‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೆ ಚಂದನ್​ ಶೆಟ್ಟಿ ಹೀರೋ; ಕ್ಯಾಂಪಸ್​ನಲ್ಲೇ ಬಿಡುಗಡೆ ಆಯ್ತು ಶೀರ್ಷಿಕೆ

ಚಂದನ್​ ಶೆಟ್ಟಿ ನಟಿಸಲಿರುವ ಹೊಸ ಸಿನಿಮಾಗೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂದು ಟೈಟಲ್​ ಇಡಲಾಗಿದೆ. ರಾಜ್ಯದಲ್ಲಿನ ಹಲವು ಕಾಲೇಜ್​ಗಳಲ್ಲಿ ಇರುವ ವಿದ್ಯಾರ್ಥಿಗಳು ಈ ಸಿನಿಮಾದ ಟೈಟಲ್​ ಅನ್ನು ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ ಸೋಶಿಯಲ್​ ಮೀಡಿಯಾ ಮೂಲಕ ಆ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ. ಈ ಪ್ರಯತ್ನ ಗಮನ ಸೆಳೆದಿದೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೆ ಚಂದನ್​ ಶೆಟ್ಟಿ ಹೀರೋ; ಕ್ಯಾಂಪಸ್​ನಲ್ಲೇ ಬಿಡುಗಡೆ ಆಯ್ತು ಶೀರ್ಷಿಕೆ
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Aug 25, 2023 | 4:21 PM

ಸಂಗೀತ ನಿರ್ದೇಶಕ, ರ‍್ಯಾಪ್​ ಸಿಂಗರ್​ ಚಂದನ್ ಶೆಟ್ಟಿ (Chandan Shetty) ಅವರು ನಟನೆ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆ್ಯಂಗ್ರಿ ಎಂಗ್​ ಮ್ಯಾನ್​ ರೀತಿ ಕಾಣಿಸಿಕೊಳ್ಳಲು ಅವರು ತಯಾರಾಗಿದ್ದಾರೆ. ಈ ರೀತಿಯ ಸುಳಿವನ್ನು ಒಂದಷ್ಟು ದಿನಗಳ ಹಿಂದೆಯೇ ಈ ಸಿನಿಮಾ ತಂಡ ಬಿಟ್ಟುಕೊಟ್ಟಿತ್ತು. ಚಿಕ್ಕದೊಂದು ಪ್ರೋಮೋ ಮೂಲಕ ಜನರ ಕುತುಹಲ ಕೆರಳಿಸುವ ಪ್ರಯತ್ನವನ್ನು ಮಾಡಿತ್ತು. ಅಂತೂ ಇಂತೂ ಆ ಸಿನಿಮಾದ (Chandan Shetty New Movie) ಟೈಟಲ್ ಈಗ ಅನಾವರಣ ಆಗಿದೆ. ಇದು ಕಾಲೇಜೊಂದರ ಸುತ್ತ ನಡೆಯುವ ಸಿನಿಮಾ ಆದ್ದರಿಂದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ, ಅದನ್ನು ವಿದ್ಯಾರ್ಥಿಗಳೇ ಬಿಡುಗಡೆ ಮಾಡಿ, ಖುಷಿಪಟ್ಟಿದ್ದಾರೆ. ಈ ಸಿನಿಮಾಗೆ ಯುವ ಡೈರೆಕ್ಟರ್​ ಅರುಣ್ ಅಮುಕ್ತ ಅವರು ನಿರ್ದೇಶನ ಮಾಡುತ್ತಿದ್ದಾರೆ.

ನಿರ್ದೇಶಕ ಅರುಣ್ ಅಮುಕ್ತ ಅವರು ಈ ಹಿಂದೆ ಶ್ರೀಮುರಳಿ ನಟನೆಯ ‘ಲೂಸ್​ಗಳು’ ಸಿನಿಮಾವನ್ನು ನಿರ್ದೇಶಿಸಿದ್ದರು. ಅವರು ಈಗ ಈ ಕಾಲದ ಟ್ರೆಂಡ್​ಗೆ ಸೂಕ್ತ ಆಗುವಂತಹ ಹೊಸ ರೀತಿಯ ಕಥೆಯೊಂದನ್ನು ಇಟ್ಟುಕೊಂಡು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಈ ಟೈಟಲ್​ ಬಿಡುಗಡೆ ವಿಚಾರದಲ್ಲೇ ಸಿನಿಮಾ ತಂಡ ಒಂದಷ್ಟು ಕ್ರಿಯೇಟಿವ್​ ಆದಂತಹ ಹಾದಿಯನ್ನು ಅನುಸರಿಸಿದೆ. ರಾಜ್ಯದಲ್ಲಿನ ಹಲವು ಕಾಲೇಜ್​ಗಳಲ್ಲಿ ಇರುವ ವಿದ್ಯಾರ್ಥಿಗಳು ಈ ಸಿನಿಮಾದ ಟೈಟಲ್​ ಅನ್ನು ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ ಸೋಶಿಯಲ್​ ಮೀಡಿಯಾ ಮೂಲಕ ಆ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ. ಈ ಪ್ರಯತ್ನ ಗಮನ ಸೆಳೆದಿದೆ.

ಟೈಟಲ್​ ಲಾಂಚ್​ ವಿಡಿಯೋ:

ಶಾಲಾ-ಕಾಲೇಜಿನ ಕ್ಯಾಂಪಸ್​ ಕಥೆಗಳಿಗೆ ಪ್ರೇಕ್ಷಕರು ಯಾವಾಗಲೂ ಮೆಚ್ಚುಗೆ ಸೂಚಿಸುತ್ತಾರೆ. ‘ಕಿರಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮುಂತಾದ ಸಿನಿಮಾಗಳು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಆ ಬಳಿಕ ಕೆಲವು ವರ್ಷಗಳ ಕಾಲ ಆ ರೀತಿಯ ಚಿತ್ರಗಳು ಬಿಡುಗಡೆ ಆಗಿರಲಿಲ್ಲ. ಕೆಲವೇ ದಿನಗಳ ಹಿಂದೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಡೇರ್​ಡೆವಿಲ್ ಮುಸ್ತಫಾ’ ರೀತಿಯ ಕಾಲೇಜು ಕೇಂದ್ರಿತ ಕಥೆ ಇರುವ ಸಿನಿಮಾಗಳು ಯಶಸ್ವಿ ಆಗಿವೆ. ಈ ಥರಹದ ಚಿತ್ರಗಳ ಕೊರತೆಯನ್ನು ಒಂದು ಮಟ್ಟಿಗೆ ನೀಗಿಸಿದಂತೆ ಆಗಿದೆ. ಅದೇ ರೀತಿ ದೊಡ್ಡ ಗೆಲುವನ್ನು ಪಡೆಯುವ ಭರವಸೆಯಿಂದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಅನೌನ್ಸ್​ ಆಗಿದೆ.

ಇದನ್ನೂ ಓದಿ: Chandan Shetty: ಚಂದನ್ ಶೆಟ್ಟಿ ಈಗ ‘ಸೂತ್ರಧಾರಿ’; 2ನೇ ಚಿತ್ರದಲ್ಲಿ ಸಿಕ್ತು ಪೊಲೀಸ್​ ಅಧಿಕಾರಿ ಪಾತ್ರ

ಚಂದನ್​ ಶೆಟ್ಟಿ ಜೊತೆ ಅಮರ್, ಮಾನಸಿ, ಭಾವನಾ, ವಿವಾನ್, ಸುನೀಲ್ ಪುರಾಣಿಕ್, ಭವ್ಯ, ಅರವಿಂದ್​ ರಾವ್, ರಘು ರಾಮನಕೊಪ್ಪ, ಸಿಂಚನಾ, ಕಾಕ್ರೋಚ್ ಸುಧಿ, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜೇತ್ ಕೃಷ್ಣ, ಶಶಾಂಕ್ ಶೇಷಗಿರಿ ಮತ್ತು ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಬ್ರಮಣ್ಯ ಕುಕ್ಕೆ ಹಾಗೂ ಎ.ಸಿ. ಶಿವಲಿಂಗೇಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕುಮಾರ್ ಗೌಡ ಅವರ ಛಾಯಾಗ್ರಹಣ, ಪವನ್ ಗೌಡ ಸಂಕಲನ, ಟೈಗರ್ ಶಿವು ಮತ್ತು ನರಸಿಂಹ ಅವರ ಸಾಹಸ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಭರ್ಜರಿ’ ಚೇತನ್ ಕುಮಾರ್​ ಹಾಗೂ ವಾಸುಕಿ ವೈಭವ್ ಅವರು ಸಾಹಿತ್ಯ ಬರೆಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ