ಱಪರ್ ಚಂದನ್ ಶೆಟ್ಟಿ ಮತ್ತು ಚಂದನ್ ಬೊಂಬೆ ನಿವೇದಿತ ಗೌಡ ಹೊಸ ಬಾಲಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಮೈಸೂರಿನಲ್ಲಿ ಈ ಜೋಡಿಯ ಆರತಕ್ಷತೆ ನಡೆಯಲಿದೆ. ಹಾಗಿದ್ರೆ, ಚಂದನ್ ನಿವೇದಿತ ಮದುವೆಯ ವಿಶೇಷತೆಗಳೇನು ಅನ್ನೋದ್ರ ಕಂಪ್ಲಿಟ್ ಡೀಟೈಲ್ಸ್ ಈ ಸ್ಟೋರಿಯಲ್ಲಿದೆ.
ನಿವೇದಿತ, ಚಂದನ್ ಮದುವೆ ಇಂದು ಮತ್ತು ನಾಳೆ ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ನ್ಯೂ ಸ್ಪೆಕ್ಟ್ರಾ ಕನ್ವೆಷನ್ ಹಾಲ್ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಇಂದು ಸಂಜೆ 7 ಗಂಟೆಯ ನಂತ್ರ ಆರತಕ್ಷತೆ ಕಾರ್ಯಮ ನಡೆಯಲಿದೆ. ಮತ್ತು ಫೆಬ್ರವರಿ 26 ಅಂದ್ರೆ ನಾಳೆ ಬೆಳಗ್ಗೆ ಮುಹೂರ್ಥ ಜರುಗಲಿದೆ.
ನಾಳೆ ಬೆಳಿಗ್ಗೆ ಎಂಟು ಹದಿನೈದರಿಂದ ಒಂಭತ್ತು ಗಂಟೆಯ ನಡುವಿನ ಶುಭಮೀನಾ ಲಗ್ನದಲ್ಲಿ ಕಲ್ಯಾಣ ಮುಹೂರ್ಥವನ್ನ ನಿಗಧಿ ಪಡಿಸಲಾಗಿದೆ. ದಸರ ಸಂಭ್ರಮದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ರು. ನಂತ್ರ ಮೈಸೂರಿನಲ್ಲಿ ಮದುವೆ ನಿಶ್ವಿತಾರ್ಥವನ್ನು ಮಾಡಿಕೊಂಡ್ರು. ಈಗ ಮದುವೆಯನ್ನೂ ಕೂಡ ಮೈಸೂರಿನಲ್ಲೇ ಮಾಡಿಕೊಳ್ತಿದೆ ಈ ಜೋಡಿ.
ಗುರುಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಈ ಚಂದನ್ ಮತ್ತು ನಿವೇದಿತ ಕಲ್ಯಾಣ ಅದ್ದೂರಿಯಾಗಿ ಜರುಗಲಿದೆ. ಈ ನವ ಜೋಡಿಯ ಮದುವೆಗೆ ಸಿನಿಮಾರಂಗದ ಮತ್ತು ರಾಜಕೀಯ ಗಣ್ಯರು ಸಾಕ್ಷಿ ಆಗಲಿದ್ದಾರೆ.