AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕುರಿ ಕಾಯೋನು’ ಸಿನಿಮಾ ಟೈಟಲ್​ ಲಾಂಚ್​; ಮುಖ್ಯಮಂತ್ರಿ ಆಗ್ತಾರಾ ಭೈರತಿ ಬಸವರಾಜ್?

ಡಿಫರೆಂಟ್​ ಶೀರ್ಷಿಕೆ ಹೊಂದಿರುವ ‘ಕುರಿ ಕಾಯೋನು’ ಚಿತ್ರತಂಡಕ್ಕೆ ಶಾಸಕ ಭೈರತಿ ಬಸವರಾಜ್​ ಅವರು ಸಾಥ್​ ನೀಡಿದ್ದಾರೆ. ಟೈಟಲ್​ ಅನಾವರಣ ಮಾಡಿಕೊಡುವ ಮೂಲಕ ಅವರು ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಈ ಸಿನಿಮಾದಲ್ಲಿ ಬರುವ ಮುಖ್ಯಮಂತ್ರಿ ಪಾತ್ರವನ್ನು ಭೈರತಿ ಬಸವರಾಜ್​ ಅವರಿಂದ ಮಾಡಿಸಬೇಕು ಎಂಬ ಆಸೆ ನಿರ್ದೇಶಕರದ್ದು.

‘ಕುರಿ ಕಾಯೋನು’ ಸಿನಿಮಾ ಟೈಟಲ್​ ಲಾಂಚ್​; ಮುಖ್ಯಮಂತ್ರಿ ಆಗ್ತಾರಾ ಭೈರತಿ ಬಸವರಾಜ್?
‘ಕುರಿ ಕಾಯೋನು’ ಸಿನಿಮಾದ ಟೈಟಲ್​ ಲಾಂಚ್​ ಕಾರ್ಯಕ್ರಮ
ಮದನ್​ ಕುಮಾರ್​
|

Updated on:Aug 17, 2024 | 7:18 PM

Share

‘ಕುರಿ ಕಾಯೋನು’ ಸಿನಿಮಾದ ಟೈಟಲ್​ ಲಾಂಚ್​ ಮಾಡಲಾಗಿದೆ. ಈ ಸಿನಿಮಾದಲ್ಲಿ ಹೀರೋ ಮುಗ್ಧ. ಅವನಿಗೆ ತನ್ನ ಕುರಿಗಳನ್ನು ಬಿಟ್ಟರೆ ಹೊರಗಿನ ಬೇರೆ ಪ್ರಪಂಚದ ಬಗ್ಗೆ ಗೊತ್ತಿಲ್ಲ. ಕುರಿಗಳನ್ನು ಜೀವದಂತೆ ಪ್ರೀತಿಸುತ್ತಾನೆ. ಆ ಕುರಿಯನ್ನು ಯಾರಾದರೂ ಕೆಣಕಿದಾಗ ಆತನೂ ಕೆರಳುತ್ತಾನೆ. ತನ್ನ ಕುರಿ ಕಳೆದುಹೋದರೆ ವಿಚಲಿತನಾಗುತ್ತಾನೆ. ಈ ರೀತಿಯ ಒಂದು ಕಥೆಯನ್ನು ಇಟ್ಟುಕೊಂಡು ಮಹೇಶ್ (ಓಂ) ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರೇ ನಟನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಶಾಸಕ ಭೈರತಿ ಬಸವರಾಜ್​ ಅವರು ಈ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದರು.

ಕಳೆದ 2 ದಶಕಗಳಿಂದಲೂ ಸ್ಯಾಂಡಲ್​ವುಡ್​ನಲ್ಲಿ ಕಲಾವಿದ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಮಹೇಶ್ ಅವರಿಗೆ ಇದೆ. ಈಗ ಅವರು ಸ್ವತಂತ್ರ ನಿರ್ದೇಶಕನಾಗಿ ‘ಕುರಿ ಕಾಯೋನು’ ಸಿನಿಮಾ ಮಾಡುತ್ತಿದ್ದಾರೆ. ಅನಿವಾಸಿ ಕನ್ನಡಿಗರಾದ ಪ್ರಿಯಾ, ರಾಜೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಟೈಟಲ್​ ಲಾಂಚ್​ ವೇಳೆ ಮಾತನಾಡಿದ ಭೈರತಿ ಬಸವರಾಜ್, ‘ಮಹೇಶ್ ಬಹಳ ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾನೆ. ಈಗ ಡೈರೆಕ್ಟರ್ ಆಗಬೇಕೆಂದು ಹೊರಟಿದ್ದಾನೆ. ರಾಜ್ಯದ ಜನರು ಆತನಿಗೆ ಸಹಕಾರ ನೀಡಬೇಕು. ನನಗೆ ಆರೋಗ್ಯ ಸರಿ ಇಲ್ಲದಿದ್ದರೂ ಕೂಡ ಯುವಕರಿಗೆ ಸ್ಫೂರ್ತಿ ನೀಡಲು ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.

ಮಿಸಸ್ ಇಂಡಿಯಾ ಯೂನಿವರ್ಸ್ ವಿನ್ನರ್ ಆದ ಪ್ರಿಯಾ ರಾಜೇಶ್ ಅವರು ವಿದೇಶದಲ್ಲಿ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರು ‘ಕಿರಿ ಕಾಯೋನು’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ನಾವು ಮಹೇಶ್ ಅವರನ್ನು 29 ವರ್ಷಗಳಿಂದ ನೋಡುತ್ತಿದ್ದೇವೆ. ಬಹಳ ಕಷ್ಟಪಟ್ಟಿದ್ದಾರೆ’ ಎಂದು ಅವರು ಹೇಳಿದರು. ಸಹ-ನಿರ್ಮಾಪಕ ದೀಪು ಮಾತನಾಡಿ, ‘ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾದ ಸಿನಿಮಾ ಇದಲ್ಲ. ಚಿತ್ರ ನೋಡುವಾಗ ಅದು ಅರ್ಥವಾಗುತ್ತೆ’ ಎಂದು ಹೇಳಿದರು. ಹಿರಿಯ ನಟ ಕೋಟೆ ಪ್ರಭಾಕರ್, ವೀಣಾ ಮಹೇಶ್ ಅವರು ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು. ರಾಘವೇಂದ್ರ ಪ್ರಸಾದ್ ಅವರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಪರಿಸ್ಥಿತಿ, ಹಿರಿಯ ನಟ ಜಗ್ಗೇಶ್ ಕಣ್ಣೀರು

‘ಗೌರಿ-ಗಣೇಶ ಹಬ್ಬಕ್ಕೆ ಮುಹೂರ್ತ ಮಾಡುತ್ತೇವೆ. ಕೋಲಾರ, ಮಲೆ ಮಾದೇಶ್ವರ ಬೆಟ್ಟ, ಅಂತರಗಂಗೆ ಮುಂತಾದ ಕಡೆಗಳಲ್ಲಿ ಚಿತ್ರೀಕರಿಸುತ್ತೇವೆ. ಈ ಸಿನಿಮಾದಲ್ಲಿ ಕೆ.ಆರ್. ಪುರ ಕ್ಷೇತ್ರದ ಅನೇಕ ಕಲಾವಿದರಿಗೆ ಅವಕಾಶ ಕೊಡುತ್ತಿದ್ದೇವೆ. ಮುಖ್ಯವಾಗಿ ಸಿನಿಮಾದ ಕಥೆಗೆ ಟ್ವಿಸ್ಟ್ ನೀಡುವ ಮುಖ್ಯಮಂತ್ರಿ ಪಾತ್ರವಿದ್ದು, ಅದನ್ನು ನಮ್ಮ ಶಾಸಕರಾದ ಭೈರತಿ ಬಸವರಾಜ್ ಅವರಿಂದಲೇ ಮಾಡಿಸುವ ಆಸೆ ಇದೆ’ ಎಂದು ನಿರ್ದೇಶಕ ಕಮ್​ ನಾಯಕ ನಟ ಮಹೇಶ್​ ಹೇಳಿದ್ದಾರೆ. ಭೈರತಿ ಬಸವರಾಜ್ ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:40 pm, Sat, 17 August 24

Follow Us
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!
ಸಂಪರ್ಕ ಕ್ರಾಂತಿ ರೈಲಿನಲ್ಲಿ ಗಾಂಜಾ ಸೇವನೆ: ಯುವಕರ ದರ್ಬಾರ್ ವಿಡಿಯೋ ವೈರಲ್!
ಸಂಪರ್ಕ ಕ್ರಾಂತಿ ರೈಲಿನಲ್ಲಿ ಗಾಂಜಾ ಸೇವನೆ: ಯುವಕರ ದರ್ಬಾರ್ ವಿಡಿಯೋ ವೈರಲ್!
ತವರಿನಿಂದ ಹೊರಗೆ RCBಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?
ತವರಿನಿಂದ ಹೊರಗೆ RCBಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?
ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?
ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?