Daali Dhananjay: ‘ಹೆಡ್​ ಬುಷ್​’ ತಂಡದ​ ವಿರುದ್ಧ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್​ನಿಂದ ದೂರು ದಾಖಲು

| Updated By: ಮದನ್​ ಕುಮಾರ್​

Updated on: Oct 26, 2022 | 8:06 PM

Head Bush | Veeragase: ವೀರಗಾಸೆ ಕಲಾವಿದರ ಮೇಲೆ ಹಲ್ಲೆ ಮಾಡುವ ದೃಶ್ಯಗಳು ಈ ಚಿತ್ರದಲ್ಲಿ ಇವೆ. ಇದನ್ನೇ ಕಾರಣವಾಗಿ ಇಟ್ಟುಕೊಂಡು ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ.

Daali Dhananjay: ‘ಹೆಡ್​ ಬುಷ್​’ ತಂಡದ​ ವಿರುದ್ಧ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್​ನಿಂದ ದೂರು ದಾಖಲು
ಡಾಲಿ ಧನಂಜಯ್
Follow us on

ಡಾನ್​ ಜಯರಾಜ್​ ಅವರ ಜೀವನದ ಕಥೆಯನ್ನು ಆಧರಿಸಿ ‘ಹೆಡ್​ ಬುಷ್​’ (Head Bush) ಸಿನಿಮಾ ಮೂಡಿಬಂದಿದೆ. ಅಕ್ಟೋಬರ್​ 21ರಂದು ಈ ಚಿತ್ರ ಬಿಡುಗಡೆ ಆಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಅದರ ಜೊತೆಗೆ ವಿವಾದವೂ ಹುಟ್ಟಿಕೊಂಡಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್​ (Daali Dhananjay) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಡಾನ್​ ಜಯರಾಜ್​ ಪಾತ್ರದಲ್ಲಿ ಧನಂಜಯ್​ ಮಿಂಚಿದ್ದಾರೆ. ಆದರೆ ವೀರಗಾಸೆ (Veeragase) ಕಲಾವಿದರ ಮೇಲೆ ಹಲ್ಲೆ ಮಾಡುವಂತಹ ದೃಶ್ಯಗಳು ಈ ಚಿತ್ರದಲ್ಲಿ ಇವೆ ಎಂಬ ಕಾರಣಕ್ಕೆ ಕೆಲವರು ಈ ಸಿನಿಮಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಕುರಿತಂತೆ ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗ ದಳದ ಕಾರ್ಯಕರ್ತರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ.

ಡಾನ್ ಜಯರಾಜ್​ ಪಾತ್ರದಲ್ಲಿರುವ ಧನಂಜಯ್​ ಅವರಿಂದ ವೀರಗಾಸೆಗೆ ಅವಮಾನ ಆಗಿದೆ. ಇದರಿಂದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗ ದಳದ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಟೌನ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಧನಂಜಯ್​ ಹೇಳೋದೇನು?

ಇದನ್ನೂ ಓದಿ
‘ಹೆಡ್​ ಬುಷ್​’ ಚಿತ್ರದ ವೀರಗಾಸೆ ವಿವಾದ: ಧನಂಜಯ್ ಸುದ್ದಿಗೋಷ್ಠಿಯ ಲೈವ್ ನೋಡಿ
ಮೂರು ದಿನಕ್ಕೆ ಬಂಗಾರದ ಬೆಳೆ ತೆಗೆದ ‘ಹೆಡ್​ ಬುಷ್​’ ಸಿನಿಮಾ; ಇಲ್ಲಿದೆ ಕಲೆಕ್ಷನ್ ವಿವರ
Head Bush: ಡಾಲಿ ಧನಂಜಯ್​ ಮೇಲೆ ಹೂಮಳೆ ಸುರಿಸಿದ ಫ್ಯಾನ್ಸ್​; ಚಿತ್ರದುರ್ಗದಲ್ಲಿ ‘ಹೆಡ್​ ಬುಷ್​’ ತಂಡಕ್ಕೆ ಭರ್ಜರಿ ಸ್ವಾಗತ
Head Bush: ಸೈಕಲ್​ ಏರಿ ಅಪ್ಪು ಸಮಾಧಿಗೆ ಬಂದ ಡಾಲಿ ಧನಂಜಯ್; ‘ಹೆಡ್​ ಬುಷ್​’ ಚಿತ್ರಕ್ಕೆ ಡಿಫರೆಂಟ್​ ಪ್ರಚಾರ

‘ವೀರಗಾಸೆ ನಾನು ಚಿಕ್ಕ ವಯಸ್ಸಿನಿಂದ ನೋಡುತ್ತಾ ಬರುತ್ತಿರುವ ಕಲೆ. ನನ್ನ ಸಿನಿಮಾ ರಿಲೀಸ್ ಸಂದರ್ಭದಲ್ಲಿ ವೀರಗಾಸೆ ಅವರನ್ನು ಕರೆಸಿದ್ದೆ. ನಮ್ಮೂರಿನ ಜಾತ್ರೆ, ದೇವಸ್ಥಾನದ ಕಾರ್ಯಕ್ರಮದಲ್ಲಿ ವೀರಗಾಸೆ ಇದ್ದೇ ಇರುತ್ತದೆ. ನನ್ನಿಂದ ಅದಕ್ಕೆ ಅವಮಾನ ಆಗುತ್ತದೆ ಎಂದಿದ್ದರೆ ನಾನು ಅಲ್ಲಿ ಅದನ್ನು ತರುತ್ತಲೇ ಇರಲಿಲ್ಲ’ ಎಂದು ಧನಂಜಯ್​ ಸ್ಪಷ್ಟನೆ ನೀಡಿದ್ದಾರೆ.

‘ಆ ಫೈಟ್ ಸಂದರ್ಭದಲ್ಲಿ ವೀರಗಾಸೆ ಹಾಕಿಕೊಂಡವರು ಹಿಂದೆ ಸರಿಯುತ್ತಾರೆ. ವೀರಗಾಸೆ ರೀತಿಯ ವೇಷ ಹಾಕಿದವರು ಮುಂದೆ ಬರುತ್ತಾರೆ. ವೀರಗಾಸೆ ವೇಳೆ ಚಪ್ಪಲಿ ಹಾಕುವಂತಿಲ್ಲ. ಆದರೆ, ಜಯರಾಜ್ ಮೇಲೆ ಹಲ್ಲೆ ಮಾಡಿದವರು ಶೂ ಧರಿಸಿರುತ್ತಾರೆ. ಆಗ ಅವನಿಗೆ ಇವರು ವೀರಗಾಸೆಯವರು ಅಲ್ಲ ಎಂಬುದು ಗೊತ್ತಾಗುತ್ತದೆ. ಆಗ ಅವರ ಮೇಲೆ ಜಯರಾಜ್​ ಹಲ್ಲೆ ಮಾಡುತ್ತಾನೆ. ವೀರಗಾಸೆಗೆ ಅವಮಾನ ಮಾಡುತ್ತಿರುವವರ ಮೇಲೆ ಜಯರಾಜ್ ಹೊಡೆದನೇ ಹೊರತು, ಜಯರಾಜ್ ವೀರಗಾಸೆಗೆ ಅವಮಾನ ಮಾಡಿಲ್ಲ’ ಎಂದು ಧನಂಜಯ್​ ಹೇಳಿದ್ದಾರೆ.

‘ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಧನಂಜಯ್​ ಪೋಸ್ಟ್​ ಮಾಡಿದ್ದಾರೆ. ಅನವಶ್ಯಕವಾಗಿ ವಿವಾದ ಮಾಡುವವರ ವಿರುದ್ಧ ‘ಹೆಡ್​ ಬುಷ್​’ ಚಿತ್ರದ ಬರಹಗಾರ ಅಗ್ನಿ ಶ್ರೀಧರ್​ ಕೂಡ ಗರಂ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:06 pm, Wed, 26 October 22