Puneetha Parva: ‘ಪುನೀತ ಪರ್ವ’ ವೇದಿಕೆಯಲ್ಲಿ ಏನೆಲ್ಲ ನಡೆಯಲಿದೆ? ಇಲ್ಲಿದೆ ಕಾರ್ಯಕ್ರಮಗಳ ಪೂರ್ಣ ಪಟ್ಟಿ

Gandhada Gudi: ಅಚ್ಚುಕಟ್ಟಾಗಿ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ವೇಳಾಪಟ್ಟಿ ಸಿದ್ಧವಾಗಿದೆ. ಏನೆಲ್ಲ ನಡೆಯಲಿದೆ ಎಂಬುದರ ಪೂರ್ತಿ ವಿವರ ಇಲ್ಲಿದೆ..

Puneetha Parva: ‘ಪುನೀತ ಪರ್ವ’ ವೇದಿಕೆಯಲ್ಲಿ ಏನೆಲ್ಲ ನಡೆಯಲಿದೆ? ಇಲ್ಲಿದೆ ಕಾರ್ಯಕ್ರಮಗಳ ಪೂರ್ಣ ಪಟ್ಟಿ
ಪುನೀತ ಪರ್ವ
Follow us
TV9 Web
| Updated By: ಮದನ್​ ಕುಮಾರ್​

Updated on: Oct 21, 2022 | 5:42 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅ.28ರಂದು ಬಿಡುಗಡೆ ಆಗಲಿದೆ. ಅದರ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮ ಇಂದು (ಅ.21) ನಡೆಯಲಿದೆ. ಇದಕ್ಕಾಗಿ ಬೆಂಗಳೂರಿನ ಅರಮನೆ ಮೈದಾನ (Palace Ground) ಸಜ್ಜಾಗಿದೆ. ಡಾ. ರಾಜ್​ಕುಮಾರ್​ ಕುಟುಂಬದ ಎಲ್ಲ ಸದಸ್ಯರು ಇದರಲ್ಲಿ ಭಾಗಿ ಆಗಲಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ರಾಜ್ಯದ ಮೂಲೆಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಪರಭಾಷೆಯ ಅನೇಕ ಸ್ಟಾರ್​ ನಟ-ನಟಿಯರು ಕೂಡ ಇದರಲ್ಲಿ ಹಾಜರಿ ಹಾಕಲಿದ್ದಾರೆ. ಸಂಜೆ 6.30ಕ್ಕೆ ‘ಪುನೀತ ಪರ್ವ’ (Puneetha Parva) ಕಾರ್ಯಕ್ರಮ ಆರಂಭ ಆಗಲಿದೆ.

60ರಿಂದ 80 ಅಡಿ ಇರುವ ಬೃಹತ್​ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಆರ್ಕೆಸ್ಟ್ರಾ ಮೂಲಕ ಕಾರ್ಯಕ್ರಮ ಶುರು ಆಗುತ್ತದೆ. 7 ನಿಮಿಷಗಳ ಕಾಲ ಇದು ನಡೆಯಲಿದೆ. ಬಳಿಕ ನಿರೂಪಕಿ ಅನುಶ್ರೀ ಅವರು ವೇದಿಕೆಗೆ ಎಂಟ್ರಿ ನೀಡುತ್ತಾರೆ. ಕಾರ್ಯಕ್ರಮದ ಬಗ್ಗೆ ಅವರು ಪರಿಚಯ ಮಾಡಿಕೊಡುತ್ತಾರೆ. ಬಳಿಕ ಎಲ್​ಇಡಿ ಪರದೆ ಮೇಲೆ ಎ.ವಿ. ಬಿತ್ತರ ಆಗಲಿದೆ. ನಂತರ 15 ಕಟೌಟ್​ಗಳು ಅನಾವರಣಗೊಳ್ಳಲಿವೆ. ಆ ಬಳಿಕ ಪುನೀತ್​ ರಾಜ್​ಕುಮಾರ್​ ಅವರ ಕುರಿತು ಸ್ಕಿಟ್​ ಪ್ರದರ್ಶನ ಇರಲಿದೆ.

ಸ್ಕಿಟ್​ ಬಳಿಕ ರಾಘವೇಂದ್ರ ರಾಜ್​ಕುಮಾರ್​ ಅವರು ವೇದಿಕೆಗೆ ಬರಲಿದ್ದಾರೆ. ‘ಬಾನ ದಾರಿಯಲ್ಲಿ..’ ಗೀತೆಯ ಕುರಿತು ವಿಶೇಷ ಮಾಹಿತಿಯನ್ನು ಹಂಚಿಕೊಂಡು, ನಂತರ ಹಾಡು ಹೇಳಲಿದ್ದಾರೆ. ಆ ನಂತರ ರಮೇಶ್​ ಅರವಿಂದ್​ ಅವರನ್ನು ವೇದಿಕೆಗೆ ಆಹ್ವಾನಿಸಲಾಗುತ್ತದೆ. ರಮೇಶ್​ ಅರವಿಂದ್​ ಅವರ ಧ್ವನಿಯಲ್ಲಿ ಪುನೀತ್ ರಾಜ್​ಕುಮಾರ್​ ಕುರಿತ ಎ.ವಿ. ಪ್ರಸಾರ ಆಗಲಿದೆ. ಬಳಿಕ ರಮೇಶ್ ಮಾತನಾಡುತ್ತಾರೆ. ನಂತರ ಡ್ಯಾನ್ಸ್ ಗ್ರೂಪ್​ಗಳನ್ನು ವೇದಿಕೆಗೆ ಬರಮಾಡಿಕೊಳ್ಳುತ್ತಾರೆ. ​ಶಿವರಾಜ್​ಕುಮಾರ್​ ಅವರು ಡ್ಯಾನ್ಸ್​ ಮಾಡಿ, ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಾರೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿ 75 ಕಟೌಟ್​; ಮೊದಲ ವರ್ಷದ ಪುಣ್ಯಸ್ಮರಣೆಗೆ ಫ್ಯಾನ್ಸ್​ ಸಿದ್ಧತೆ
Image
Puneeth Rajkumar: ‘ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಅಪ್ಪು ಫ್ಯಾನ್ಸ್​ ಮನವಿ; ‘ಪುನೀತ ಪರ್ವ’ಕ್ಕೆ ತಯಾರಿ ಜೋರು
Image
Puneeth Rajkumar: ‘ಗಂಧದ ಗುಡಿ’ ಪ್ರೀ-ರಿಲೀಸ್ ಇವೆಂಟ್​; ಸಿಎಂಗೆ ಆಹ್ವಾನ ನೀಡಿದ ಡಾ. ರಾಜ್​ಕುಮಾರ್ ಕುಟುಂಬ
Image
Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ

ಶಿವಣ್ಣ ಮಾತಾಡಿದ ನಂತರ ಗಾಯಕರಾದ ವಿಜಯ್​ ಪ್ರಕಾಶ್​, ಕುನಾಲ್​ ಗಾಂಜಾವಾಲಾ, ಟಿಪ್ಪು ಮತ್ತು ಅರ್ಮಾನ್​ ಮಲಿಕ್​ ಅವರು ಗಾನನಮನ ಸಲ್ಲಿಸುತ್ತಾರೆ. ಬಳಿಕ ರವಿಚಂದ್ರನ್​, ಶರತ್​ಕುಮಾರ್​, ಅನಂತ್​​ ನಾಗ್​ ಮಾತನಾಡುತ್ತಾರೆ. ರಮ್ಯಾ ಕೂಡ ವೇದಿಕೆಯಲ್ಲಿ ಡ್ಯಾನ್ಸ್​ ಮಾಡಲಿದ್ದಾರೆ. ಬಳಿಕ 6 ಸೆಲೆಬ್ರಿಟಿಗಳು ಅಪ್ಪು ಬಗ್ಗೆ ತಮ್ಮ ನುಡಿಗಳನ್ನು ಹಂಚಿಕೊಳ್ಳುತ್ತಾರೆ. ನಂತರ ಪ್ರಭುದೇವ ಅವರು ಬಂದು ಡ್ಯಾನ್ಸ್​ ಮಾಡುತ್ತಾರೆ. ಬಳಿಕ ವಿಜಯ್​ ಪ್ರಕಾಶ್​ ಅವರು ‘ಬೊಂಬೆ ಹೇಳುತೈತೆ..’ ಗೀತೆ ಹಾಡುತ್ತಾರೆ. ಆನಂತರ ಪ್ರಕಾಶ್​ ರೈ​ ಅವರು ‘ಗಂಧದ ಗುಡಿ’ ಬಗ್ಗೆ ಮಾತನಾಡುತ್ತಾರೆ. ಅದರ ಬೆನ್ನಲ್ಲೇ ಟ್ರೇಲರ್​ ಬಿತ್ತರ ಆಗುತ್ತದೆ.

ಟ್ರೇಲರ್​ ನೋಡಿದ ಬಳಿಕ ರಾಣಾ ದಗ್ಗುಬಾಟಿ, ಸೂರ್ಯ, ಯಶ್​, ಬಾಲಕೃಷ್ಣ ಅವರು ವೇದಿಕೆಯಲ್ಲಿ ಮಾತನಾಡುತ್ತಾರೆ. ಅದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಇರಲಿದೆ. ಆನಂತರ ರಾಘವೇಂದ್ರ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಅವರು ವಂದನಾರ್ಪಣೆ ಮಾಡುತ್ತಾರೆ. ಕೊನೆಯಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಎಂಟ್ರಿ ನೀಡುತ್ತಾರೆ. ಥೀಮ್​ ಸಾಂಗ್​ ಬಿತ್ತರ ಆಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್