ಸೋನಲ್​-ತರುಣ್​ ಸುಧೀರ್​ ಅದ್ದೂರಿ ರಿಸೆಪ್ಷನ್: ಆಶೀರ್ವಾದ ಮಾಡಿದ ಬಿ.ಎಸ್​. ಯಡಿಯೂರಪ್ಪ

ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಇಂದು (ಆಗಸ್ಟ್​ 10) ಒಂದೆಡೆ ಸೇರಿದ್ದಾರೆ. ಅದಕ್ಕೆ ಕಾರಣ ತರುಣ್​ ಸುಧೀರ್​ ಮತ್ತು ಸೋನಲ್​ ಮಾಂತೆರೋ ಅವರ ಆರತಕ್ಷತೆ ಸಮಾರಂಭ. ಚಿತ್ರರಂಗ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಬಂದು ನವ ಜೋಡಿಗೆ ಅಭಿನಂದನೆ ತಿಳಿಸಿದ್ದಾರೆ. ತುಂಬ ಅದ್ದೂರಿಯಾಗಿ ರಿಸೆಪ್ಷನ್​ ನಡೆಯುತ್ತಿದೆ.

ಸೋನಲ್​-ತರುಣ್​ ಸುಧೀರ್​ ಅದ್ದೂರಿ ರಿಸೆಪ್ಷನ್: ಆಶೀರ್ವಾದ ಮಾಡಿದ ಬಿ.ಎಸ್​. ಯಡಿಯೂರಪ್ಪ
ತರುಣ್​ ಸುಧೀರ್ ಆರತಕ್ಷತೆ

Updated on: Aug 10, 2024 | 9:36 PM

‘ರಾಬರ್ಟ್​’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ನಿರ್ದೇಶಕ ತರುಣ್​ ಸುಧೀರ್​ ಹಾಗೂ ನಟಿ ಸೋನಲ್​ ಮಾಂತೆರೋ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆಪ್ತರು, ಸ್ನೇಹಿತರು, ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅವರ ವಿವಾಹ ಕಾರ್ಯ ನಡೆಯುತ್ತಿದೆ. ನಿನ್ನೆಯಿಂದಲೇ (ಆಗಸ್ಟ್ 09) ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿದ್ದವು. ಇಂದು (ಆಗಸ್ಟ್​ 10) ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್​ ನಡೆಯುತ್ತಿದೆ. ಬಿ.ಎಸ್​. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಬಂದು ಆಶೀರ್ವಾದ ಮಾಡಿದ್ದಾರೆ. ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಆರತಕ್ಷತೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

ರೆಡ್​ ರೋಸ್​ ಥೀಮ್​ನಲ್ಲಿ ಆರತಕ್ಷತೆ ವೇದಿಕೆ ಸಿದ್ಧವಾಗಿದೆ. ಅವಾರ್ಡ್​ ಫಂಕ್ಷನ್​ ರೀತಿ ಇಡೀ ವಾತಾವರಣ ಸಿಂಗಾರಗೊಂಡಿದೆ. ಪವನ್​ ಒಡೆಯರ್​, ಅನಿರುದ್ಧ್​ ಜತ್ಕರ್​, ಸಂತೋಷ್​ ಆನಂದ್​ರಾಮ್​, ರವಿಶಂಕರ್​ ಗೌಡ, ಕಾರುಣ್ಯ ರಾಮ್​, ಉಮಾಪತಿ ಶ್ರೀನಿವಾಸ್​ ಗೌಡ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಸೆಲೆಬ್ರಿಟಿಗಳು ಬಂದು ನವ ಜೋಡಿಯನ್ನು ಹರಸಿದ್ದಾರೆ. ‘ನಟನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡ ತರುಣ್​ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವೃತ್ತಿಜೀವನ ಮತ್ತು ಖಾಸಗಿ ಬದುಕಿನಲ್ಲಿ ದೇವರು ಅವರಿಗೆ ಒಳ್ಳೆಯದು ಮಾಡಿದ್ದಾರೆ. ಈ ಜೋಡಿಗೆ ನನ್ನ ಅಭಿನಂದನೆಗಳು’ ಎಂದು ಸಂತೋಷ್​ ಆನಂದ್​ ರಾಮ್ ಹೇಳಿದ್ದಾರೆ.

‘ರಾಬರ್ಟ್​’ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಮಾತನಾಡಿ, ‘ನಮ್ಮ ಸಿನಿಮಾದ ಶೂಟಿಂಗ್​ನಲ್ಲಿ ನಾಯಕ ನಟರು ಅಣಕಿಸುತ್ತಿದ್ದರು. ಆದರೆ ಸೀರಿಯಸ್​ ಆಗಿ ಈ ಮದುವೆ ಆಗುತ್ತದೆ ಅಂತ ನಾವು ಅಂದುಕೊಂಡಿರಲಿಲ್ಲ. ಸೋನಲ್​-ತರುಣ್​ ಜೋಡಿ ಚೆನ್ನಾಗಿದೆ. ನಮ್ಮ ಸಿನಿಮಾ ಮಾಡಿದ್ದರಿಂದ ಈ ರೀತಿ ಒಳ್ಳೆಯದು ಆಯಿತು ಅಂತ ನಮಗೆ ಖುಷಿ’ ಎಂದಿದ್ದಾರೆ.

ತರುಣ್​ ಸುಧೀರ್​-ಸೋನಲ್​ ಆರತಕ್ಷತೆಗೆ 180 ಬಗೆಯ ಊಟ; ಸಿದ್ಧವಾಗಿದೆ ಭರ್ಜರಿ ಭೋಜನ

‘ಇಂದು ನಮ್ಮ ತರುಣ್​ ಮದುವೆ. ನನ್ನ ಬಳಗದಲ್ಲಿ ಇದ್ದ ಬ್ಯಾಚುಲರ್​ ಅವನೊಬ್ಬನೇ. ಅವನು ಇಂದು ಮದುವೆ ಆಗುತ್ತಿರುವುದಕ್ಕೆ ನಮಗೆಲ್ಲ ತುಂಬ ಸಂತೋಷ. ತರುಣ್​-ಸೋನಲ್​ ವೈವಾಹಿಕ ಜೀವನ ಸುಖಮಯವಾಗಿ ಇರಲಿ’ ಎಂದು ರವಿಶಂಕರ್​ ಗೌಡ ಹಾರೈಸಿದ್ದಾರೆ. ‘ತರುಣ್​ ನನಗೆ ಬಹಳ ವರ್ಷಗಳಿಂದ ಸ್ನೇಹಿತ. ಅವರ ಮದುವೆ ವಿಷಯ ಮೊದಲು ತಿಳಿದು ಬಹಳ ಖುಷಿ ಆಯ್ತು. ಈಗ ಅವರು ವಿವಾಹಿತರ ಕ್ಲಬ್​ಗೆ ಬಂದಿರುವುದು ನಮಗೆ ಖುಷಿ ಆಗಿದೆ’ ಎಂದು ಪವನ್ ಒಡೆಯರ್​ ಹೇಳಿದ್ದಾರೆ. ಪವನ್​ ಒಡೆಯರ್​ ಪತ್ನಿ ಅಪೇಕ್ಷಾ ಪುರೋಹಿತ್​ ಕೂಡ ಆರತಕ್ಷತೆಗೆ ಬಂದು ವಿಶ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us