AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಸಿಎಲ್’ಗೆ ದಿನಗಣನೆ, ಕ್ರೀಡಾಕೂಟದ ಬಗ್ಗೆ ಮಾಹಿತಿ ಹಂಚಿಕೊಂಡ ಕರ್ನಾಟಕದ ತಂಡ

CCL: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಕನ್ನಡ ಚಿತ್ರರಂಗವನ್ನು ಕರ್ನಾಟಕ ಬುಲ್ಡೋಜರ್ಸ್​ ತಂಡ ಪ್ರತಿನಿಧಿಸುತ್ತಿದೆ. ಕರ್ನಾಟಕ ಬುಲ್ಡೋಜರ್ಸ್​ ತಂಡವು ಟೂರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

‘ಸಿಸಿಎಲ್’ಗೆ ದಿನಗಣನೆ, ಕ್ರೀಡಾಕೂಟದ ಬಗ್ಗೆ ಮಾಹಿತಿ ಹಂಚಿಕೊಂಡ ಕರ್ನಾಟಕದ ತಂಡ
ಮಂಜುನಾಥ ಸಿ.
|

Updated on: Feb 20, 2024 | 11:14 PM

Share

ಇದೇ ತಿಂಗಳ 23ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (celebrity cricket league 2024) ಪ್ರಾರಂಭವಾಗಲಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಇತ್ತೀಚೆಗೆಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಚಾಲನೆಗೊಂಡಿದೆ. ಇದೀಗ ತಂಡಗಳು ಕ್ರಿಕೆಟ್ ಅಭ್ಯಾಸಕ್ಕಿಳಿದಿದ್ದಾರೆ. ತಾರೆಯರು ಚಿತ್ರೀಕರಣದ ನಡುವೆ ಬಿಡುವು ಪಡೆದು ಪ್ಯಾಡ್, ಗ್ಲೌಸ್ ತೊಟ್ಟು ಕ್ರಿಕೆಟ್ ತರಬೇತಿಯಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡವು ಜೋರಾಗಿಯೇ ಅಭ್ಯಾಸ ಮಾಡುತ್ತಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಮಾಲೀಕ ಅಶೋಕ್ ಖೇಣಿ, ಸಿಸಿಎಲ್ ಸಂಸ್ಥಾಪಕ ವಿಷ್ಣು ಇಂದೋರಿ ಹಾಗೂ ಕ್ಯಾಪ್ಟನ್ ಪ್ರದೀಪ್ ಹಾಗೂ ಇಡೀ ತಂಡ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿ ಟೂರ್ನಿ ಬಗ್ಗೆ ಮಾಹಿತಿ ಹಂಚಿಕೊಂಡರು.

ಕರ್ನಾಟಕ ಬುಲ್ಡೋಜರ್ಸ್ ನಾಯಕ ಪ್ರದೀಪ್ ಮಾತನಾಡಿ, 12 ವರ್ಷದ ಸಿಸಿಎಲ್ ಜರ್ನಿ ನೋಡಿದ ಮೇಲೆ ತುಂಬಾ ಭಾವುಕ ಸನ್ನಿವೇಶ ಎನಿಸುತ್ತದೆ. ವರ್ಷಕ್ಕೆ 2 ತಿಂಗಳು ಲೆಕ್ಕ ಹಾಕಿದರೂ ಈ ವರೆಗೆ ಸಿಸಿಎಲ್​ಗಾಗಿ 24 ತಿಂಗಳು ತೆಗೆಗಿಟ್ಟಿದ್ದೇವೆ. ಅಂದರೆ 2 ವರ್ಷದ ಜೀವನವನ್ನು ಸಿಸಿಎಲ್ ಗೆ ಕೊಟ್ಟಿದ್ದೇವೆ. ಅಷ್ಟು ವರ್ಷದ ಎಫರ್ಟ್ ಇವತ್ತು ಬುರ್ಜ್ ಖಾಲೀಫಾ ಮೇಲೆ ಬರುತ್ತಿದೆ. ಸಿಸಿಎಲ್ ಬಿಗ್ಗರ್ ಅಂಡ್ ಬೆಟ್ಟರ್ ಆಗುತ್ತಿದೆ. ನಾನು ವಿಷ್ಣು ಸರ್ ಗೆ ಧನ್ಯವಾದ ಹೇಳುತ್ತೇನೆ. ಕರ್ನಾಟಕ ಬುಲ್ಡೋಸರ್ಸ್ ಪ್ರಾರಂಭ ಆಗುವುದಕ್ಕೆ ಮೂಲ ಎಂದರೆ ಅದು ಸುದೀಪಣ್ಣ ಅವರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಅವರಿಗೆ ಹುಷಾರಿಲ್ಲ. ಹೀಗಾಗಿ ಅವರು ಬರಲು ಆಗಲಿಲ್ಲ ಎಂದರು.

ಕರ್ನಾಟಕ ಬೋಲ್ಡರ್ ತಂಡದ ಮಾಲೀಕ ಅಶೋಕ್ ಖೇಣಿ ಮಾತನಾಡಿ, ‘10 ವರ್ಷದ ಹಿಂದೆ ಕನ್ನಡ ಸಿನಿಮಾ ಇಂಡಸ್ಟ್ರೀ ಚಿಕ್ಕ ಇಂಡಸ್ಟ್ರೀಯಾಗಿತ್ತು. ಇಂಡಸ್ಟ್ರೀಯ ಒಟ್ಟಾರೆ ಗಳಿಗೆ 50 ಕೋಟಿಯಾಗಿತ್ತು. ಇದು 10 ವರ್ಷದ ಹಿಂದಿನ ಕಥೆ. ‘ಕೆಜಿಎಫ್’ ಬಂದ ಮೇಲೆ ಚಿತ್ರರಂಗ ತುಂಬ ಬದಲಾಗಿದೆ. ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷವಾಯ್ತು. ಅವರಿಗೆ 47 ವಯಸ್ಸು, ಇಂದಿಗೂ, ಹೀರೋ ಆಗಿಯೂ ನಟಿಸ್ತಿದ್ದಾರೆ. ವರ್ಷಕ್ಕೆ 2 ಸಿನಿಮಾ ಮಾಡ್ತಿದ್ದಾರೆ. ನನ್ನ ಅದೃಷ್ಟ ಸಿಸಿಎಲ್ ನಲ್ಲಿ ಇಂತಹ ತಂಡ ಪಡೆದಿರುವುದು. ಸುದೀಪ್ ಅವರಿಗೆ ಕ್ರಿಕೆಟ್ ಅಂದ್ರೆ ಹುಚ್ಚು. ಕ್ರಿಕೆಟ್ ಅನ್ನು ಬಹಳ ಪ್ರೀತಿಸ್ತಾರೆ. ಒಮ್ಮೆ ಸಿಸಿಎಲ್ ನಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಆದರೆ ಅದನ್ನು ಲೆಕ್ಕಿಸದೇ ಮತ್ತೆ ಆಟವಾಡಿದರು. ಕ್ರಿಕೆಟ್ ಸಿನಿಮಾ ರಂಗದ ಭಾಗವೇ ಆಗಿದೆ. ಅದೇ ರೀತಿ ಸಿನಿಮಾ ಕ್ರಿಕೆಟ್ ನ ಒಂದು ಭಾಗ ಎಂದರು.

ಇದನ್ನೂ ಓದಿ:ಸಿಸಿಎಲ್ ಆಡೋ ಎಂಟು ತಂಡಗಳ ಕ್ಯಾಪ್ಟನ್ ಯಾರ್ಯಾರು? ಇಲ್ಲಿದೆ ವಿವರ..

ಸಿಸಿಎಲ್ 10ನೇ ಸೀಸನ್ ಫೆಬ್ರವರಿ 23 ರಿಂದ ಶುರುವಾಗಿ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್ ಸ್ಟಾರ್​ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಯುಎಇಯ ಶಾರ್ಜಾದಲ್ಲಿ ಲೀಗ್​ನ ಮೂರು ಪಂದ್ಯಗಳು ನಡೆಯಲಿವೆ. ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್​ನಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲ್ಲಿವೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕರ್ನಾಟಕ ಬುಲ್ಡೋಜರ್ಸ್ ಮೊದಲ ಪಂದ್ಯಾವಳಿ ಇದೇ 25ರಂದು ನಡೆಯುತ್ತಿದ್ದು, ಮುಂಬೈ ಹೀರೋಸ್ ಎದುರು ಸೆಣಸಾಡಲಿದೆ.

ತಂಡಗಳು ಯಾವುವು?

ಮುಂಬೈ ಹೀರೋಸ್, ಕೇರಳ ಸ್ಟ್ರೈಕರ್ಸ್, ತೆಲುಗು ವಾರಿಯರ್ಸ್, ಭೋಜ್ಪುರಿ ದಬಾಂಗ್ಸ್, ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್, ಚೆನ್ನೈ ರೈನೋಸ್, ಪಂಜಾಬ್ ದಿ ಶೇರ್

‘ಮುಂಬೈ ಹೀರೋಸ್’ ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ‘ಕರ್ನಾಟಕ ಬುಲ್ಡೋಜರ್ಸ್’ ಟೀಮ್ ಗೆ ಪ್ರದೀಪ್ ಕ್ಯಾಪ್ಟನ್ ಆಗಿದ್ದಾರೆ. ಮೋಹನ್ ಲಾಲ್ ಸಹ-ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಲಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರು ‘ಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ಟೀಮ್ ಗೆ ಜಿಸ್ಸು ಸೇನ್​ಗುಪ್ತ ಕ್ಯಾಪ್ಟನ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ