AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya: ರಾಜ್​ ಬಿ. ಶೆಟ್ಟಿ ಜತೆಗಿನ ಚಿತ್ರದ ನಟನೆಯಿಂದ ರಮ್ಯಾ ಔಟ್​; ಫ್ಯಾನ್ಸ್​ಗೆ ಬೇಸರ ತರಿಸಿತು ಈ ನಿರ್ಧಾರ

Raj B Shetty: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ರಮ್ಯಾ ನಿರ್ಮಿಸುತ್ತಿದ್ದಾರೆ. ಆದರೆ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಅಧಿಕೃತ ಆಗಿದೆ.

Ramya: ರಾಜ್​ ಬಿ. ಶೆಟ್ಟಿ ಜತೆಗಿನ ಚಿತ್ರದ ನಟನೆಯಿಂದ ರಮ್ಯಾ ಔಟ್​; ಫ್ಯಾನ್ಸ್​ಗೆ ಬೇಸರ ತರಿಸಿತು ಈ ನಿರ್ಧಾರ
ರಮ್ಯಾ, ರಾಜ್ ಬಿ. ಶೆಟ್ಟಿ
TV9 Web
| Updated By: ಮದನ್​ ಕುಮಾರ್​|

Updated on: Oct 21, 2022 | 3:57 PM

Share

ನಟಿ ರಮ್ಯಾ (Ramya) ಅವರು ಅಭಿನಯದಿಂದ ದೂರ ಉಳಿದುಕೊಂಡು ಹಲವು ವರ್ಷಗಳೇ ಕಳೆದಿದ್ದರೂ ಕೂಡ ಅವರ ಅಭಿಮಾನಿ ಬಳಗ ಕಿರಿದಾಗಿಲ್ಲ. ಆದಷ್ಟು ಬೇಗ ಅವರನ್ನು ದೊಡ್ಡ ಪರದೆ ಮೇಲೆ ನೋಡಬೇಕು ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಅಂಥವರಿಗೆಲ್ಲ ಕೆಲವೇ ದಿನಗಳ ಹಿಂದೆ ಒಂದು ಗುಡ್​ ನ್ಯೂಸ್​ ಕೇಳಿಬಂದಿತ್ತು. ರಾಜ್​ ಬಿ. ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Mutthina Male Haniye) ಚಿತ್ರದಲ್ಲಿ ರಮ್ಯಾ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಈಗ ಆ ನಿರ್ಧಾರದಲ್ಲಿ ಬದಲಾವಣೆ ಆಗಿದೆ. ರಮ್ಯಾ ಬದಲು ಹೊಸ ನಟಿ ಸಿರಿ ರವಿಕುಮಾರ್​ (Siri Ravikumar) ಅವರು ಆಯ್ಕೆ ಆಗಿದ್ದಾರೆ. ಈ ಸುದ್ದಿ ಕೇಳಿ ಒಂದು ವರ್ಗದ ಅಭಿಮಾನಿಗಳಿಗೆ ಬೇಸರ ಆಗಿದೆ.

ರಮ್ಯಾ ಅವರು ನಿರ್ಮಾಪಕಿ ಆಗುವ ಮೂಲಕ ಚಿತ್ರರಂಗಕ್ಕೆ ಮರಳಿರುವುದು ಖುಷಿಯ ವಿಚಾರ. ‘ಆಪಲ್​ ಬಾಕ್ಸ್​ ಸ್ಟುಡಿಯೋಸ್​’ ಬ್ಯಾನರ್​ ಮೂಲಕ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ಅನೌನ್ಸ್​ ಮಾಡಿದಾಗ ಅಭಿಮಾನಿಗಳಿಗೆ ಆದ ಸಂತಸ ಅಷ್ಟಿಷ್ಟಲ್ಲ. ಅವರು ನಾಯಕಿಯಾಗಿ ನಟಿಸುತ್ತಾರೆ ಎಂದಾಗ ಆ ಖುಷಿ ಡಬಲ್​ ಆಗಿತ್ತು. ಆದರೆ ಕಾರಣಾಂತರಗಳಿಂದ ಅವರೀಗ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಅಧಿಕೃತ ಆಗಿದೆ. ‘ಆಪಲ್​ ಬಾಕ್ಸ್​ ಸ್ಟುಡಿಯೋಸ್​’ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಹೀರೋಯಿನ್​ ಬದಲಾಗಿದ್ದಕ್ಕೆ ಕಾರಣ ಏನು?

ಇದನ್ನೂ ಓದಿ
Image
Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ
Image
ಕನ್ನಡದ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ರಮ್ಯಾಗೆ 4ನೇ ಸ್ಥಾನ; ರಚಿತಾ, ಆಶಿಕಾ, ರಶ್ಮಿಕಾ, ರಾಧಿಕಾ ನಡುವೆ ನಂ.1 ಯಾರು?
Image
Ramya: ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡ ನಟಿ ರಮ್ಯಾ; ಕಾರಣ ಏನು?
Image
Ramya: ಕಡೆಗೂ ಶೂಟಿಂಗ್​ ಸೆಟ್​ಗೆ ಬಂದ ರಮ್ಯಾ: ಡಾಲಿ ಜತೆ ಇರುವ ವಿಡಿಯೋ ವೈರಲ್​; ಏನಿದು ಸಮಾಚಾರ?

‘ಆಪಲ್ ಬಾಕ್ಸ್ ಸ್ಟುಡಿಯೋಸ್ ಮತ್ತು ಲೈಟರ್ ಬುದ್ಧ ಫಿಲ್ಮ್ಸ್​ ಅವರ ಸಹಯೋಗದೊಂದಿಗೆ ಹೊರ ಬರುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಸಿರಿ ರವಿಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹೊಸ ಮುಖ ಪರಿಚಯ ಮಾಡಬೇಕೆಂದು ನಿರ್ಮಾಪಕಿ ರಮ್ಯಾ ಅವರೇ ಅಪೇಕ್ಷೆಪಟ್ಟರು. ಉದಯೋನ್ಮುಖ ಪ್ರತಿಭೆಗಳನ್ನು ಬೆಳಕಿಗೆ ತರುವ ಮುಖ್ಯ ಗುರಿಯನ್ನಿಟ್ಟುಕೊಂಡು ಪ್ರಾರಂಭಿಸಿದ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್. ಸ್ವಾತಿ ಮುತ್ತಿನ ಮಳೆ ಹನಿಯೇ ಒಂದು ಅಮೋಘವಾದ ಚಿತ್ರವಾಗಿ ನಿಮ್ಮ ಮುಂದೆ ಪ್ರಸ್ತುತ ಪಡಿಸಲು ನಾವು ಕಾತುರರಾಗಿದ್ದೇವೆ’ ಎಂದು ತಿಳಿಸಲಾಗಿದೆ.

ಶೀಘ್ರದಲ್ಲೇ ಕಮ್​ ಬ್ಯಾಕ್ ಮಾಡ್ತಾರೆ ರಮ್ಯಾ:

‘ನಮ್ಮ ಚಿತ್ರತಂಡ ಸೇರುತ್ತಿರುವ ಎಲ್ಲ ನಟರು ಮತ್ತು ತಂತ್ರಜ್ಞರಿಗೂ ಹೃದಯಪೂರ್ವಕ ಸ್ವಾಗತವನ್ನು ಕೋರುತ್ತೇವೆ. ವಿಶೇಷ ಸೂಚನೆ : ರಮ್ಯಾ ಅವರು ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನೀವೆಲ್ಲರೂ ಕಾಯುತ್ತಿದ್ದೀರೆಂದು ನಮಗೆ ಅರಿವಿದೆ’ ಎಂದು ‘ಆಪಲ್​ ಬಾಕ್ಸ್​ ಸ್ಟುಡಿಯೋಸ್​’ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆ ಮೂಲಕ ಮಾಹಿತಿ ನೀಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ