Meghana Raj: ಮೇಘನಾ ರಾಜ್​ ಕೈ ಮೇಲೆ ಶಾಶ್ವತವಾಗಿ ಅಚ್ಚಾಯಿತು ಚಿರು, ರಾಯನ್​ ಹೆಸರು; ಹೇಗಿದೆ ನೋಡಿ ಟ್ಯಾಟೂ

Meghana Raj Tattoo: ರಾಯನ್​ ರಾಜ್​ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರು ಮೇಘನಾ ರಾಜ್ ಬದುಕಿನ ಪ್ರಮುಖ ವ್ಯಕ್ತಿಗಳು. ಅವರಿಬ್ಬರ ಹೆಸರುಗಳು ಮೇಘನಾ ಕೈಮೇಲೆ ಶಾಶ್ವತವಾಗಿ ಅಚ್ಚಾಗಿವೆ.

Meghana Raj: ಮೇಘನಾ ರಾಜ್​ ಕೈ ಮೇಲೆ ಶಾಶ್ವತವಾಗಿ ಅಚ್ಚಾಯಿತು ಚಿರು, ರಾಯನ್​ ಹೆಸರು; ಹೇಗಿದೆ ನೋಡಿ ಟ್ಯಾಟೂ
ಮೇಘನಾ ರಾಜ್, ರಾಯನ್ ರಾಜ್ ಸರ್ಜಾ
Edited By:

Updated on: Aug 26, 2022 | 2:10 PM

ನಟಿ ಮೇಘನಾ ರಾಜ್​ (Meghana Raj) ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಜೀವನದಲ್ಲಿ ಆದ ಕಹಿ ಘಟನೆಗಳನ್ನು ಎದುರಿಸಿ ಅವರು ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಿರುತೆರೆ ಶೋಗಳ ಜಡ್ಜ್​ ಆಗಿಯೂ ಅವರು ಸಕ್ರಿಯರಾಗಿದ್ದಾರೆ. ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರಲು ಅವರು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ತಮ್ಮ ಪ್ರತಿ ದಿನದ ಚಟುವಟಿಕೆಗಳ ಬಗ್ಗೆ ಅಪ್​ಡೇಟ್​ ನೀಡುತ್ತಾರೆ. ಪುತ್ರ ರಾಯನ್​ ರಾಜ್​ ಸರ್ಜಾ (Raayan Raj Sarja) ಮಾಡುವ ಹಲವು ತುಂಟಾಟಗಳ ವಿಡಿಯೋಗಳನ್ನು ಅವರು ಪೋಸ್ಟ್​ ಮಾಡುತ್ತಾರೆ. ಆತನ ಫೋಟೋಗಳು ಸಖತ್​ ವೈರಲ್​ ಆಗುತ್ತವೆ. ಇನ್ನು, ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅವರ ನೆನಪುಗಳು ಮೇಘನಾ ರಾಜ್​ ಹೃದಯದಲ್ಲಿ ಎಂದೆಂದಿಗೂ ಹಸಿರಾಗಿ ಇರಲಿವೆ. ಅದಕ್ಕೆ ಸಾಕ್ಷಿ ಎಂಬಂತೆ ಅವರು ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಮೇಘನಾ ರಾಜ್​ ಸರ್ಜಾ ಅವರು ಸಿನಿಮಾ ಕೆಲಸಗಳಿಗೆ ಕೊಂಚ ಬಿಡುವು ನೀಡಿ ವಿದೇಶಕ್ಕೆ ತೆರಳಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿ ಆಗಿದ್ದಾರೆ. ಅಲ್ಲಿಂದಲೇ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರು ಶೇರ್​ ಮಾಡಿಕೊಂಡಿರುವ ಟ್ಯಾಟೂ ಫೋಟೋ ಸಖತ್​ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
Raayan Raj Sarja: ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸಿದ ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ವಿಡಿಯೋ
Meghana Raj: ಅಮ್ಮ ಅಂತ ಹೇಳಿಕೊಟ್ರೂ ಅಪ್ಪ ಎನ್ನುತ್ತಾನೆ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ಮೇಘನಾ ರಾಜ್​ ಮಗನ ಕ್ಯೂಟ್​ ವಿಡಿಯೋ
‘ಡಾನ್ಸಿಂಗ್​ ಚಾಂಪಿಯನ್​’ ಶೋ​ ನಡುವೆ ಮೇಘನಾ ರಾಜ್​ ಫೋಟೋಶೂಟ್​; ಇಲ್ಲಿವೆ ಚೆಂದದ ಫೋಟೋಗಳು
ರಾಯನ್​ ಸರ್ಜಾಗೆ ಮಾತು ಕಲಿಸಿದ ಮೇಘನಾ ರಾಜ್​; ಇಲ್ಲಿದೆ ವಿಡಿಯೋ

ಚಿರಂಜೀವಿ ಸರ್ಜಾ ಮತ್ತು ರಾಯನ್​ ರಾಜ್​ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರುವಂತೆ ಮೇಘನಾ ರಾಜ್​ ಅವರು ಈ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಬದುಕಿನಲ್ಲಿ ಇವರಿಬ್ಬರು ತುಂಬ ಪ್ರಮುಖ ವ್ಯಕ್ತಿಗಳು. ವಿಶೇಷವಾದ ವಿನ್ಯಾಸದಲ್ಲಿ ಇರುವ ಈ ಟ್ಯಾಟೂ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟಿಗೆ ಪ್ರೀತಿ ತೋರುತ್ತಿದ್ದಾರೆ.

ಮೇಘನಾ ರಾಜ್​ ಅವರ ಎರಡನೇ ಮದುವೆ ಬಗ್ಗೆ ಕೆಲವು ಯೂಟ್ಯೂಬ್​ ಚಾನೆಲ್​ಗಳಲ್ಲಿ ಆಗಾಗ ಸುಳ್ಳು ಸುದ್ದಿ ಹರಡುತ್ತಲೇ ಇರುತ್ತದೆ. ಈ ಕುರಿತು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಅವರು ಉತ್ತರ ನೀಡಿದ್ದರು. ‘ಎಂದಿಗೂ ಮತ್ತೊಂದು ಮದುವೆಯ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ. ನಾಳೆ ಏನಾಗುತ್ತದೆ ಎಂಬ ಬಗ್ಗೆ ಯೋಚಿಸಲ್ಲ. ಮುಂದಿನ ದಿನಗಳಲ್ಲಿ ನನ್ನ ಜೀವನ ಹೇಗಿರಬಹುದು ಎಂಬ ಬಗ್ಗೆ ನಾನು ಚಿಂತಿಸಲ್ಲ’ ಎಂದು ಅವರು ಹೇಳಿದ್ದರು. ಈಗ ಚಿರು ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ತಮ್ಮ ನಿರ್ಧಾರ ಏನೆಂಬುದನ್ನು ಸ್ಪಷ್ಟವಾಗಿ ಹೇಳಿದಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.