ಡಿ ಬಾಸ್​ ದರ್ಶನ್​ ಅಭಿನಯದ Roberrt ಕಡೆಯಿಂದ ಗುರುವಾರ ಸಿಗುತ್ತಿದೆ ಎರಡು ಬಿಗ್​ ಅಪ್​ಡೇಟ್ಸ್​​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 9:42 PM

Roberrt Movie: ಈ ಬಗ್ಗೆ ಟ್ವೀಟ್​ ಮಾಡಿರುವ ಚಿತ್ರದ ನಿರ್ದೇಶಕ ತರುಣ್​ ಸುಧೀರ್​, ಗುರುವಾರ ಎರಡು ಬಿಗ್​ ಅಪ್​ಡೇಟ್ಸ್​​ ನೀಡುತ್ತಿದ್ದೆವೆ ಎಂದಿದ್ದಾರೆ. ಈ ಟ್ವೀಟ್​ ಬೆನ್ನಲ್ಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಡಿ ಬಾಸ್​ ದರ್ಶನ್​ ಅಭಿನಯದ Roberrt ಕಡೆಯಿಂದ ಗುರುವಾರ ಸಿಗುತ್ತಿದೆ ಎರಡು ಬಿಗ್​ ಅಪ್​ಡೇಟ್ಸ್​​
ದರ್ಶನ್
Follow us on

ನಟ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಶಿವರಾತ್ರಿ ಪ್ರಯುಕ್ತ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ. ಸರಿಯಾಗಿ ಒಂದು ತಿಂಗಳು ಇರುವಾಗಲೇ ಚಿತ್ರತಂಡ ದೊಡ್ಡ ಅಪ್​ಡೇಟ್​ ಒಂದನ್ನು ನೀಡುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಚಿತ್ರದ ನಿರ್ದೇಶಕ ತರುಣ್​ ಸುಧೀರ್​, ಗುರುವಾರ ಎರಡು ಬಿಗ್​ ಅಪ್​ಡೇಟ್ಸ್​​ ನೀಡುತ್ತಿದ್ದೆವೆ. ಯಾರಾದರೂ ಊಹೆ ಮಾಡಬಹುದೇ ಎಂದು ಕೇಳಿದ್ದಾರೆ. ಈ ಟ್ವೀಟ್​ ಬೆನ್ನಲ್ಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ತೆಲುಗು ಖಳ ಜಗಪತಿ ಬಾಬು ರಾಬರ್ಟ್​ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್​ನಲ್ಲೂ ಸಿನಿಮಾ ರಿಲೀಸ್​ ಆಗುತ್ತಿರುವುದರಿಂದ ಚಿತ್ರದ ಮೈಲೇಜ್​ ಅನ್ನು ಜಗಪತಿ ಬಾಬು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಫೆಬ್ರವರಿ 12ರಂದು ಜಗಪತಿ ಬಾಬು ಜನ್ಮದಿನ. ಈ ಕಾರಣಕ್ಕೆ ಅವರ ಫಸ್ಟ್​ಲುಕ್​ಅನ್ನು ಚಿತ್ರತಂಡ ರಿಲೀಸ್​ ಮಾಡುವ ಸಾಧ್ಯತೆ ಇದೆ.

ಫೆಬ್ರವರಿ 16 ಡಿ ಬಾಸ್​ ದರ್ಶನ್​ ಜನ್ಮದಿನ. ಅಂದು ಸಿನಿಮಾ ಟ್ರೈಲರ್​ ರಿಲೀಸ್​ ಆಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಎರಡು ಅಪ್​ಡೇಟ್​ಗಳು ನಾಳೆ ಸಿಗುವ ನಿರೀಕ್ಷೆ ಇದೆ. ಇದಲ್ಲದೆ, ತೆಲುಗು ಹಾಗೂ ಕನ್ನಡದಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್​ ಆಗಲಿದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ದರ್ಶನ್​ ನಟನೆಯ ರಾಬರ್ಟ್​ ಚಿತ್ರ ಕೊರೊನಾ ಹಿನ್ನೆಲೆಯಲ್ಲಿ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು. ದರ್ಶನ್​ ಹೀರೋ ಆಗಿ ಕಾಣಿಸಿಕೊಂಡರೆ, ಜಗಪತಿ ಬಾಬು ವಿಲನ್​. ಆಶಾ ಭಟ್​ ಚಿತ್ರದ ನಾಯಕಿ. ತರುಣ್​ ಸುಧೀರ್​ ನಿರ್ದೇಶನದಲ್ಲಿ 2017ರಲ್ಲಿ ತೆರೆಕಂಡ ಚೌಕ ಸಿನಿಮಾದಲ್ಲಿ ದರ್ಶನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಬರ್ಟ್. ಇದೇ ಪಾತ್ರದ ಹೆಸರನ್ನು ಇಟ್ಟುಕೊಂಡು ಸಿನಿಮಾ ಸಿದ್ಧವಾಗಿದೆ.

 

Actor Darshan ಚಾಲೆಂಜಿಂಗ್​ ಸ್ಟಾರ್​ ದರ್ಶನ್​ರಿಗೆ ಇಂದು ವಿಶೇಷ ದಿನ; 19 ವರ್ಷದ ಹಿಂದೆ ಈ ದಿನ ಮೊದಲ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದರು!​