Chiranjeevi Sarja: ಚಿರಂಜೀವಿ ಬರ್ತ್​ಡೇಗೆ ಸ್ವೀಟ್ ಆಗಿ ವಿಶ್ ಮಾಡಿದ ನಟಿ ಮೇಘನಾ ರಾಜ್

|

Updated on: Oct 17, 2023 | 11:36 AM

ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ಚಿರಂಜೀವಿ ಅವರು ಮೃತಪಟ್ಟರು. ಆದರೆ, ಮೇಘನಾ ರಾಜ್ ಹಾಗೂ ಅಭಿಮಾನಿಗಳ ಪಾಲಿಗೆ ಅವರಿನ್ನೂ ಜೀವಂತವಾಗಿದ್ದಾರೆ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.

Chiranjeevi Sarja: ಚಿರಂಜೀವಿ ಬರ್ತ್​ಡೇಗೆ ಸ್ವೀಟ್ ಆಗಿ ವಿಶ್ ಮಾಡಿದ ನಟಿ ಮೇಘನಾ ರಾಜ್
ಮೇಘನಾ-ಚಿರಂಜೀವಿ
Follow us on

ಇಂದು (ಅಕ್ಟೋಬರ್ 17) ಚಿರಂಜೀವಿ ಸರ್ಜಾ (Chiranjeevi Sarja) ಜನ್ಮದಿನ. ಈ ವಿಶೇಷ ದಿನದಂದು ಅಭಿಮಾನಿ ವಲಯದಲ್ಲಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಇಷ್ಟೇ ಅಲ್ಲ, ಅವರ ಪತ್ನಿ ನಟಿ ಮೇಘನಾ ರಾಜ್ ಕೂಡ ಪತಿಯನ್ನು ನೆನಪಿಸಿಕೊಂಡಿದ್ದಾರೆ. ಚಿರು ಜೊತೆ ಇದ್ದ ಫೋಟೋ ಹಂಚಿಕೊಂಡಿರುವ ಅವರು, ಪತಿಗೆ ಬರ್ತ್​ಡೇ ವಿಶ್ ಮಾಡಿದ್ದಾರೆ. ಈ ಫೋಟೋ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಅವರ ಅಭಿಮಾನಿ ವಲಯದಲ್ಲಿ ವೈರಲ್ ಆಗುತ್ತಿದೆ.

ಚಿರಂಜೀವಿ ಸರ್ಜಾ ಅವರು ಜನಿಸಿದ್ದು 1984ರ ಅಕ್ಟೋಬರ್ 17ರಂದು. ಅವರು ನಮ್ಮ ಜೊತೆ ಇದ್ದಿದ್ದರೆ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ಚಿರಂಜೀವಿ ಅವರು ಮೃತಪಟ್ಟರು. ಆದರೆ, ಮೇಘನಾ ರಾಜ್ ಹಾಗೂ ಅಭಿಮಾನಿಗಳ ಪಾಲಿಗೆ ಅವರಿನ್ನೂ ಜೀವಂತವಾಗಿದ್ದಾರೆ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.

ಚಿರಂಜೀವಿ ಸರ್ಜಾ ಅವರ ಜೊತೆ ಕಳೆದ ಕ್ಷಣದ ಫೋಟೋ ಹಂಚಿಕೊಂಡಿದ್ದಾರೆ ಮೇಘನಾ ರಾಜ್. ‘ಹ್ಯಾಪಿ ಬರ್ತ್​ಡೇ ಹಸ್ಬಂಡ್’ ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೋಗೆ ಬಗೆಬಗೆಯಲ್ಲಿ ಕಮೆಂಟ್​ಗಳು ಬಂದಿವೆ. ‘ಹುಟ್ಟುಹಬ್ಬದ ಶುಭಾಶಯಗಳು ಚಿರಂಜೀವಿ ಅವರೇ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಅವರು ಮೃತಪಟ್ಟ ನಂತರದಲ್ಲಿ ಮೇಘನಾ ರಾಜ್ ಮತ್ತೊಂದು ಮದುವೆ ಆಗಲಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿತು. ಆದರೆ, ಅದು ಸುಳ್ಳು ಎಂಬುದನ್ನು ಅವರು ಸ್ಪಷ್ಟನೆ ನೀಡಾಗಿದೆ. ಅವರಿಗೆ ಈಗ ಮಗ ರಾಯನ್ ರಾಜ್ ಸರ್ಜಾನೇ ಎಲ್ಲಾ ಆಗಿದ್ದಾನೆ. ಅವನ ಆರೈಕೆಯಲ್ಲಿ ಮೇಘನಾ ಬ್ಯುಸಿ ಆಗಿದ್ದಾರೆ. ಅವರು ರಾಯನ್​ನಲ್ಲಿ ಚಿರಂಜೀವಿಯನ್ನು ಕಾಣುತ್ತಿದ್ದಾರೆ.

ಇದನ್ನೂ ಓದಿ: ಅಳಿಯ ಚಿರಂಜೀವಿ ಸರ್ಜಾ ನಟಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ನೋಡಿ ಸುಂದರ್​ ರಾಜ್​ ಹೇಳಿದ್ದೇನು?

ಇತ್ತೀಚೆಗೆ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ರಿಲೀಸ್ ಆಗಿದೆ. ಈ ಕಾರಣಕ್ಕೂ ಚಿರಂಜೀವಿ ಅವರ ಬರ್ತ್​ಡೇ ಸಾಕಷ್ಟು ವಿಶೇಷ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ