AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮ್​​ಬ್ಯಾಕ್​ ಸಿನಿಮಾ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ನಟಿ ರಮ್ಯಾ; ಇಲ್ಲಿದೆ ದಿವ್ಯಾ ಸ್ಪಂದನ ಸ್ಪಷ್ಟನೆ  

ರಮ್ಯಾ ನಟಿಸಿದ ಮೊದಲ ಸಿನಿಮಾ ‘ಅಭಿ’. 2003ರಲ್ಲಿ ಆ ಚಿತ್ರ ಬಿಡುಗಡೆ ಆಗಿತ್ತು. ಆಗ ರಮ್ಯಾ ಅವರಿಗೆ 21 ವರ್ಷ ವಯಸ್ಸು. ಆ ಚಿತ್ರದಿಂದ ಸಿಕ್ಕ ಭಾರಿ ಯಶಸ್ಸಿನ ಬಳಿಕ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಹೇರಳ ಅವಕಾಶಗಳು ಒಲಿದು ಬಂದವು. ‘

ಕಮ್​​ಬ್ಯಾಕ್​ ಸಿನಿಮಾ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ನಟಿ ರಮ್ಯಾ; ಇಲ್ಲಿದೆ ದಿವ್ಯಾ ಸ್ಪಂದನ ಸ್ಪಷ್ಟನೆ  
ರಮ್ಯಾ
TV9 Web
| Edited By: |

Updated on:Feb 17, 2022 | 8:38 PM

Share

ನಟಿ ರಮ್ಯಾ(Actress Ramya) ಅವರು ಸ್ಯಾಂಡಲ್​ವುಡ್​ಗೆ (Sandalwood) ಕಮ್​​ಬ್ಯಾಕ್​ ಮಾಡೋದು ಬಹುತೇಕ ಖಚಿತವಾಗಿದೆ. ಅವರು ಚಿತ್ರರಂಗಕ್ಕೆ ಮರಳಬೇಕು ಎಂದು ಅನೇಕರು ಒತ್ತಾಯ ಹೇರುತ್ತಲೇ ಇದ್ದರು. ಕೊನೆಗೂ ರಮ್ಯಾ ಇದಕ್ಕೆ ಒಪ್ಪಿದ್ದಾರೆ. ಅವರು ಸ್ಯಾಂಡಲ್​ವುಡ್​ನಲ್ಲಿ ಒಂದಷ್ಟು ಸ್ಕ್ರಿಪ್ಟ್​ ಕೇಳುತ್ತಿದ್ದಾರೆ. ಅದಕ್ಕೂ ಮೊದಲೇ ರಮ್ಯಾ ಕಮ್​​ಬ್ಯಾಕ್​ ಮಾಡಲಿರುವ ಸಿನಿಮಾ ಬಗ್ಗೆ ಒಂದಷ್ಟು ಸುದ್ದಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದವು. ಕೆಲ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಕಟ ಮಾಡಿದ್ದವು. ಈ ಕುರಿತಂತೆ ರಮ್ಯಾ ಈಗ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಅವರು ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಕೂಡ ಅವರು ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ (Social Media) ಅವರು ತಮ್ಮ ದಿನಚರಿ ಬಗ್ಗೆ ಅಪ್​ಡೇಟ್​ ನೀಡುತ್ತಲೇ ಇರುತ್ತಾರೆ. ರಾಜಕೀಯಕ್ಕೂ ಗುಡ್​ಬೈ ಹೇಳಿ ಹಲವು ಸಮಯ ಕಳೆದಿದೆ. ಈಗ ರಮ್ಯಾ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಅನ್ನೋದು ಖುಷಿಯ ವಿಚಾರ.

ರಮ್ಯಾ ನಟಿಸಿದ ಮೊದಲ ಸಿನಿಮಾ ‘ಅಭಿ’. 2003ರಲ್ಲಿ ಆ ಚಿತ್ರ ಬಿಡುಗಡೆ ಆಗಿತ್ತು. ಆಗ ರಮ್ಯಾ ಅವರಿಗೆ 21 ವರ್ಷ ವಯಸ್ಸು. ಆ ಚಿತ್ರದಿಂದ ಸಿಕ್ಕ ಭಾರಿ ಯಶಸ್ಸಿನ ಬಳಿಕ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಹೇರಳ ಅವಕಾಶಗಳು ಒಲಿದು ಬಂದವು. ‘ಅಭಿ’ ನಂತರ ಪುನೀತ್​ ರಾಜ್​ಕುಮಾರ್​ ಜತೆ ‘ಆಕಾಶ್​’ ಮತ್ತು ‘ಅರಸು’ ಸಿನಿಮಾಗಳನ್ನು ಅವರು ಮಾಡಿದರು. ಸ್ಯಾಂಡಲ್​ವುಡ್​ನ ಸ್ಟಾರ್​ ನಟರ ಸಿನಿಮಾಗಳಿಗೆ ಅವರು ಬಹುಬೇಡಿಕೆಯ ಕಲಾವಿದೆಯಾಗಿ ಗುರುತಿಸಿಕೊಡರು. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಅವಕಾಶಗಳು ಇರುವಾಗಲೇ ರಮ್ಯಾಗೆ ರಾಜಕೀಯದಿಂದ ಬುಲಾವ್​ ಬಂತು. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಸದೆ ಆಗಿಯೂ ಗೆದ್ದು ಬೀಗಿದರು. ರಾಜಕೀಯದಲ್ಲಿ ಕಾಂಗ್ರೆಸ್​ ಪಕ್ಷದ ಜೊತೆ ಗುರುತಿಸಿಕೊಂಡ ಬಳಿಕ ಅವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದುಕೊಂಡರು. ಅಲ್ಲಿಂದೀಚೆಗೆ ಅವರು ಯಾವುದೇ ಹೊಸ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ.

ರಮ್ಯಾ ಕೆಲ ಸಿನಿಮಾ ಕಥೆಗಳನ್ನು ಕೇಳುತ್ತಿರುವುದು ನಿಜ. ಈ ಬಗ್ಗೆ ಬರೆದುಕೊಂಡಿರುವ ಅವರು, ‘ನನ್ನ ಕಮ್​​ಬ್ಯಾಕ್​ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಇದೆ. ವದಂತಿಗಳು ಕೂಡ ಹರಡುತ್ತಿವೆ. ನಾನು ಕೆಲವು ಸ್ಕ್ರಿಪ್ಟ್​ಗಳನ್ನು ಕೇಳಿದ್ದೇನೆ. ಸರಿಯಾದ ಸಂದರ್ಭದಲ್ಲಿ ಈ ಬಗ್ಗೆ ನನ್ನಿಂದಲೇ ಅಪ್​ಡೇಟ್​ ಸಿಗುತ್ತದೆ. ಅಲ್ಲಿಯವರೆಗೆ ಆ ಕುತೂಹಲವನ್ನು ತಡೆದಿಟ್ಟುಕೊಳ್ಳಿ’ ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ: ನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ: ಮೃತ ಶ್ವಾನ ಲಾರಾ ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯಾ

ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣ ಆಗಿದೆ: ಹಿಜಾಬ್​ ವಿವಾದಕ್ಕೆ ಕಮಲ್​ ಹಾಸನ್​, ರಮ್ಯಾ ಪ್ರತಿಕ್ರಿಯೆ​

Published On - 7:20 pm, Thu, 17 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್