AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Ratna: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ; ಮುಖ್ಯ ಅತಿಥಿಯಾಗಿ ಬರಲು ಜೂ. ಎನ್​ಟಿಆರ್​, ರಜನಿಗೆ ಸರ್ಕಾರದ ಆಹ್ವಾನ

Karnataka Ratna | Puneeth Rajkumar: ನವೆಂಬರ್​ 1ರಂದು ಪುನೀತ್​ ರಾಜ್​ಕುಮಾರ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾರಂಭಕ್ಕೆ ಇಬ್ಬರು ಸ್ಟಾರ್​ ಕಲಾವಿದರಿಗೆ ರಾಜ್ಯ ಸರ್ಕಾರದ ಕಡೆಯಿಂದ ಆಹ್ವಾನ ಹೋಗಿದೆ.

Karnataka Ratna: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ; ಮುಖ್ಯ ಅತಿಥಿಯಾಗಿ ಬರಲು ಜೂ. ಎನ್​ಟಿಆರ್​, ರಜನಿಗೆ ಸರ್ಕಾರದ ಆಹ್ವಾನ
ರಜನಿಕಾಂತ್​, ಪುನೀತ್​ ರಾಜ್​ಕುಮಾರ್, ಜೂನಿಯರ್​ ಎನ್​ಟಿಆರ್​
TV9 Web
| Edited By: |

Updated on: Oct 26, 2022 | 5:54 PM

Share

ನಟ ಪುನೀತ್ ರಾಜ್​ಕುಮಾರ್​ (Puneeth Rajkumar) ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದಕ್ಕಾಗಿ ನವೆಂಬರ್​ 1ರಂದು ದಿನಾಂಕ ನಿಗದಿ ಆಗಿದೆ. ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ‘ಪವರ್​ ಸ್ಟಾರ್​’ ಅಭಿಮಾನಿಗಳು ಕಾದಿದ್ದಾರೆ. ಅಪ್ಪು ಫ್ಯಾನ್ಸ್​ಗೆ ಇದು ಹೆಮ್ಮೆಯ ಕ್ಷಣ. ಈ ಸಮಾರಂಭಕ್ಕೆ ಯಾರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ. ಖ್ಯಾತ ನಟ ರಜನಿಕಾಂತ್​ (Rajinikanth) ಅಥವಾ ಜೂನಿಯರ್​ ಎನ್​ಟಿಆರ್​ ಅವರು ಆಗಮಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ. ಈ ಇಬ್ಬರು ಸ್ಟಾರ್​ ಕಲಾವಿದರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಆಹ್ವಾನ ಹೋಗಿದೆ.

ಕನ್ನಡ ಚಿತ್ರರಂಗದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಮಾಡಿದ ಸಾಧನೆ ಅಪಾರ. ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳ ಮೂಲಕ ಜನರನ್ನು ರಂಜಿಸಿದರು. ಹೀರೋ ಆದ ಬಳಿಕ ಅವರ ಅಭಿಮಾನಿ ಬಳಗ ಹಿರಿದಾಯಿತು. ನಟನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಜನಮನ ಗೆದ್ದರು. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಕರುನಾಡಿನ ಯುವಜನತೆಗೆ ಅವರು ಸ್ಫೂರ್ತಿ ಆಗಿದ್ದರು. ನಿರ್ಮಾಪಕನಾಗಿ ಅನೇಕರಿಗೆ ಅವಕಾಶ ನೀಡಿದ್ದರು. ಇಷ್ಟೆಲ್ಲ ಸಾಧನೆ ಮಾಡಿದ ಅವರು ಕಳೆದ ವರ್ಷ ಅಕ್ಟೋಬರ್​ 29ರಂದು ನಿಧನರಾಗಿದ್ದು ತೀವ್ರ ನೋವಿನ ಸಂಗತಿ.

ಪುನೀತ್​ ನಿಧನರಾದಾಗ ಇಡೀ ಕರುನಾಡಿಗೆ ಕತ್ತಲು ಕವಿದಂತಾಯಿತು. ಅವರು ಇಲ್ಲ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮರಣೋತ್ತರವಾಗಿ ಅವರಿಗೆ ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿತು. ಪುನೀತ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿರುವುದು ವಿಶೇಷ. ಪುನೀತ್​ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಡಾ. ರಾಜ್​ಕುಮಾರ್​ ​ಕುಟುಂಬದ ಸದಸ್ಯರು ಈ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ನಿಧನರಾಗುವುದಕ್ಕೂ ಮುನ್ನ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಕೆಲಸಗಳಲ್ಲಿ ಪುನೀತ್​ ರಾಜ್​ಕುಮಾರ್​ ತೊಡಗಿಕೊಂಡಿದ್ದರು. ಇದು ಅವರ ಕನಸಿನ ಪ್ರಾಜೆಕ್ಟ್​. ಅಕ್ಟೋಬರ್​ 28ರಂದು ಈ ಡಾಕ್ಯುಮೆಂಟರಿ ರಿಲೀಸ್​ ಆಗುತ್ತಿದೆ. ಒಂದು ದಿನ ಮುನ್ನ, ಅಂದರೆ ಅ.27ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಆಯೋಜನೆಗೊಂಡಿದೆ. ಈಗಾಗಲೇ ಟಿಕೆಟ್​ ಬುಕಿಂಗ್​ ಆರಂಭ ಆಗಿದ್ದು, ಅಭಿಮಾನಿಗಳು ಮುಗಿಬಿದ್ದು ಬುಕ್​ ಮಾಡುತ್ತಿದ್ದಾರೆ. ‘ಗಂಧದ ಗುಡಿ’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.