ಮಿತಿಮೀರಿದ ದರ್ಶನ್ ಅಭಿಮಾನಿಗಳ ಹುಚ್ಚುತನ; ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್
ನಟ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಅವರನ್ನು ಇಡಲಾಗಿದೆ. ಇತ್ತ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹುಚ್ಚು ಅಭಿಮಾನವನ್ನು ತೋರಿಸುತ್ತಿದ್ದಾರೆ. ನಟನಿಗಾಗಿ ಅಭಿಮಾನಿ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದೆ.
ನಟ ದರ್ಶನ್ ಅಭಿಮಾನಿಗಳ ಹುಚ್ಚುತನ ಮಿತಿಮೀರಿದೆ. ದರ್ಶನ್ ಜೈಲು ಸೇರಿದಾಗಿನಿಂದಲೂ ಅವರು ಹತಾಶೆಗೊಂಡಿದ್ದಾರೆ. ಈ ಕಾರಣದಿಂದಲೇ ಜೈಲಿನ ಎದುರು ಫ್ಯಾನ್ಸ್ ನೆರೆಯುತ್ತಿದ್ದಾರೆ. ಅವರನ್ನು ಕೋರ್ಟ್ಗೆ ಕರೆದೊಯ್ಯುವಾಗ ಶೂಟಿಂಗ್ ನಡೆಯುತ್ತಿದೆಯೇನೋ ಎಂಬ ರೀತಿಯಲ್ಲಿ ‘ಡಿ ಬಾಸ್’ ಎನ್ನುವ ಘೋಷಣೆಗಳನ್ನು ಫ್ಯಾನ್ಸ್ ಕೂಗುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ನಾನಾ ರೀತಿಯಲ್ಲಿ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ ಮೇಲಿನ ಹುಚ್ಚು ಅಭಿಮಾನ ಮಿತಿ ಮೀರಿದೆ. ನಟನಿಗಾಗಿ ಅಭಿಮಾನಿ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದೆ.
‘Brand of sandalhood dboss fans Mysore’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಫೋಟೋ ಹಂಚಿಕೊಳ್ಳಲಾಗಿದೆ. ಒಂದು ವರ್ಷದ ಮಗವಿಗೆ ಖೈದಿ ರೀತಿಯ ಬಟ್ಟೆ ಹಾಕಿ ಪೋಟೋಶೂಟ್ ಮಾಡಿಸಲಾಗಿದೆ. ದರ್ಶನ್ಗೆ ನೀಡಿರೋ ವಿಚಾರಾಣಧೀನ ಖೈದಿ ಸಂಖ್ಯೆಯನ್ನು ಮಗುವಿಗೆ ಹಾಕಲಾಗಿದೆ. ಕೈ ಕೋಳ ಮಾದರಿ ಕೂಡ ಇಡಲಾಗಿದೆ. ಅಲ್ಲಿಯೇ ‘ಜೈ ಡಿಬಾಸ್’ ಎಂದು ಬರೆಯಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜನಸಾಮಾನ್ಯರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
View this post on Instagram
ಮಗುವಿಗೆ ಖೈದಿ ಪೊಟೋ ಶೂಟ್ ಮಾಡಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಏನು ಅರಿಯದ ಮಗುವನ್ನು ಖೈದಿ ಮಾಡಿದ್ದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ. ‘ಶಿಕ್ಷಣ ಮುಖ್ಯ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ‘ಇದು ಸರಿ ಅಲ್ಲ’ ಎಂದು ಬುದ್ಧಿವಾದ ಹೇಳಿದ್ದಾರೆ.
ಇದನ್ನೂ ಓದಿ: ‘ದರ್ಶನ್ ರಿಲೀಸ್ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಫ್ಯಾನ್ಸ್ ನಿತ್ಯ ಒಂದೊಂದು ಟ್ರೆಂಡ್ ಮಾಡಲಾಗುತ್ತಿದೆ. ಕೆಲವರು ಖೈದಿ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.