Swathi Mutthina Male Haniye: ರಮ್ಯಾ ನಿರ್ಮಾಣದ ಮೊದಲ ಚಿತ್ರಕ್ಕೆ ವಿಘ್ನ; ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆ ಬಳಕೆಗೆ ಕೋರ್ಟ್​ ತಡೆ

| Updated By: ಮದನ್​ ಕುಮಾರ್​

Updated on: Jan 19, 2023 | 4:02 PM

SV Rajendra Singh Babu | Ramya Divya Spandana: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಗೆ ಸಂಬಂಧಿಸಿದಂತೆ ರಾಜೇಂದ್ರ ಸಿಂಗ್​ ಬಾಬು ಮತ್ತು ರಮ್ಯಾ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಲಾಗಿದೆ.

Swathi Mutthina Male Haniye: ರಮ್ಯಾ ನಿರ್ಮಾಣದ ಮೊದಲ ಚಿತ್ರಕ್ಕೆ ವಿಘ್ನ; ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆ ಬಳಕೆಗೆ ಕೋರ್ಟ್​ ತಡೆ
ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ರಮ್ಯಾ
Follow us on

ನಟಿ ರಮ್ಯಾ (Ramya Divya Spandana) ಅವರು ಕಳೆದ ವರ್ಷ ಬಹಳ ಉತ್ಸಾಹದಿಂದ ನಿರ್ಮಾಣ ಸಂಸ್ಥೆ ಆರಂಭಿಸಿದರು. ಅವರ ಬ್ಯಾನರ್​ನಿಂದ ಮೂಡಿಬರುತ್ತಿರುವ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಘೋಷಿಸಲಾಯಿತು. ಆದರೆ ಈಗ ಈ ಶೀರ್ಷಿಕೆಗೆ ವಿಘ್ನ ಎದುರಾಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Mutthina Male Haniye) ಟೈಟಲ್​ ಬಳಸಬಾರದು ಎಂದು ಹಿರಿಯ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್ ಬಾಬು ಅವರು ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ. ಹಾಗಾಗಿ ರಮ್ಯಾ ಅವರ ಈ ಚಿತ್ರಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆ ಬಳಸದಂತೆ ನ್ಯಾಯಾಲಯ ತಡೆ ನೀಡಿದ್ದನ್ನು ತಿಳಿಸಲು ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು (SV Rajendra Singh Babu) ಅವರು ಇಂದು (ಜ.19) ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

1990ರಲ್ಲಿ ‘ಬಣ್ಣದ ಗೆಜ್ಜೆ’ ಚಿತ್ರ ಬಿಡುಗಡೆ ಆಗಿತ್ತು. ಆ ಸಿನಿಮಾಗೆ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ ಮಾಡಿದ್ದರು. ‘ಬಣ್ಣದ ಗೆಜ್ಜೆ’ ಚಿತ್ರದ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಹಾಡು ಇಂದಿಗೂ ಫೇಮಸ್​. ಇದೇ ಶೀರ್ಷಿಕೆಯನ್ನು ಇಟ್ಟುಕೊಂಡು ನಟಿ ರಮ್ಯಾ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ರಾಜೇಂದ್ರ ಸಿಂಗ್​ ಬಾಬು ಅವರು ಈ ಶೀರ್ಷಿಕೆಯನ್ನು ತಾವು ನೋಂದಾಯಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆರಳೆಣಿಕೆ ದಿನಗಳಲ್ಲಿ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ತಂಡ

ಇದನ್ನೂ ಓದಿ
Raj B Shetty: ‘ಸ್ವಾತಿ ಮುತ್ತಿನ ಮಳೆ ಹನಿಯೇ’: ಇನ್ನಷ್ಟು ಪೋಸ್ಟರ್​ ಹಂಚಿಕೊಂಡ ಚಿತ್ರತಂಡ
ಬೆರಳೆಣಿಕೆ ದಿನಗಳಲ್ಲಿ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ತಂಡ
Actress Ramya: ‘ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ’; ಸ್ಪಷ್ಟನೆ ನೀಡಿದ ನಟಿ ರಮ್ಯಾ
Ramya: ರಾಜ್​ ಬಿ. ಶೆಟ್ಟಿ ಜತೆಗಿನ ಚಿತ್ರದ ನಟನೆಯಿಂದ ರಮ್ಯಾ ಔಟ್​; ಫ್ಯಾನ್ಸ್​ಗೆ ಬೇಸರ ತರಿಸಿತು ಈ ನಿರ್ಧಾರ

ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ‘ರೆಬಲ್​ ಸ್ಟಾರ್​’ ಅಂಬರೀಷ್​ ಹಾಗೂ ಸುಹಾಸಿನಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶೇಕಡ 80ರಷ್ಟು ಶೂಟಿಂಗ್​ ಮುಗಿದಿತ್ತು. ಆದರೆ ಅಂಬರೀಷ್​ ನಿಧನರಾದ ಬಳಿಕ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಈಗ ಈ ಶೀರ್ಷಿಕೆಯನ್ನು ಅಂಬರೀಷ್​ ಪುತ್ರ ಅಭಿಷೇಕ್​ ನಟನೆಯ ಸಿನಿಮಾಗೆ ಬಳಸಬೇಕು ಎಂಬುದು ರಾಜೇಂದ್ರ ಸಿಂಗ್​ ಬಾಬು ಅವರ ಆಲೋಚನೆ. ಆದರೆ ರಮ್ಯಾ ಕೂಡ ಇದೇ ಶೀರ್ಷಿಕೆಯಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ.

ಈ ವಿಷಯ ಕೋರ್ಟ್​ನಲ್ಲಿ ಇತ್ಯರ್ಥ ಆಗುವವರೆಗೆ ರಮ್ಯಾ ನಿರ್ಮಾಣದ ಚಿತ್ರವನ್ನು ಸೆನ್ಸಾರ್​ ಮಾಡಬಾರದು ಎಂದು ಸ್ಟೇ ತಂದಿರುವುದಾಗಿ ರಾಜೇಂದ್ರ ಸಿಂಗ್​ ಬಾಬು ತಿಳಿಸಿದ್ದಾರೆ. ಈ ಸಿನಿಮಾಗೆ ರಾಜ್​ ಬಿ. ಶೆಟ್ಟಿ ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಸಿರಿ ರವಿಕುಮಾರ್​ ಬಣ್ಣ ಹಚ್ಚಿದ್ದಾರೆ. ಚಿತ್ರದ ಹಲವು ಪೋಸ್ಟರ್​ಗಳು ಬಿಡುಗಡೆ ಆಗಿದ್ದು, ಗಮನ ಸೆಳೆದಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:02 pm, Thu, 19 January 23