Dhruva Sarja: ಮತ್ತೆ ತಂದೆ ಆಗಲಿದ್ದಾರೆ ಧ್ರುವ; ಖುಷಿ ಸುದ್ದಿ ಕೊಟ್ಟ ಸರ್ಜಾ ಕುಟುಂಬ
2019ರಲ್ಲಿ ಧ್ರುವ ಮತ್ತು ಪ್ರೇರಣಾ ಮದುವೆ ಆದರು. ಕಳೆದ ವರ್ಷ ಅಕ್ಟೋಬರ್ 2ರಂದು ಅವರಿಗೆ ಹೆಣ್ಣು ಮಗು ಜನಿಸಿತು. ಈಗ ಧ್ರುವ ಹಾಗೂ ಪ್ರೇರಣಾ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರೇರಣಾ ಮತ್ತೆ ತಾಯಿ ಆಗುತ್ತಿದ್ದಾರೆ.
ನಟ ಧ್ರುವ ಸರ್ಜಾ (Dhruva Sarja) ಅವರು ಸ್ಯಾಂಡಲ್ವುಡ್ನಲ್ಲಿ ಸಖತ್ ಬ್ಯುಸಿ ಇದ್ದಾರೆ. ಸದ್ಯ ‘ಮಾರ್ಟಿನ್’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ಅಭಿಮಾನಿಗಳಿಗೆ ಖುಷಿ ಸುದ್ದಿ ಒಂದನ್ನು ನೀಡಿದ್ದಾರೆ. ಅವರು ಮತ್ತೊಮ್ಮೆ ತಂದೆ ಆಗುತ್ತಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಸೆಪ್ಟೆಂಬರ್ನಲ್ಲಿ ಸರ್ಜಾ ಕುಟುಂಬಕ್ಕೆ (Sarja Family) ಹೊಸ ಸದಸ್ಯನ ಆಗಮನ ಆಗಲಿದೆ.
2019ರಲ್ಲಿ ಧ್ರುವ ಮತ್ತು ಪ್ರೇರಣಾ ಮದುವೆ ಆದರು. ಕಳೆದ ವರ್ಷ ಅಕ್ಟೋಬರ್ 2ರಂದು ಅವರಿಗೆ ಹೆಣ್ಣು ಮಗು ಜನಿಸಿತು. ಈಗ ಧ್ರುವ ಹಾಗೂ ಪ್ರೇರಣಾ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರೇರಣಾ ಮತ್ತೆ ತಾಯಿ ಆಗುತ್ತಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ ಧ್ರುವ.
ಗ್ರಾಫಿಕ್ಸ್ ವಿಡಿಯೋ ಒಂದನ್ನು ಮಾಡಲಾಗಿದೆ. ಎಲ್ಲರಿಗೂ ಒಂದು ಸರ್ಪ್ರೈಸ್ ಇದೆ ಎಂದು ಮೊದಲು ಹೇಳಲಾಗಿದೆ. ವಿಡಿಯೋ ಕೊನೆಯಲ್ಲಿ ಧ್ರುವ ಮಗಳನ್ನು ಎತ್ತಿಕೊಂಡಿರುತ್ತಾರೆ. ವಿಡಿಯೋ ಕೊನೆಯಲ್ಲಿ ಪ್ರೇರಣಾ ಪ್ರೆಗ್ನೆಂಟ್ ಅನ್ನೋ ವಿಚಾರವನ್ನು ಧ್ರುವ ರಿವೀಲ್ ಮಾಡುತ್ತಾರೆ. ಸದ್ಯ ಧ್ರುವ ಸರ್ಜಾಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ. ಸೆಪ್ಟೆಂಬರ್ನಲ್ಲಿ ಮಗು ಜನಿಸಲಿದೆ ಎಂದು ಧ್ರುವ ತಿಳಿಸಿದ್ದಾರೆ.
View this post on Instagram
ಇದನ್ನೂ ಓದಿ: Dhruva Sarja: ಜಿಮ್ನಲ್ಲಿ ಧ್ರುವ ಸರ್ಜಾ ಸಖತ್ ವರ್ಕೌಟ್; ಇಲ್ಲಿದೆ ವೈರಲ್ ವಿಡಿಯೋ
ಧ್ರುವ ಸರ್ಜಾಗೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮಾರ್ಟಿನ್’ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಈ ಚಿತ್ರ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಇದರ ಜೊತೆಗೆ ‘ಕೆಡಿ’ ಸಿನಿಮಾ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಅವರು ಖಡಕ್ ವಿಲನ್ ಪಾತ್ರದ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ