CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್, ವೇಳಾಪಟ್ಟಿ, ಸ್ಥಳ, ತಂಡದ ವಿವರ
CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮತ್ತೊಮ್ಮೆ ಪ್ರಾರಂಭ ಆಗಿದೆ. ವಿವಿಧ ಭಾಷೆಯ ಸಿನಿಮಾ ರಂಗದ ಸೆಲೆಬ್ರಿಟಿಗಳು ಬ್ಯಾಟ್ ಹಿಡಿದು ಅಂಗಳಕ್ಕೆ ಇಳಿಯುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ನ ಗಟ್ಟಿ ತಂಡವಾಗಿದ್ದು ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಲೇ ಬಂದಿದೆ. ಇದೀಗ 2025ರ ಸಿಸಿಎಲ್ಗೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಘೋಷಣೆ ಮಾಡಲಾಗಿದೆ.

ಸಿಸಿಎಲ್ ಮತ್ತೆ ಶುರುವಾಗಿದೆ. ಸಿಸಿಎಲ್ 2025ಕ್ಕೆ ಸ್ಯಾಂಡಲ್ವುಡ್ ಸ್ಟಾರ್ಗಳು ರೆಡಿಯಾಗುತ್ತಿದ್ದಾರೆ. ಇದೇ ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ಪ್ರಾರಂಭ ಆಗಲಿದೆ. ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸುದೀಪ್ ಮುನ್ನಡೆಸಲಿದ್ದು, ತಂಡದ ಮಾಲೀಕರಾಗಿ ಅಶೋಕ್ ಖೇಣಿ ಇರಲಿದ್ದಾರೆ. ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಗಹೊಮ್ಮಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ತಂಡ ಸೇರಿದ್ದು ಈ ಬಾರಿ ಮತ್ತೆ ತಂಡ ಸ್ಟ್ರಾಂಟ್ ಆಗಿದೆ.
ತಂಡಗಳ ಪಟ್ಟಿ
ಈ ಬಾರಿ ಒಟ್ಟು 7 ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಆಡಲಿವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್ ಸೇರಿದಂತೆ 7 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಸಿಸಿಎಲ್ ಸೀಸನ್ 11ಕ್ಕೆ ಬ್ಲೋಡ್ಸ್ ಟೈಟಲ್ ಸ್ಪಾನ್ಸರ್ ಮಾಡುತ್ತಿದ್ದು, ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಕೋ ಸ್ಪಾನ್ಸರ್ ಮಾಡುತ್ತಿದ್ದಾರೆ. ಅಸೋಸಿಯೇಟ್ ಸ್ಪಾನ್ಸರ್ ಆಗಿ ನೈಸ್ (NICE) ಲಿಮಿಟೆಡ್ , ಇಕ್ಯೂಪ್ಮೆಂಟ್ ಸ್ಪಾನ್ಸರ್ SG, ಅನಾಲೈಟಿಕ್ ಸ್ಪಾನ್ಸರ್ St8bat ಸಾಥ್ ಕೊಡುತ್ತಿದ್ದಾರೆ.
ಕರ್ನಾಟಕ ಬುಲ್ಡೋಜರ್ಸ್ ತಂಡ ಹೀಗಿದೆ
ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಕಾರ್ತಿಕ್ ಜಯರಾಮ್ ಡಾರ್ಲಿಂಗ್ ಕೃಷ್ಣ ಸುನಿಲ್ ರಾವ್ ರಾಜೀವ್ ಹನು ಚಂದನ್ ಕುಮಾರ್ ಪ್ರತಾಪ್ ನಾರಾಯಣ್ ನಿರೂಪ್ ಭಂಡಾರಿ ಅನೂಪ್ ಭಂಡಾರಿ ಕರಣ್ ಆರ್ಯನ್ ಮಂಜುನಾಥ್ ಗೌಡ ಸಾಗರ್ ಗೌಡ ಅಲಕಾನಂದ ತ್ರಿವಿಕ್ರಮ್
CCL-2025 ಹೊಸ ವೇಳಾಪಟ್ಟಿ
ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ಮತ್ತು ಬೆಂಗಾಲ್ ಟೈಗರ್ಸ್ ಮುಖಾಮುಖಿಯಾಗಲಿದ್ದು, ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಸೆಣೆಸಲಿವೆ. ನಾಲ್ಕು ತಂಡಗಳಾದ ಭೋಜ್‌ಪುರಿ ದಬಾಂಗ್ಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್ ಮತ್ತು ಪಂಜಾಬ್ ಡಿ ಶೇರ್ ಫೆಬ್ರವರಿ 9 ರಂದು ದೆಹಲಿಯಲ್ಲಿ ಆಡಲಿವೆ. ಆನಂತರದ ಪಂದ್ಯಗಳು ಕ್ರಮವಾಗಿ ಹೈದರಾಬಾದ್, ಕಟಕ್, ಸೂರತ್‌ನಲ್ಲಿ ನಡೆಯಲಿವೆ. ಮಾರ್ಚ್ 1ರಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು ಮತ್ತು ಮಾರ್ಚ್ 2ರಂದು ಫೈನಲ್ ಪಂದ್ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ.
ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳ ವಿವರ
8 ಫೆಬ್ರವರಿ – ತೆಲುಗು ವಾರಿಯರ್ಸ್ – ಬೆಂಗಳೂರು 14 ಫೆಬ್ರವರಿ – ಚೆನ್ನೈ ರೈನೋಸ್ – ಹೈದರಾಬಾದ್ 15 ಫೆಬ್ರವರಿ – ಮುಂಬೈ ಹೀರೋಸ್ – ಹೈದರಾಬಾದ್ 22 ಫೆಬ್ರವರಿ – ಪಂಜಾಬ್ ಶೇರ್ – ಸೂರತ್
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ