮಾಡಲ್ವಂತೆ. ಮತ್ತು ಅತಿ ಹೆಚ್ಚಾಗಿ ಕೂಡ ಆಹಾರವನ್ನು ಸೇವಿಸಲ್ವಂತೆ. ಪ್ರಾಚಿಯ ಡಯಟ್​ನಲ್ಲಿ ಗ್ರೀನ್ ಟೀ, ಯೋಗರ್ಟ್​, ನಟ್ಸ್​ ಅಥವಾ ಬೇಯಿಸಿದ ಮೊಟ್ಟೆ ಮತ್ತು ಹೆಚ್ಚಾಗಿ ಫ್ರೆಶ್​ ಜ್ಯೂಸ್​ ಸೇವಿಸ್ತಾರಂತೆ. ಅದರಲ್ಲಿ ಅರೆಂಜ್ ಜ್ಯೂಸ್ ಪ್ರಾಚಿಯ ಫೇವರೆಂಟ್ ಅಂತೆ. 

ಒಂದು ಗ್ಲಾಸ್​ ಬೆಚ್ಚನೆಯ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿಯುವುದರ ಮೂಲಕ ಪ್ರಾಚಿ ದೇಸಾಯಿ ತನ್ನ ದಿನವನ್ನು ಆರಂಭಿಸ್ತಾರಂತೆ. ಇನ್ನು ಪ್ರಾಚಿಯ ಬ್ರೇಕ್​ಫಾಸ್ಟ್​, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ತುಂಬಾ ಲೈಟಾಗಿರುತ್ತಂತೆ ಹಾಗೂ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸ್ತಾರಂತೆ.

ಜಿಮ್ ಮಿಸ್ಸಾದ್ರೆ ರನ್ನಿಂಗ್: ಪ್ರಾಚಿ ದೇಸಾಯಿ ಪವರ್​ ಯೋಗವನ್ನು ತಪ್ಪದೇ ಮಾಡ್ತಾರಂತೆ. ಜಿಮ್​ನಲ್ಲಿ ಹೆಚ್ಚಾಗಿ ಕಾರ್ಡಿಯೋ, ಫ್ರೀ ಹ್ಯಾಂಡ್​ ಎಕ್ಸಸೈಸ್​ ಮತ್ತು ವೇಟ್ ಲಿಫ್ಟಿಂಗ್​ ಮಾಡ್ತಾರಂತೆ. ಜಿಮ್​ಗೆ ಹೋಗೋದು ಮಿಸ್ ಆದ್ರೆ ರನ್ನಿಂಗ್​ ಮಾಡ್ತಾರಂತೆ ಫಿಟ್ನೆಸ್​ ಫ್ರೀಕ್​ ಪ್ರಾಚಿ. ಪ್ರತಿ ವಾರ ತನ್ನ ವರ್ಕೌಟ್​ ರುಟೀನ್​ ಅನ್ನು ಚೇಂಜ್​ ಮಾಡ್ತಿರ್ತಾರಂತೆ ಪ್ರಾಚಿ ದೇಸಾಯಿ.

https://www.instagram.com/p/Bii5hZdhRoQ/?utm_source=ig_web_copy_link

ಬ್ಯಾಗ್​ನಲ್ಲಿ ಇವೆಲ್ಲ ಸದಾ ಇರುತ್ತೆ: ಪ್ರಾಚಿ ದೇಸಾಯಿಯ ಬ್ಯಾಗ್​ನಲ್ಲಿ ಕಾಂಪ್ಯಾಕ್ಟ್​ ಕನ್ನಡಿಯಿರುತ್ತಂತೆ. ಅದರ ಸಹಾಯದಿಂದ ಹೊರಗೆ ಹೋದಾಗ ಮೇಕಪ್​ ಸರಿಯಿದೆಯೋ ಇಲ್ಲವೋ ಅಂತ ನೋಡಿಕೊಳೋಕೆ ಅನುಕೂಲವಾಗುತ್ತಂತೆ. ಕ್ರೀಮ್​ ಬ್ಲಶ್​ ಅಂದ್ರೆ ಪ್ರಾಚಿಗೆ ಸಖತ್​ ಇಷ್ಟವಂತೆ. ಸೋ ತನ್ನ ಬ್ಯಾಗ್​ನಲ್ಲಿ ಸದಾ ಕ್ರೀಮ್​ ಬ್ಲಶ್ ಅನ್ನು ಕ್ಯಾರಿ ಮಾಡ್ತಾರಂತೆ. ಇನ್ನು ಹೈಜೀನ್​ ವಿಷ್ಯಕ್ಕೆ ಬಂದ್ರೆ ಹ್ಯಾಂಡ್ ಕ್ರೀಮ್​,​ ಸ್ಯಾನಿಟೈಸರ್​ ಮತ್ತು ವೆಟ್​ ವೈಪ್ಸ್​ಗಳನ್ನು ಇಟ್ಟುಕೊಂಡಿರ್ತಾರಂತೆ. ಪ್ರಾಚಿಯ ಕೂದಲು ಚಿಕ್ಕದಾಗಿರುವ ಕಾರಣ ಮಿನಿ ಬ್ರಶ್​ ಯೂಸ್​ ಮಾಡ್ತಾರಂತೆ. 

Published On - 10:38 pm, Mon, 4 November 19

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ