‘30 ವರ್ಷಗಳಿಂದ ಜಿಮ್ ಮಾಡಿದ ದೇಹ, ಏಕಾಏಕಿ ವರ್ಕೌಟ್ ಬಿಟ್ಟರೆ..’; ದರ್ಶನ್ ಬಗ್ಗೆ ಜಿಮ್ ರವಿ ಆತಂಕ

ದರ್ಶನ್​ಗೆ ಜಿಮ್​ನಲ್ಲಿ ಕೋಚ್​ಗಳು ಇದ್ದರು. ಸಿನಿಮಾಗೆ ತಕ್ಕಂತೆ ಅವರು ಬಾಡಿನ ಶೇಪ್ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಜೈಲಲ್ಲಿ ಯಾರೂ ಕೋಚ್ ಇಲ್ಲ. ಈ ಬಗ್ಗೆ ಜಿಮ್ ರವಿ ಅವರು ಮತನಾಡಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಮನೆಯ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಇದಕ್ಕೆ ಕೋರ್ಟ್ ಅನುಮತಿ ನೀಡಿರಲಿಲ್ಲ.

‘30 ವರ್ಷಗಳಿಂದ ಜಿಮ್ ಮಾಡಿದ ದೇಹ, ಏಕಾಏಕಿ ವರ್ಕೌಟ್ ಬಿಟ್ಟರೆ..’; ದರ್ಶನ್ ಬಗ್ಗೆ ಜಿಮ್ ರವಿ ಆತಂಕ
ದರ್ಶನ್- ಜಿಮ್ ರವಿ
Updated By: ರಾಜೇಶ್ ದುಗ್ಗುಮನೆ

Updated on: Jul 27, 2024 | 12:22 PM

ನಟ ದರ್ಶನ್ ಅವರು ಅರೆಸ್ಟ್ ಆಗಿ ಜೈಲಿನಲ್ಲಿ ಇದ್ದಾರೆ. ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಇದ್ದವರು. ಹೀಗಾಗಿ ಅವರು ಹೊರಗಿದ್ದಾಗ ಸರಿಯಾದ ರೀತಿಯಲ್ಲಿ ಆಹಾರ ಕ್ರಮ ಅನುಸರಿಸುತ್ತಿದ್ದರು. ಆದರೆ, ಈಗ ಜೈಲಿಗೆ ಸೇರಿರುವುದರಿಂದ ಅಲ್ಲಿ ನೀಡಿದ ಊಟವನ್ನು ಸ್ವೀಕರಿಸಬೇಕಿದೆ. ಅಂದುಕೊಂಡ ವರ್ಕೌಟ್ ಮಾಡೋಕೂ ಸಾಧ್ಯವಾಗುತ್ತಿಲ್ಲ. ದರ್ಶನ್ ಫಿಟ್ನೆಸ್ ಬಗ್ಗೆ, ಒಂದೊಮ್ಮೆ ಜಿಮ್ ಮಾಡದೆ ಇದ್ದರೆ ಆಗುವ ಸಮಸ್ಯೆಗಳ ಬಗ್ಗೆ ನಟ ಹಾಗೂ ಬಾಡಿಬಿಲ್ಡರ್ ಜಿಮ್ ರವಿ ಮಾತನಾಡಿದ್ದಾರೆ.

‘ದರ್ಶನ್ ಸರ್ ಜೊತೆ ಸುಂಟರಗಾಳಿ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಅವರ ಜೊತೆ 25 ದಿನ ಶೂಟಿಂಗ್ ಮಾಡಿದ್ದೇನೆ. ಆಗ ಅವರ ಜೊತೆ ವರ್ಕೌಟ್ ಮಾಡಿದ್ದೇನೆ. ದರ್ಶನ್ ಜೊತೆ ಆಹಾರ ಕ್ರಮ, ವರ್ಕೌಟ್ ಬಗ್ಗೆ ಮಾತಾಡಿದ್ದೇನೆ. ನಾ ಕಂಡಂತೆ ದರ್ಶನ್ ಅವರು ಜಿಮ್ ಬಗ್ಗೆ, ವರ್ಕೌಟ್ ಬಗ್ಗೆ ಅಡಿಕ್ಟ್ ಆಗಿದ್ದರು. ಸಡನ್ ಆಗಿ ಜಿಮ್ ಇಲ್ಲ, ವರ್ಕೌಟ್ ಇಲ್ಲ ಎಂದರೆ ಡಿಪ್ರೆಶನ್​ಗೆ ಹೋಗೋದು ಸಹಜ’ ಎಂದು ಆತಂಕ ಹೊರಹಾಕಿದ್ದಾರೆ ಜಿಮ್ ರವಿ.

‘ಅಷ್ಟು ವರ್ಷದಿಂದ ವರ್ಕೌಟ್ ಮಾಡಿದ ವ್ಯಕ್ತಿ ಸಡನ್ ಆಗಿ ಜಿಮ್ ಬಿಡೋಕೆ ಆಗುವುದಿಲ್ಲ. ಹಾಗಾದಾಗ ದೇಹ ಸಪೋರ್ಟ್ ಮಾಡುವುದಿಲ್ಲ. ಹೀಗಾಗಿ ಸಣ್ಣ-ಪುಟ್ಟ ವರ್ಕೌಟ್ ಮಾಡಲೇಬೇಕು. ಇರೋ ಜಾಗದಲ್ಲೇ ಪ್ರೀವರ್ಕೌಟ್, ಯೋಗ, ಧ್ಯಾನ ಮಾಡಿದ್ರೆ ಏನು ಸಮಸ್ಯೆ ಆಗುವುದಿಲ್ಲ’ ಎಂದಿದ್ದಾರೆ ರವಿ.

ಇದನ್ನೂ ಓದಿ: ವಿಗ್ ಹಾಕಿಸಿದ್ದೇ ದರ್ಶನ್​ಗೆ ಕಂಟಕ: ಕಾಳಿ ಉಪಾಸಕಿ ಚಂದಾ ಪಾಂಡೆ

ದರ್ಶನ್​ಗೆ ಜಿಮ್​ನಲ್ಲಿ ಕೋಚ್​ಗಳು ಇದ್ದರು. ಸಿನಿಮಾಗೆ ತಕ್ಕಂತೆ ಅವರು ಬಾಡಿನ ಶೇಪ್ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಜೈಲಲ್ಲಿ ಯಾರೂ ಕೋಚ್ ಇಲ್ಲ. ಈ ಬಗ್ಗೆ ಮಾತನಾಡಿರೋ ರವಿ, ‘ದರ್ಶನ್ ಕೇವಲ ವರ್ಕೌಟ್ ಮಾಡೊದಿಲ್ಲ. ಅವರಿಗೆ ಅವರೇ ಕೋಚ್. ಈ ಊಟಕ್ಕೆ ಯಾವ ವರ್ಕೌಟ್ ಮಾಡಹುದು ಎಂಬುದು ಅವರಿಗೆ ಚನ್ನಾಗಿ ತಿಳಿದಿರುತ್ತದೆ. ದರ್ಶನ್ ಅವರ ವರ್ಕೌಟ್​ಗೆ ತಕ್ಕಂತೆ ಅವರ ಊಟವೇ ಬೇರೆ ಆಗಿರುತ್ತದೆ. ಬಾಡಿಯನ್ನು ಯಾವ ರೀತಿ ರೆಡಿ ಮಾಡ್ಕೊಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಮನೆಯ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಇದಕ್ಕೆ ಕೋರ್ಟ್ ಅನುಮತಿ ನೀಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Sat, 27 July 24