AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಕ್ರವಾರ ಟಾಕೀಸ್​​​ನಲ್ಲಿ ಕನ್ನಡದ ಏಳು ಚಿತ್ರಗಳು; ನಿಮ್ಮಿಷ್ಟದ ಸಿನಿಮಾ ಯಾವುದು?

ಈ ಶುಕ್ರವಾರ (ಫೆಬ್ರವರಿ 18) ಸ್ಯಾಂಡಲ್​ವುಡ್​ನಲ್ಲೇ ಏಳು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಅವುಗಳಲ್ಲಿ ‘ಬೈ ಟೂ ಲವ್​’ ಸಿನಿಮಾ, ಗಿಲ್ಕಿ ಚಿತ್ರಗಳು ಪ್ರಮುಖವಾಗಿದೆ.

ಶುಕ್ರವಾರ ಟಾಕೀಸ್​​​ನಲ್ಲಿ ಕನ್ನಡದ ಏಳು ಚಿತ್ರಗಳು; ನಿಮ್ಮಿಷ್ಟದ ಸಿನಿಮಾ ಯಾವುದು?
ಬೈ ಟೂ ಲವ್​-ವರದ-ಗಿಲ್ಕಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Feb 18, 2022 | 6:00 AM

Share

ಶುಕ್ರವಾರ ಬಂತು ಎಂದರೆ ಸಾಕು, ಚಿತ್ರರಂಗದಲ್ಲಿ (Cinema Industry)  ಹಬ್ಬದ ಕಳೆ ಮೂಡುತ್ತದೆ. ದೊಡ್ಡ ಬಜೆಟ್​ ಚಿತ್ರಗಳು ಹಾಗೂ ಸಣ್ಣ ಬಜೆಟ್​ನ ಚಿತ್ರಗಳು ಒಟ್ಟೊಟ್ಟಿಗೆ ಥಿಯೇಟರ್​ಗೆ ಲಗ್ಗೆ ಇಡುತ್ತವೆ. ಕೆಲ ಸಿನಿಮಾಗಳು ಪ್ರಚಾರ ಮಾಡಿ ಒಳ್ಳೆಯ ಹೈಪ್​ ಪಡೆದುಕೊಂಡರೆ, ಇನ್ನೂ ಕೆಲ ಚಿತ್ರಗಳು ಯಾವುದೇ ಪ್ರಚಾರವಿಲ್ಲದೆ, ಅದೃಷ್ಟ ಪರೀಕ್ಷೆಗೆ ಮುಂದಾಗುತ್ತವೆ. ಈ ಶುಕ್ರವಾರ (ಫೆಬ್ರವರಿ 18) ಸ್ಯಾಂಡಲ್​ವುಡ್​ನಲ್ಲೇ (Sandalwood) ಏಳು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಅವುಗಳಲ್ಲಿ ‘ಬೈ ಟೂ ಲವ್​’ (By Two Love), ಗಿಲ್ಕಿ ಚಿತ್ರಗಳು ಪ್ರಮುಖವಾಗಿದೆ.

‘ಬೈ ಟೂ ಲವ್’

ನಟ ಧನ್ವೀರ್ ಮತ್ತು ಶ್ರೀಲೀಲಾ ‘ಬೈ ಟೂ ಲವ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಪ್ರೀತಿ-ಪ್ರೇಮದ ಕಥೆ ಸಿನಿಮಾದ ಹೈಲೈಟ್​ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ‘ಬಜಾರ್​’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟವರು ಧನ್ವೀರ್. ‘ಕಿಸ್​’ ಚಿತ್ರದ ಮೂಲಕ ಶ್ರೀಲೀಲಾ ಬೇಡಿಕೆ ಹೆಚ್ಚಿಸಿಕೊಂಡರು. ಇಬ್ಬರೂ ‘ಬೈ ಟೂ ಲವ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹರಿ ಸಂತೋಷ್​ ನಿರ್ದೇಶನವಿದೆ. ಸಾಧು ಕೋಕಿಲ, ರಂಗಾಯಣ ರಘು, ಅಚ್ಯುತ್​ ಕುಮಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವರದ

ಖ್ಯಾತ ನಟ ವಿನೋದ್ ಪ್ರಭಾಕರ್ ಅಭಿನಯದ ‘ವರದ’ ಚಿತ್ರ ಈ ಮೊದಲು ವಿವಾದದ ಮೂಲಕ ಸುದ್ದಿಯಾಗಿತ್ತು. ಚಿತ್ರದ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿನೋದ್​ ಪ್ರಭಾಕರ್​ ಅವರು ತಮ್ಮದೇ ಚಿತ್ರತಂಡದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಪುನೀತ್ ಫೋಟೋ ಹಾಕಿಲ್ಲ ಎಂದು ನಿರ್ದೇಶಕ ಉದಯ್​ ಪ್ರಕಾಶ್​ ವಿರುದ್ಧ ಕಿಡಿಕಾರಿದ್ದರು. ಇದರಿಂದ ಚಿತ್ರತಂಡಕ್ಕೆ ಹಿನ್ನಡೆ ಆಗಿದೆ.  ಅಮಿತಾ ರಂಗನಾಥ್​, ಚರಣ್​ ರಾಜ್​, ಅನಿಲ್​ ಸಿದ್ದು, ಅಶ್ವಿನಿ ಗೌಡ, ಎಂ.ಕೆ. ಮಠ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಬಹುಕೃತ ವೇಷಂ

ವೈಷ್ಣವಿ ಗೌಡ ನಟನೆಯ ಸಿನಿಮಾ ‘ಬಹುಕೃತ ವೇಷಂ’. ‘ಗೌಡ್ರು ಸೈಕಲ್’ ಸಿನಿಮಾದ ನಾಯಕ ಶಶಿಕಾಂತ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ಕೆ. ಎಳ್ಳಂಪಳ್ಳಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇವರು ಈ ಹಿಂದೆ ‘ಗೌಡ್ರು ಸೈಕಲ್’ ಚಿತ್ರ ನಿರ್ದೇಶನ ಮಾಡಿದ್ದರು.  ಎಚ್. ನಂದ ಹಾಗೂ ಡಿ.ಕೆ. ರವಿ ನಿರ್ಮಾಣದ ಈ ಚಿತ್ರಕ್ಕೆ ಅಧ್ಯಾಯ್ ತೇಜ್ ಕಥೆ ಚಿತ್ರಕಥೆ ಬರೆದಿದ್ದಾರೆ.  ಹರ್ಷಕುಮಾರ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ‘ ಸಿನಿಮಾಗೆ ಸಂಕಲನ ಮಾಡಿರೋ ಜ್ಞಾನೇಶ್ ಬಿ. ಮಾತಾಡ್ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ.

ಗಿಲ್ಕಿ

ಚೈತ್ರಾ ಆಚಾರ್​ ಮತ್ತು ತಾರಕ್​ ಪೊನ್ನಪ್ಪ ಜೋಡಿಯಾಗಿ ‘ಗಿಲ್ಕಿ’ ಚಿತ್ರದಲ್ಲಿ ನಟಿಸಿದ್ದಾರೆ. ಜೋಡಿ ಎಂದಮಾತ್ರಕ್ಕೆ ಮಾಮೂಲಿ ಸಿನಿಮಾಗಳಂತೆ ಮರಸುತ್ತುವ ಪ್ರೇಮಿಗಳ ಪಾತ್ರ ಇದಲ್ಲ. ಬುದ್ಧಿಮಾಂದ್ಯನಾಗಿ ತಾರಕ್​ ಪೊನ್ನಪ್ಪ ನಟಿಸಿದರೆ, ಸೆಲೆಬ್ರಲ್​ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿರುವ ಅಂಗವಿಕಲ ಹುಡುಗಿಯಾಗಿ ಚೈತ್ರಾ ಆಚಾರ್​ ಅಭಿನಯಿಸಿದ್ದಾರೆ. ಯೂಟ್ಯೂಬ್​ನಲ್ಲಿ ‘ಗಿಲ್ಕಿ’ ಸಿನಿಮಾದ ಟ್ರೇಲರ್​ ನೋಡಿರುವ ಜನರು ಕೂಡ ಪಾಸಿಟಿವ್​ ಆಗಿ ಕಮೆಂಟ್​ ಮಾಡಿದ್ದಾರೆ. ಕೆಂಪರಾಜು ಬಿ.ಎಸ್​. ಸಂಕಲನ, ಆದಿಲ್​ ನದಾಫ್​ ಸಂಗೀತ ನಿರ್ದೇಶನ, ಕಾರ್ತಿಕ್​ ಎಸ್​. ಛಾಯಾಗ್ರಹಣ ಈ ಚಿತ್ರಕ್ಕಿದೆ. ಇಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಇದಲ್ಲದೆ, ‘ಮಹಾ ರೌದ್ರಂ’, ‘ಭಾವಚಿತ್ರ’, ‘ಗರುಡಾಕ್ಷ’ ಚಿತ್ರಗಳು ಕೂಡ ಇಂದು ರಿಲೀಸ್​ ಆಗುತ್ತಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ

Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ