ತಂದೆ-ತಾಯಿ ಸಮಾಧಿ ಬಳಿ ದುನಿಯಾ ವಿಜಯ್ ಹುಟ್ಟುಹಬ್ಬ; ರಿಲೀಸ್ ಆಯ್ತು ‘ಭೀಮ’ ಫಸ್ಟ್ ಲುಕ್
Duniya Vijay Birthday: ದುನಿಯಾ ವಿಜಯ್ ಬರ್ತ್ಡೇ ಪ್ರಯುಕ್ತ ‘ಭೀಮ’ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ಸೆಲೆಬ್ರಿಟಿಗಳು ಬರ್ತ್ಡೇನ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾರೆ. ಕೆಲವು ಬಾರಿ ಕುಟುಂಬದ ಜತೆ ಹುಟ್ಟುಹಬ್ಬ ಆಚರಿಸಿದರೆ ಇನ್ನೂ ಕೆಲವು ಸಲ ಅಭಿಮಾನಿಗಳ ಜತೆ ಸಮಯ ಕಳೆಯುತ್ತಾರೆ. ದುನಿಯಾ ವಿಜಯ್ (Duniya Vijay) ಅವರು ಭಿನ್ನವಾಗಿ ಬರ್ತ್ಡೇ (ಜನವರಿ 20) ಆಚರಿಸಿಕೊಂಡಿದ್ದಾರೆ. ತಂದೆ-ತಾಯಿ ಸಮಾಧಿ ಬಳಿ ಅವರು ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ. ಈ ವಿಶೇಷ ದಿನದಂದು ದುನಿಯಾ ವಿಜಯ್ ಮುಂದಿನ ಸಿನಿಮಾ ‘ಭೀಮ’ದ (Bheema Movie) ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ.
‘ಸಲಗ’ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ದುನಿಯಾ ವಿಜಯ್ ಯಶಸ್ಸು ಕಂಡರು. ಪಕ್ಕಾ ರೌಡಿಸಂ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿತ್ತು. ಈ ಚಿತ್ರ ಸೂಪರ್ ಹಿಟ್ ಆಯಿತು. ನಿರ್ದೇಶನದ ಜತೆಗೆ ಅವರು ಆ ಸಿನಿಮಾದಲ್ಲಿ ನಟಿಸಿದ್ದರು. ಈಗ ದುನಿಯಾ ವಿಜಯ್ ಅವರು ‘ಭೀಮ’ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅವರ ನಿರ್ದೇಶನದ ಎರಡನೇ ಸಿನಿಮಾ ಇದು.
ದುನಿಯಾ ವಿಜಯ್ ಬರ್ತ್ಡೇ ಪ್ರಯುಕ್ತ ‘ಭೀಮ’ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಚ್ಚುಗಳು ಝಳಪಿಸಿವೆ. ಇದು ಕೂಡ ರೌಡಿಸಂ ಕಥೆ ಎಂಬುದು ಟೀಸರ್ನಲ್ಲಿ ಸ್ಪಷ್ಟವಾಗುತ್ತದೆ. ಟೀಸರ್ ನೋಡಿದವರು ಇಷ್ಪಟ್ಟಿದ್ದಾರೆ. ಈ ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸುತ್ತಿದ್ದಾರೆ.
ವಿಶೇಷವಾಗಿ ಬರ್ತ್ಡೇ ಆಚರಿಸಿದ ದುನಿಯಾ ವಿಜಯ್
ದುನಿಯಾ ವಿಜಯ್ ಅವರು ಈ ಬಾರಿ ಬೆಂಗಳೂರು ಬಿಟ್ಟು ಹುಟ್ಟೂರಾದ ಆನೇಕಲ್ನ ಕುಂಬಾರನಹಳ್ಳಿಗೆ ತೆರಳಿದ್ದಾರೆ. ಅಲ್ಲಿರುವ ಅಪ್ಪ-ಅಮ್ಮನ ಸಮಾಧಿ ಬಳಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ತಂದೆ-ತಾಯಿ ಮೇಲೆ ದುನಿಯಾ ವಿಜಯ್ಗೆ ಅಪಾರ ಪ್ರೀತಿ ಇತ್ತು. ಅವರನ್ನು ಕಳೆದುಕೊಂಡ ನಂತರವೂ ಅವರು ಪ್ರೀತಿ ಮಾಡುವುದನ್ನು ನಿಲ್ಲಿಸಿಲ್ಲ ಎಂಬುದಕ್ಕೆ ಈ ಬರ್ತ್ಡೇ ಆಚರಣೆಯೇ ಸಾಕ್ಷಿ.
ಇದನ್ನೂ ಓದಿ: Duniya Vijay Birthday: ‘ತಂದೆ-ತಾಯಿಯೇ ನನ್ನ ಪಾಲಿನ ದೇವರು’: ಬರ್ತ್ಡೇ ಸಮಯದಲ್ಲಿ ಭಾವುಕರಾದ ದುನಿಯಾ ವಿಜಯ್
‘ತಂದೆ ತಾಯಿ ಇಲ್ಲದೇ ಇರುವುದಕ್ಕೆ ನೋವಿದೆ. ಅವರಿಗೆ ನಾನು ಕಟ್ಟಿರುವ ಸಣ್ಣ ದೇವಸ್ಥಾನ ಇದು. ಆ ಜಾಗದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದು ಖುಷಿ ಇದೆ. ಇಲ್ಲಿ ಅಭಿಮಾನಿಗಳು ಬಂದಿದ್ದಾರೆ. ಅವರ್ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅವರು ನನಗೋಸ್ಕರ ಬರ್ತಾರೆ’ ಎಂದಿದ್ದಾರೆ ದುನಿಯಾ ವಿಜಯ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ